*  ವಿರೋಧ ಪಕ್ಷದ ನಾಯಕನಿಗೆ ಈ ದೇಶದ ಸಂಸ್ಕೃತಿ, ಪರಂಪರೆ ಗೊತ್ತಿರಬೇಕು*  ಗುರು ಸಂಸ್ಕೃತಿ ಅವಹೇಳನ ಸರಿಯಲ್ಲ*  ನಾಸ್ತಿಕವಾದಿ ಹೇಳಿಕೊಂಡೇ ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೋತಾರೆ 

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಮಾ.26):  ಸ್ವಾಮೀಜಿಗಳ ವಿರುದ್ಧ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಕಳೆದ ಒಂದೆರಡು ತಿಂಗಳಿನಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಿದ್ದು ವಿರುದ್ಧ ಕಿಡಿ ಕಾರಿದ್ದಾರೆ.

ಇಂದು(ಶನಿವಾರ) ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಸೋಲು, ಹಿಜಾಬ್ ವಿಚಾರ ಎಲ್ಲಾ ಆದ್ಮೇಲೆ ಹೀಗಾಗಿದೆ.‌ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕನಿಗೆ ಈ ದೇಶದ ಸಂಸ್ಕೃತಿ, ಪರಂಪರೆ ಗೊತ್ತಿರಬೇಕು.‌ ಗುರುಪೀಠಗಳ ಬಗ್ಗೆ ಅವರಿಗೆ ತಿಳುವಳಿಕೆ ಇದೆ ಅಂತ ತಿಳಿದಿದ್ದೆ. ದೇಶದ ಸಂಸ್ಕೃತಿ ಪ್ರಕಾರ ರಾಜಪೀಠಗಳಿಗಿಂತ ಗುರುಪೀಠ ಶ್ರೇಷ್ಟವಾದದ್ದು. ಗುರು ಸಂಸ್ಕೃತಿ ಅವಹೇಳನ ಸರಿಯಲ್ಲ, ಇವತ್ತು ಗುರುಗಳ ಪರಂಪರೆಯನ್ನೇ ಅವರು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಣ್ಣಗೆ ಇದು ಹೊಸತಲ್ಲ, ನಾಸ್ತಿಕವಾದಿ ಹೇಳಿಕೊಂಡೇ ಕದ್ದುಮುಚ್ಚಿ ದೇವಸ್ಥಾನ ಹೋಗಿ ಪ್ರಸಾದ ತೆಗೋತಾರೆ ಅಂತ ವ್ಯಂಗ್ಯವಾಡಿದ್ದಾರೆ. 

ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ 'ದಿ ಕಾಶ್ಮೀರ್ ಫೈಲ್ಸ್' ತೋರಿಸಿದೆ: ನಳಿನ್ ಕಟೀಲ್

'ಮಠಗಳಿಗೆ ಕೈ ಹಾಕಿ ಸುಟ್ಟು ಹೋಗ್ತಾರೆ'

ಮಾಂಸಾಹಾರ(Meat) ಸೇವಿಸಿ ಧರ್ಮಸ್ಥಳ ಹೋಗಿ ಸವಾಲು ಹಾಕಿ ಮುಖ್ಯಮಂತ್ರಿ ಸ್ಥಾನವೇ ಕಳೆದುಕೊಂಡರು. ಇವತ್ತು ನಮ್ಮ ಸಂಸ್ಕೃತಿಯ ಹಿರಿತನವಾದ ಗುರುಪೀಠ ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಇದು ಅವರ ಅವನತಿಗೆ ಕಾರಣ ಅಂತ ನಂಬ್ತೇನೆ. ಯಾಕೆಂದರೆ ಅದು ಒಂದು ಬೆಂಕಿ ಇದ್ದ ಹಾಗೆ, ಮಠಗಳು ಬೆಂಕಿ ಇದ್ದಾಗೆ‌. ಮಠಗಳಿಗೆ ಕೈ ಹಾಕಿದ್ದಾರೆ, ಇದರಲ್ಲಿ ಕಾಂಗ್ರೆಸ್(Congress) ಸುಟ್ಟು ಸರ್ವನಾಶ ಆಗುತ್ತೆ. ಇದರ ಪರಿಣಾಮ ಅವರು ಮುಂದೆ ಕಾಣಲಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಒಡೆಯುವ ಪ್ರಯತ್ನ ಸಿದ್ದರಾಮಯ್ಯ ಮಾಡಿದ್ರು. ಅದರ ಪರಿಣಾಮ ಏನಾಗಿದೆ ಅನ್ನೋದು ಈಗ ಗೊತ್ತಾಗಿದೆ. ಇವರ ಹೇಳಿಕೆ ಹಿಂದೆ ಡಿಕೆಶಿ(DK Shivakumar) ಮತ್ತು ಸಿದ್ದರಾಮಯ್ಯ(Siddaramaiah) ಆಂತರಿಕ ಜಗಳವೂ ಇದೆ. ಡಿಕೆಶಿಗೆ ಮೊದಲು ಹೇಳಿಕೆ ನೀಡಬೇಕು ಅಂತ ನಿತ್ಯ ಹೀಗೆ ಹೇಳಿಕೆ ನೀಡ್ತಾ ಇದಾರೆ. ಇಲ್ಲಿ‌ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯ ಗುರುಪೀಠಕ್ಕೆ ಅವಮಾನ ಮಾಡಿದ್ದಾರೆ. ರಾವಣ ಒಬ್ಬ ಶ್ರೇಷ್ಠ ಪಂಡಿತ, ಅತೀ ಜ್ಞಾನಿ,‌ ಹೆಚ್ಚು ಓದಿದವ. ಆದರೆ ಓದಿದ ಕೂಡಲೇ ಎಲ್ಲವೂ ಬರಲ್ಲ, ನಂಬಿಕೆ ಇರಬೇಕು ಅಂತ ಹೇಳಿದ್ದಾರೆ. 

ರಾಮ ನಂಬಿಕೆ ಮತ್ತು ಆದರ್ಶದಿಂದ ದೊಡ್ಡವನಾದ. ಆದ್ದರಿಂದ ಹಿಂದೂ ಅಂತ ಹೇಳೋದು ದೊಡ್ಡದಲ್ಲ. ಸಿದ್ದರಾಮಯ್ಯ ಚುನಾವಣೆ ಇದ್ದಾಗ ಹಿಂದೂ ಅಂತಾರೆ, ಇಲ್ಲದಾಗ ಇಲ್ಲ. ಹಿಜಾಬ್ ತೀರ್ಪು(Hijab Verdict), ಗೋಹತ್ಯೆ, ಭಗವದ್ಗೀತೆ ಎಲ್ಲದರ ವಿರುದ್ಧ ಇರೋರು ಅವರು‌. ಅವರು‌ ಮದರಸಾ ಮತ್ತು‌ ಹಿಜಾಬ್ ಪರವಾಗಿ ಇರುವವರು. ಈ ಬಾರಿ ಹಿಜಾಬ್ ಒಳಗೆ ಕಾಂಗ್ರೆಸ್ ಕಣ್ಮರೆಯಾಗುತ್ತೆ. ಸಿದ್ದರಾಮಯ್ಯ ತನ್ನ ಮಾತಿನ ತಪ್ಪಿನ ಅರಿವಾದಾಗ ಮಾಧ್ಯಮದ ಮೇಲೆ ಹಾಕ್ತಾರೆ. ಅವರದ್ದು ಹಿಂದೂ ವಿರೋಧಿ ನೀತಿ, ಅಧಿಕಾರ ಇದ್ದಾಗಲೂ ಹಾಗೆ ಇದ್ದರು ಎಂದು‌ ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಅಸಮಾಧಾನ ಹೊರ ಹಾಕಿದ್ದಾರೆ. ‌

Elections 2022 Result ಸಂಪುಟ ಬದಲಾವಣೆ ಖಚಿತ, ಪಂಚ ರಾಜ್ಯ ಫಲಿತಾಂಶ ಬೆನ್ನಲ್ಲೇ ಕಟೀಲ್ ಸ್ಪಷ್ಟನೆ!

ಸತ್ಪ್ರ​ಜೆಗಳ ನಿರ್ಮಾ​ಣ​ಕ್ಕಾ​ಗಿ ಭಗ​ವ​ದ್ಗೀತೆ ಅಗ​ತ್ಯ:

ಬೆಂಗಳೂರು: ಶಿಕ್ಷಣ(Education) ಎಂದರೆ ಅದು ಮನುಷ್ಯನ ಸುಪ್ತ ಸಾಮರ್ಥ್ಯ ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆ. ಆದ್ದರಿಂದ ಗುಜರಾತ್‌ ಮಾದರಿಯಲ್ಲಿ ಕರ್ನಾಟಕದಲ್ಲೂ(Karnataka) ಶಾಲಾ ತರಗತಿಗಳಲ್ಲಿ ಭಗವದ್ಗೀತೆಯ ಶಿಕ್ಷಣ ನೀಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರತಿಪಾದಿಸಿದ್ದರು.

ಇಂದಿನ ಶಿಕ್ಷಣದಲ್ಲಿ ಕೇವಲ ಮೆದುಳಿಗೆ ಮಾಹಿತಿ ಕೊಡಲಾಗುತ್ತಿದೆ. ಶಿಕ್ಷಣವು ಮನುಷ್ಯನೊಳಗಿನ ವ್ಯಕ್ತಿತ್ವಕ್ಕೆ ಹೊಳಪು ಮತ್ತು ಬೆಳಕು ಕೊಡುವ ಮಾದರಿಯಲ್ಲಿರಬೇಕು. ಅಂಥ ಬೆಳಕಿನಿಂದ ಸತ್ಪ್ರಜೆಯ ನಿರ್ಮಾಣ ಸಾಧ್ಯ. ಅಂಥ ವ್ಯಕ್ತಿ ರಾಷ್ಟ್ರಕ್ಕೆ ಆಸ್ತಿ ಆಗುತ್ತಾನೆ. ವಿದ್ಯಾರ್ಥಿಯ(Students) ಸರ್ವತೋಮುಖ ವಿಕಾಸದ ಬದಲಾಗಿ ಇಂದು ಆತನ ತಲೆಗೆ ಏನೇನೋ ತುರುಕುವ ಕೆಲಸ ನಡೆದಿದೆ. ಮನುಷ್ಯನ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಮ್ಮ ಪ್ರಾಚೀನ ಚಿಂತನೆ, ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.