ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಬರ್ಟ್‌ ವಾದ್ರಾಗೆ ಇನ್ನು ಬೇಲ್‌ ಸಿಕ್ಕಿಲ್ಲ. ತಿಹಾರ್‌ ಜೈಲಿಗೆ ಹೋಗಿ ಬಂದ ಕಾಂಗ್ರೆಸ್‌ ನಾಯಕ ಬಿಜೆಪಿ ಬಗ್ಗೆ ಮಾತಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಟಾಂಗ್‌ ನೀಡಿದರು. 

ಚನ್ನಪಟ್ಟಣ (ಮಾ.05): ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಬರ್ಟ್‌ ವಾದ್ರಾಗೆ ಇನ್ನು ಬೇಲ್‌ ಸಿಕ್ಕಿಲ್ಲ. ತಿಹಾರ್‌ ಜೈಲಿಗೆ ಹೋಗಿ ಬಂದ ಕಾಂಗ್ರೆಸ್‌ ನಾಯಕ ಬಿಜೆಪಿ ಬಗ್ಗೆ ಮಾತಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಟಾಂಗ್‌ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕರೆಪ್ಷೆನ್‌ ಕ್ಯಾಪಿಟಲ್‌ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಜೈಲಿಗೆ ಹೋಗಿ ಬಂದವರಿಂದ ನಾವು ಪಾಠ ಕಲಿಯಬೇಕಿಲ್ಲ. ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಕಣ್ಣೀರು ಸುರಿಸಿಕೊಂಡು ರಾಜ್ಯದ ಜನರ ಮುಂದೆ ಹೋಗುತ್ತಾರೆ. 

ಸಿಎಂ ಆಗಿದ್ದಾಗ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕುಳಿತ ಅಧಿಕಾರ ನಡೆಸಿದ್ದ ಅವರು, ಒಂದೇ ಒಂದು ದಿನ ಕೂಡ ಅಧಿಕೃತ ನಿವಾಸವಾದ ಕೃಷ್ಣಾಗೆ ಹೋಗಿಲಿಲ್ಲ. ನಮ್ದದು ಡಬಲ್‌ ಇಂಜಿನ್‌ ಸರ್ಕಾರಅಭಿವೃದ್ಧಿ ಮಂತ್ರದ ಮೂಲಕ ಜನರ ಮುಂದೆ ಹೋಗಿ ಮತ ಕೇಳ್ತೇವೆ ಎಂದರು. ಚುನಾವಣೆ ಬಂತು ಅಂದ್ರೆ ಬಿಜೆಪಿ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಹಣ ಇರುತ್ತೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ದುಡ್ಡು ಮಾಡಿರೋ ಕಾರಣಕ್ಕೋಸ್ಕರ ಇಷ್ಟು ದಿನ ರಾಜಕಾರಣ ಮಾಡಿರೋದು. ಅವರ ಬಳಿ ಎಷ್ಟುದುಡ್ಡು ಇದೆ ಅನ್ನೋದನ್ನ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಲೋಕಾಯುಕ್ತಕ್ಕೆ ಶಕ್ತಿ ತುಂಬಿದ್ದೇ ಬಿಜೆಪಿ: ಇಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಲೋಕಾಯುಕ್ತ ದಾಳಿ ಕುರಿತು ಮಾತನಾಡುತ್ತಿದ್ದಾರೆ. ಆದರೆ ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬಿದವರೇ ನಾವು. ನಮ್ಮ ಪಕ್ಷದ ಶಾಸಕರ ಮೇಲೆ ದಾಳಿ ನಡೆದಿದೆ ಎಂದರೆ ನಮ್ಮ ಸರಕಾರ ನಿಸ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ ಕುಳಿತು ಆಡಳಿತ ಮಾಡಿ ಎಂದರೆ ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತು ಆಡಳಿತ ಮಾಡಿದ ಕುಮಾರಸ್ವಾಮಿ ಅವರಿಂದ ನಾವು ಪಾಠ ಕಲಿಯ ಬೇಕಿಲ್ಲ. 

ಲೋಕಾಯುಕ್ತ ದಾಳಿಯ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದರು. ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಇಬ್ಬರೂ ಕೈ ಎತ್ತಿಕೊಂಡಿರುವುದನ್ನು ಎಲ್ಲರೂ ನೋಡಿದ್ದಾರೆ. ಈಗ ನೋಡಿದರೆ ಅವರಿಬ್ಬರೆ ಕಚ್ಚಾಡುತ್ತಿದ್ದಾರೆ. ಈ ಭಾಗದಲ್ಲಿ ಜೆಡಿಎಸ್‌ಗೆ ವೋಟ್‌ ಹಾಕಿದರೆ ಕಾಂಗ್ರೆಸ್‌ಗೆ ವೋಟ್‌ ಹಾಕಿದ ರೀತಿ ಆಗುತ್ತದೆ ಎಂದರು. ನಮ್ಮ ಪಕ್ಷ ಎಲ್ಲೆಲ್ಲಿ ಹಿಂದೆ ಬಿದ್ದಿದೆ ಅಲ್ಲಿ ಸಂಘಟನೆಗೆ ಒತ್ತು ನೀಡುತ್ತಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಸಾಕಷ್ಟುಮಂದಿ ಬಿಜೆಪಿಗೆ ಸೇರಲಿದ್ದು, ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. 

ಈಬಾರಿಯ ಚುನಾವಣೆಗೆ ಕನಕಪುರಕ್ಕೆ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ಸಂಘಟನೆ ಬಲಗೊಳಿಸಲು ತಂತ್ರ ರೂಪಿಸಿದ್ದು, ಡಿ.ಕೆ.ಶಿವಕುಮಾರ್‌ ಕಟ್ಟಿಹಾಕಲು ಎಲ್ಲಾ ರೀತಿಯ ಯೋಜನೆಯನ್ನು ರೂಪಿಸಲಾಗುವುದು ಎಂದರು. ಮಂಡ್ಯ ಸಂಸದೆ ಸುಮಲತ ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಒನ್‌ಟು ಒನ್‌ ಮಾತನಾಡಿದ್ದೇವೆ. ಅವರು ಕೆಲವೊಂದು ಅಭಿಪ್ರಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಇದನ್ನು ಕೇಂದ್ರ ನಾಯಕರ ಗಮನಕ್ಕೆ ತರಲಾಗಿದೆ. ಹೈಕಮ್ಯಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕ ಮುಂದಿನ ಕೆಲಸ ಆರಂಭಿಸಲಾಗುವುದು ಎಂದರು.

ಯಡಿಯೂರಪ್ಪ ಸವಾಲು ಹಾಕಿದರೆ ಏನಾಗುತ್ತೆ ಎಂದು ನಮಗಿಂತ ಕಾಂಗ್ರೆಸ್ಸಿಗೆ ಚೆನ್ನಾಗಿ ಗೊತ್ತು: ಬಿ.ವೈ.ವಿಜಯೇಂದ್ರ

ಹಳೇ ಮೈಸೂರು ಭಾಗದಲ್ಲಿ 35 ಕ್ಷೇತ್ರದಲ್ಲಿ ಗೆಲುವು: ಈ ಬಾರಿಯ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ 35 ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದ್ದು, ಅಧ್ಯಾಯ ಪ್ರಾರಂಭವಾಗಲಿದೆ. ಬಿಜೆಪಿ ಆಡಳಿತವನ್ನು ಮೆಚ್ಚಿರುವ ಜನ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ದೇವರ ಆಶೀರ್ವಾದ ನನ್ನ ಮೇಲಿದೆ. ಈ ಬಾರಿ ನಾನೇ ಸಿಎಂ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ದೊಡ್ಡವರಿಂದ ಚಿಕ್ಕವರವರೆಗೂ ಎಲ್ಲರಿಗೂ ದೇವರ ಕೃಪೆ ಇರುತ್ತದೆ. ಬಿಜೆಪಿ ಸರ್ಕಾರ ಲೋಕಾಯುಕ್ತಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಟ್ಟಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಮುಚ್ಚಿಹಾಕಿ ಕಾನೂನು ಬಾಹಿರ ಚಟುವಟಿಕೆ ವಾತಾವರಣ ನಿರ್ಮಾಣ ಮಾಡಿದರು. ಆದರೆ ಬಿಜೆಪಿ ನಿಶ್ಪಕ್ಷಪಾತವಾಗಿ ತನಿಖೆ ಮಾಡುವ ಸ್ವಾತಂತ್ರ್ಯ ನೀಡಿದೆ ಎಂದರು.