ರಾಹುಲ್‌ ಇಲ್ಲಿ ಪ್ರಯತ್ನ ಮಾಡುವುದಕ್ಕಿಂತ ಅಮೇಥಿಯಲ್ಲಿ ಸ್ವಲ್ಪ ಪ್ರಯತ್ನ ಮಾಡೋದು ಒಳ್ಳೆಯದು. ಅದರಿಂದ ಅವರ ಕುರ್ಚಿ ಇನ್ನಷ್ಟಾದರೂ ಗಟ್ಟಿಯಾಗುತ್ತದೆ: ಕಟೀಲ್‌

ಹಾಸನ(ನ.04): ರಾಹುಲ್‌ ಗಾಂ​ಧಿ ಅವರು ಕಾಲಿಟ್ಟಕಡೆಯಲ್ಲೆಲ್ಲಾ ಕಾಂಗ್ರೆಸ್‌ ಪಕ್ಷ ಸೋಲು ಅನುಭವಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ್‌ ಜೋಡೋ ಯಾತ್ರೆಯಿಂದ ಕರ್ನಾಟಕದಲ್ಲಿ 130-150 ಸೀಟ್‌ ಗೆಲ್ಲುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್‌, ಕೊಳ್ಳೆಗಾಲದಿಂದ ಯಾತ್ರೆ ಪ್ರಾರಂಭ ಮಾಡಿದರು. ಅಲ್ಲಿ ಏನೂ ಪರಿಣಾಮ ಆಗಲಿಲ್ಲ. ವಿಜಯಪುರದಲ್ಲಿ ನಗರ ಪಾಲಿಕೆಯನ್ನು ಬಿಜೆಪಿ ಹಿಡಿದಿದೆ. ಮೊನ್ನೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ಫಲಿತಾಂಶ ಬಿಜೆಪಿ ಪರವಾಗಿಯೇ ಇದೆ. ರಾಹುಲ್‌ ಕಾಲಿಟ್ಟಕಡೆಯಲ್ಲೆಲ್ಲಾ ಕಾಂಗ್ರೆಸ್‌ ಸೋಲುತ್ತಿದೆ ಅಂತ ತಿಳಿಸಿದ್ದಾರೆ. 

ತಾಯಿ-ಮಗ ಇಬ್ಬರೂ ಎಣ್ಣೆ ಹೊಡೆದು ಮಾತನಾಡ್ತಾರೆ: ಭವಾನಿ, ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರೀತಂಗೌಡ ವಾಗ್ದಾಳಿ

ರಾಹುಲ್‌ ಇಲ್ಲಿ ಪ್ರಯತ್ನ ಮಾಡುವುದಕ್ಕಿಂತ ಅಮೇಥಿಯಲ್ಲಿ ಸ್ವಲ್ಪ ಪ್ರಯತ್ನ ಮಾಡೋದು ಒಳ್ಳೆಯದು. ಅದರಿಂದ ಅವರ ಕುರ್ಚಿ ಇನ್ನಷ್ಟಾದರೂ ಗಟ್ಟಿಯಾಗುತ್ತದೆ. ಕರ್ನಾಟಕದಲ್ಲಿ ಅವರಿಗೆ ಏನೂ ಲಾಭವಿಲ್ಲ. ಇದು ಸಿದ್ದರಾಮಯ್ಯಗೂ ಗೊತ್ತಿದೆ. ಸುಮ್ಮನೆ ಸುದ್ದಿಯಲ್ಲಿರಬೇಕೆಂದು ಸಿದ್ದರಾಮಯ್ಯ ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.