Asianet Suvarna News Asianet Suvarna News

ಗಲಭೆಯಲ್ಲಿ RSS ಪಾತ್ರ ಸಾಬೀತುಪಡಿಸಿ, ಇಲ್ಲಾ ಕ್ಷಮೆ ಕೇಳಿ: ಸಿದ್ದುಗೆ ಕಟೀಲ್‌ ಸವಾಲು!

ಆರೆಸ್ಸೆಸ್‌ ಪಾತ್ರ ಸಾಬೀತುಪಡಿಸಿ, ಇಲ್ಲಾ ಕ್ಷಮೆ ಕೇಳಿ: ಸಿದ್ದುಗೆ ಕಟೀಲ್‌| ಕೋಮುಗಲಭೆ ನಷ್ಟವಸೂಲಿ ಬಗೆಗಿನ ಹೇಳಿಕೆಗೆ ತಿರುಗೇಟು

Nalin Kumar Kateel Challenges Congress Leader Sddaramaiah To Prove RSS Role In Bengaluru Riots
Author
Bangalore, First Published Aug 22, 2020, 8:03 AM IST

ಬೆಂಗಳೂರು(ಆ.22): ರಾಜ್ಯದಲ್ಲಿ ನಡೆದ ಕೋಮು ಗಲಭೆಗಳ ಸಂದರ್ಭದಲ್ಲಿ ಆಗಿರುವ ಹಾನಿಯನ್ನು ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳೇ ತುಂಬಿಕೊಡುವಂತೆ ಮಾಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೋಮು ಗಲಭೆಗಳಲ್ಲಿ ಆರ್‌ಎಸ್‌ಎಸ್‌ ಪಾತ್ರ ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

"

ಗೃಹ ಸಚಿವ, ಸಿಎಂ ಯಾರೆಂದು ಗೊತ್ತಿಲ್ಲದೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದರೇ?

ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಯಾವುದೇ ಭಾಗದಲ್ಲಿ ನಡೆದ ಕೋಮು ಗಲಭೆಗಳಿಗೆ ಆರ್‌ಎಸ್‌ಎಸ್‌ ಅಥವಾ ಅದರ ಸಹ ಸಂಘಟನೆಗಳು ಕಾರಣ ಎಂಬುದಾಗಿ ತನಿಖಾ ಸಂಸ್ಥೆಗಳಾಗಲಿ ಅಥವಾ ವಿಚಾರಣಾ ನ್ಯಾಯಾಲಯಗಳಾಗಲಿ ತಿಳಿಸಿಲ್ಲ. ಆದರೂ ಸಿದ್ದರಾಮಯ್ಯ, ಕೋಮುಗಲಭೆಗಳಲ್ಲಿ ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳಿಂದ ಆಗಿರುವ ಹಾನಿ ತುಂಬಿಕೊಡಬೇಕು ಎಂದು ನೀಡಿರುವ ಹೇಳಿಕೆ ಅತಿರೇಕದಿಂದ ಕೂಡಿದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿದವರು ಅಲ್ಪಸಂಖ್ಯಾತರೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆಳವಣಿಗೆ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ ಪಕ್ಷದ ನೀತಿ ಮತ್ತು ಮತ ಬ್ಯಾಂಕ್‌ ರಾಜಕಾರಣದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

'ಯಡಿಯೂರಪ್ಪ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ಕೊರೋನಾ ನಿಯಂತ್ರಣ'

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಿಂದಾಗಿರುವ ಹಾನಿಯನ್ನು ತಪ್ಪಿತಸ್ಥರಿಂದ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಸಂಘ ಪರಿವಾರ ಈ ಹಿಂದೆ ನಡೆದಿರುವ ಕೋಮು ಗಲಭೆಗಳಲ್ಲಿ ಆದ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಯಾಗಿ ಕಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios