Karnataka Politics: ಬೊಮ್ಮಾಯಿ ಮಾತಾಡುವ ಬಸವಣ್ಣ ಅಲ್ಲ, ದುಡಿವ ಬಸವಣ್ಣ: ಪ್ರತಾಪ್ ಸಿಂಹ
* ಬೊಮ್ಮಾಯಿ ಅವರ ದುಡಿಮೆ ಫಲವಾಗಿ ಮೈಸೂರಿನ ಏರ್‌ಪೋರ್ಚ್ ವಿಸ್ತರಣೆ
* ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಶ ಧ್ವನಿಯಲ್ಲಿ ಕಾಕಾ ಎನ್ನುವವರಿಗೆ ಅರ್ಥವಾಗುವುದಿಲ್ಲ
* ಹಿಜಾಬ್ ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ?
ಮೈಸೂರು(ಏ.09): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮಾತನಾಡುವ ಬಸವಣ್ಣ ಅಲ್ಲ, ಅವರು ದುಡಿವ ಬಸವಣ್ಣ(Basavanna). ದುಡಿಮೆಯಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಸವಣ್ಣ ಎಂದು ಬಣ್ಣಿಸುವ ಮೂಲಕ ಸಂಸದ ಪ್ರತಾಪ್ ಸಿಂಹ(Pratap Simha) ಅವರು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಮೌನ ಬಸವಣ್ಣ ಎಂಬ ಪ್ರತಿಪಕ್ಷಗಳ ಟೀಕೆ ಬಗ್ಗೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ದುಡಿಮೆ ಫಲವಾಗಿ ಮೈಸೂರಿನ ಏರ್‌ಪೋರ್ಚ್(Mysuru Airport) ವಿಸ್ತರಣೆಗೆ ಅನುದಾನ ಕೊಟ್ಟಿದ್ದಾರೆ. ಕೆ.ಆರ್.ಆಸ್ಪತ್ರೆಗೆ ಅನುದಾನ(Grants) ಕೊಟ್ಟಿದ್ದಾರೆ, ಶಕ್ತಿಧಾಮಕ್ಕೆ ಅನುದಾನ ಕೊಟ್ಟಿದ್ದಾರೆ ಎಂದರು. ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಶ ಧ್ವನಿಯಲ್ಲಿ ಕಾಕಾ ಎನ್ನುವವರಿಗೆ ಅರ್ಥವಾಗುವುದಿಲ್ಲ. ಕೋಡಿಮಠದ ಸ್ವಾಮೀಜಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಇಂತಹವರ ಹೇಳಿಕೆಗಳಲ್ಲಿ ನಿಖರತೆ, ಸ್ಪಷ್ಟತೆ ಯಾವುದು ಇರುವುದಿಲ್ಲ. ಈ ಮೂವರ ಹೇಳಿಕೆಗಳನ್ನು ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಅವರು ಕುಟುಕಿದರು.
ಸಂಸದ ಪ್ರತಾಪ್ ಸಿಂಹ, ಶಿಲ್ಪಿ ಅರುಣ್ ಯೋಗಿರಾಜ್ ಪ್ರಧಾನಿ ಮೋದಿ ಭೇಟಿ: ಯೋಗ ದಿನಾಚರಣೆಗೆ ಮೈಸೂರಿಗೆ ಆಹ್ವಾನ
ಬುದ್ಧಿ ಯಾಕೆ ಹೇಳಲಿಲ್ಲ?
ಹಿಜಾಬ್(Hijab) ವಿಚಾರ ಬಂದಾಗ ಪ್ರತಿಪಕ್ಷಗಳು ಯಾಕೆ ಆ ಸಮುದಾಯಕ್ಕೆ ಬುದ್ಧಿ ಹೇಳಲಿಲ್ಲ? ಸಮವಸ್ತ್ರ ಎಲ್ಲರಿಗೂ ಕಡ್ಡಾಯ. ಅದನ್ನು ಪಾಲಿಸಿ ಎಂದು ಪ್ರತಿಪಕ್ಷಗಳು ಹೇಳಿದ್ದರೆ ರಾಜ್ಯದಲ್ಲಿ ವಿವಾದಗಳೇ ಸೃಷ್ಟಿಯಾಗ್ತಿರ್ಲಿಲ್ಲ. ಆವತ್ತು ಅವರಿಗೆ ಇಲ್ಲದ ಕಾನೂನಿನ ಕಥೆ ಹೇಳಿಕೊಟ್ಟು ಗೊಂದಲ ಸೃಷ್ಟಿಗೆ ಕಾರಣದವರು ಇವರು. ಇವತ್ತು ಸರ್ವ ಜನಾಂಗದ ಸಾಮರಸ್ಯದ ಸಭೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಿಎಂ ಬೊಮ್ಮಾಯಿ ಮೂಕ ಬಸವ ಆಗಿದ್ದಾರೆ: ಪ್ರಿಯಾಂಕ್ ಖರ್ಗೆ
ಕಲಬುರಗಿ: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಸಿಎಂ ಬಸಣ್ಣ (Basavaraj Bommai) ಮೂಕ ಬಸವಣ್ಣ ಆಗಿದ್ದಾರೆ. ಹಾಗಾಗಿ, ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ಯಾರಿಂದಲೂ ನಿಯಂತ್ರಿಸಲಾಗುತ್ತಿಲ್ಲವೇಕೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ(Priyank Kharge) ಖಾರವಾಗಿ ಪ್ರಶ್ನಿಸಿದ್ದರು.
ಏ.5 ರಂದು ಕಲಬುರಗಿ(Kalaburagi) ಸಂಚಾರದಲ್ಲಿರುವ ಪ್ರಿಯಾಂಕ್ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್(Hijab), ಹಲಾಲ್(Halal) ಹಾಗೂ ಮಸೀದಿಗಳ ಮೇಲಿನ ಮೈಕ್ ತೆಗೆಸುವ ವಿವಾದಗಳು ಹೀಗೆಲ್ಲಾ ಅಡ್ಡಾದಿಡ್ಡಿ ಬೆಳೆಯೋದು ನೋಡಿದ್ರೆ ಸರ್ಕಾರ ಸತ್ತೋಗಿದೆ, ಬಸಣ್ಣ (ಸಿಎಂ) ಮೂಕ ಬಸವಣ್ಣ ಆಗಿದ್ದಾರೆಂದೇ ಹೇಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಹಿಜಾಬ್, ಹಲಾಲ್ ನಂತರ ಈಗ ಮಸೀದಿಗಳ ಮೇಲಿನ ಮೈಕ್‌ಗಳ ತೆರವಿಗೆ ಹಿಂದೂ(Hindu) ಪರ ಸಂಘಗಳು ಒತ್ತಾಯಿಸುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಸೀದಿಗಳ ಮೇಲಿನ ಮೈಕ್(Mic) ಬಳಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರಿಂಕೋರ್ಟ್(Supreme Court) ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚ್‌ಗಳಿಗೂ ಕೂಡಾ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ ಎಂದರು.
ಮಾನವೀಯತೆ, ತಾಯಿಯ ಹೃದಯವನ್ನಿಟ್ಟುಕೊಂಡು ಜೀವನ ಮಾಡ್ತಿದ್ದೇವೆ, ಸಿಂಹಗೆ ಎಚ್‌ಡಿಕೆ ತಿರುಗೇಟು
ಆದರೆ ಇಂತಹ ವಿವಾದಕರ ವಿಚಾರಗಳೆಲ್ಲವನ್ನು ಭಜರಂಗದಳ ಮಾತನಾಡುತ್ತಿದೆ. ಎಲ್ಲವನ್ನೂ ಮಾತನಾಡಲು ಇವರು ಯಾರು? ಯಾರು ಹಲಾಲ್ ಸರ್ಟಿಫಿಕೇಟ್ ತಗೊಂಡಿಲ್ಲ ಹೇಳಿ? ಅಂಬಾನಿ ತಗೊಂಡಿಲ್ವಾ? ಅದು ವ್ಯಾಪಾರ, ಅದರ ಪಾಡಿಗೆ ಬಿಟ್ಟುಬಿಡಲಿ. ಪೆಟ್ರೋಲ್, ಡಿಸೇಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಒಂದು ಸಾವಿರ ರು. ದಾಟಿದೆ. ಸಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ರು. 111 ಆಗಿದೆ. ಸಿಎಂ ಎಲ್ಲಿದ್ದಾರೆ? ಸರ್ಕಾರ ಎಲ್ಲಿದೆ? ಅದರ ಬಗ್ಗೆ ಮಾತನಾಡಲಿ ನೋಡೋಣ? ಬಿಜೆಪಿ(BJP) ಹಾಗೂ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ದೇಶಗಳಿಂದ(Muslim Countries) ಆಮದಾಗುತ್ತಿರುವ ಪೆಟ್ರೋಲ್ ಡಿಸೇಲ್ ಹಾಕಿಸಿಕೊಳ್ಳುವುದನ್ನ ನಿಲ್ಲಿಸುವ ಮೂಲಕ ನೈಜ ಹಿಂದುತ್ವವನ್ನು ಮೆರೆಯಲಿ ಎಂದು ಸವಾಲು ಹಾಕಿದರಲ್ಲದೆ ಸಿಎಂ ಬಸಣ್ಣ ಮೂಕರಾಗಿರುವುದಕ್ಕೆ ಇದೆಲ್ಲಾ ನಡೆಯುತ್ತಿದೆ ಎಂದು ಕುಟುಕಿದ್ದರು.
ಸರ್ಕಾರ ವೈಫಲ್ಯ ಎದುರಿಸುತ್ತಿರುವಾಗ ಜನರು ನ್ಯಾಯಾಲಯಗಳ ಮೊರೆ ಹೋಗುತ್ತಾರೆ ಎಂದ ಖರ್ಗೆ ಈಗ ರಾಜ್ಯದಲ್ಲಿ(Karnataka) ಇದೇ ಆಗುತ್ತಿದೆ. ಜನರು ನ್ಯಾಯಾಲಯಕ್ಕೆ ಹೋಗುವಂತ ಸ್ಥಿತಿ ನಿರ್ಮಾಣವಾದರೆ ಸರ್ಕಾರ ಯಾಕೆ ಇರಬೇಕು? ವಿಧಾನಸಭೆ ಯಾಕಿರಬೇಕು? ವಿಧಾನಸಭೆ ವಿಸರ್ಜನೆ ಮಾಡಿ ಎಲ್ಲವನ್ನೂ ಕೇಶವ ಕೃಪಾಕ್ಕೆ ಕೊಟ್ಟುಬಿಡಲಿ. ಆರ್ಥಿಕವಾಗಿ ಸಬಲವಾಗಿದ್ದ ರಾಜ್ಯ ಏನಾಗುತ್ತಿದೆ? ಮೊನ್ನೆ ತೆಲಂಗಾಣ ಸಚಿವರೊಬ್ಬರು ಸಮಾಜಿ ಸಮಾನತೆಯ ವಾರವರಣ ಇದೆ ಎಲ್ಲಾ ಕಂಪನಿಗಳು ಹೈದರಾಬಾದ್ ಗೆ ಬನ್ನಿ ಎಂದು ಕರೆದಿದ್ದಾರೆ. ಬಿಜೆಪಿಗೆ ಹೇಳಿಕೊಳ್ಳುವಂತ ಸಾಧನೆ ಇಲ್ಲ ಹಾಗಾಗಿ ಇದೆಲ್ಲವನ್ನು ಶುರು ಮಾಡಿದ್ದಾರೆ. ಸಿಎಂ ಸಂಘ ಪರಿವಾರದ ಕೈಗೊಂಬೆಯಾಗಿದ್ದಾರೆಂದು ಟೀಕಿಸಿದ್ದರು.