MLC Election: ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್, ಎಡಪಂಥೀಯರು ನಿಸ್ಸೀಮರು: ಕೇಂದ್ರ ಸಚಿವ ಜೋಶಿ
* ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲ್ಲ
* ಯಾವ ನಾಯಕರ ಕುರಿತು ಪಠ್ಯದಿಂದ ತೆಗೆದಿಲ್ಲ
* ಸಿದ್ದರಾಮಯ್ಯ ಹಾಗೂ ಡಿಕೆಶಿ ಆಂತರಿಕ ಕಚ್ಚಾಟದಿಂದಲೇ ಕಾಂಗ್ರೆಸ್ ಪಕ್ಷ ದಿವಾಳಿ
ಧಾರವಾಡ(ಮೇ.27): ನಾರಾಯಣ ಗುರು, ಭಗತಸಿಂಗ್ ಹಾಗೂ ಇತರೆ ನಾಯಕರ ಕುರಿತಾದ ಪಾಠವನ್ನು ಪಠ್ಯದಿಂದ ತೆಗೆದಿಲ್ಲ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಎಡಪಂಥೀಯರು ನಿಸ್ಸೀಮರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಅವರ ನಾಮಪತ್ರ ಸಲ್ಲಿಕೆಗೂ ಮುಂಚೆ ಕಡಪಾ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸ್ವಾಂತಂತ್ರ ಬಂದು 58 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನೀವು ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಸುಭಾಶ್ಚಂದ್ರ ಬೋಸ್, ಬಾಲಗಂಗಾಧರ ತಿಲಕ್ ಅವರ ಹೆಸರುಗಳನ್ನು ಎಷ್ಟುಯೋಜನೆಗಳಿಗೆ ಇಟ್ಟಿದ್ದೀರಿ? ದೆಹಲಿ ಒಂದರಲ್ಲಿಯೇ 200 ಯೋಜನೆಗಳಿಗೆ ಇಂದಿರಾಗಾಂಧಿ, ರಾಜೀವಗಾಂಧಿ ಹಾಗೂ ಗಾಂಧಿ ಕುಟುಂಬದ ಹೆಸರು ನಾಮಕಾರಣ ಮಾಡಿದ್ದಾರೆ ಕಾಂಗ್ರೆಸ್ ಮುಖಂಡರು. ಇಂದು ಪಠ್ಯದ ಬಗ್ಗೆ ಲಘುವಾಗಿ ಮಾತನಾಡುವ ಹಾಗೂ ಟೀಕೆ ಮಾಡುವ ನಾಯಕರಿಗೆ ಬೇರಾವ ನಾಯಕರ ಹೆಸರುಗಳು ಅದರಲ್ಲೂ ಅಂಬೇಡ್ಕರ್ ಹೆಸರು ಸಹ ಸ್ಮರಣೆಗೆ ಬರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
Hubballi Accident ಹುಬ್ಬಳ್ಳಿ ಅಪಘಾತದಲ್ಲಿ ಮಡಿದ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ!
ಸಿದ್ದರಾಮಯ್ಯ ಕಂಪನಿ, ಕಾಂಗ್ರೆಸ್ ನಾಯಕರು ಹಾಗೂ ಎಡಪಂಥೀಯರು ರಾಜಕೀಯವಾಗಿ ಪಠ್ಯಪುಸ್ತಕವನ್ನು ಎಳೆದು ತರುತ್ತಿದ್ದಾರೆ. ರಾಜಕೀಯವಾಗಿ ಬಿಜೆಪಿ ವಿರೋಧಿ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಇನ್ನೆಂದಿಗೂ ಹೈಕಮಾಂಡ್ ಪುನಃ ಮುಖ್ಯಮಂತ್ರಿ ಮೋಡುವುದಿಲ್ಲ. ಹೀಗಾಗಿ ಅವರು ಆಶಾಢಭೂತಿತನ ಬಿಡಬೇಕು ಎಂದರು.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಂತರಿಕ ಕಚ್ಚಾಟದಿಂದಲೇ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವು ಇಲ್ಲ. ಭವಿಷ್ಯವಂತೂ ಮೊದಲೇ ಇಲ್ಲ ಎಂದು ಕಿಚಾಯಿಸಿದರು.