ದೇವೇಗೌಡರನ್ನೇ ಕೀಳಾಗಿ ಕಂಡ ನಿಮ್ಮ ಪ್ರಬುದ್ಧತೆ ನನಗೆ ಬೇಕಿಲ್ಲ: ಸಿದ್ದು 'ಚೈಲ್ಡ್' ಟೀಕೆಗೆ ಪ್ರತಾಪ್ ಸಿಂಹ ವಾರ್..!
ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೇಕೆ ಉತ್ತರ ನೀಡುತ್ತಿಲ್ಲ. ನೀವು ಬುದ್ದಿವಂತರಿದ್ದೀರಿ, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ?. ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ ಬೇಜಾರ್ ಇಲ್ಲ. ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡಿಕರಣ ಮಾಡುವುದು ಹೇಗೆ ತಿಳಿಸಿ: ಪ್ರತಾಪ್ ಸಿಂಹ
ಮೈಸೂರು(ಜೂ.16): ಈ ಹಿಂದೆ ಸಿದ್ದರಾಮಯ್ಯ ಆಡಳಿತವಧಿಯಲ್ಲಿ ಸರಣಿ ಹಲ್ಲೆಗಳಾಗಿವೆ. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಬಂಡೆ ಕೊಲೆ ಆಯ್ತು, ಡಿಸಿಪಿಯಾಗಿದ್ದ ಗಣಪತಿ, ಮೈಸೂರಿನಲ್ಲಿ ಅಧಿಕಾರಿ ರಶ್ಮಿ ಮಹೇಶ್ ಮೇಲೆ ದಾಳಿ, ಶಿಖಾ ಹಲ್ಲೆ ಸೇರಿದಂತೆ ಹಲವೆಡೆ ಗಲಾಟೆಗಳಾಗಿದ್ದವು. ಹೀಗಾಗಿ ನಾವು ಕಾನೂನು ವ್ಯವಸ್ಥೆ ಕಾಣುವುದು ಸಾಧ್ಯವಿಲ್ಲ. ರಾಜ್ಯದ ಜನ ಮುಂದೆ ಇನ್ನಷ್ಟು ನೋಡುವುದು ಇದೆ ಅಂತ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ ಸಿಂಹ ಒಬ್ಬ ಎಳಸು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಕ್ರಿಯೆ ನೀಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೇಕೆ ಉತ್ತರ ನೀಡುತ್ತಿಲ್ಲ. ನೀವು ಬುದ್ದಿವಂತರಿದ್ದೀರಿ, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ?. ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ ಬೇಜಾರ್ ಇಲ್ಲ. ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡಿಕರಣ ಮಾಡುವುದು ಹೇಗೆ ತಿಳಿಸಿ. ಸೀನಿಯರ್ ರಾಜಕಾರಣಿ ಆಗಿರುವ ನೀವು ಜಿ. ಪರಮೇಶ್ವರ್ ರನ್ನ ಮುಗಿಸಿ ಸಿಎಂ ಆಗಿದ್ರಲ್ಲ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಸರ್ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಜೀವಮಾನದಲ್ಲೇ ಹೊಂದಾಣಿಕೆಯ ರಾಜಕೀಯ ಮಾಡಿಲ್ಲ: ಬೊಮ್ಮಾಯಿ
ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್.ಡಿ. ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ ಸರ್. ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಮೋದಿ ಜಿ ಅವರನ್ನ ಕೇಳಿದ್ರಾ?. ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಪ್ರಮುಖ ಪತ್ರ ವಹಿಸಿದ್ದರು. ಆದ್ರೆ ಡಿಕೆ ವಿರುದ್ಧ ಎಂ.ಬಿ. ಪಾಟೀಲ್ ರನ್ನ ಚೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಮೈಚುರಿಟಿ ಎನ್ನುವುದಾದ್ರೆ ಇದ್ಯಾವ್ಯೂದು ನಮಗೆ ಬೇಡ ಸರ್ ಎಂದು ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ, ಡಿಕೆಶಿಗೆ ಬಹುಪರಾಕ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ. ಹೌದು, ಡಿಸೈನ್‌ಬಾಕ್ಸ್ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿ.ಕೆ.ಶಿವಕುಮಾರ್, ಡಿಕೆಶಿ ಒಬ್ಬ ಫೈಟರ್. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಹೋರಾಟ ಪ್ರಮುಖ ಕಾರಣವಾಗಿದೆ. ಅವರು ನಮ್ಮ ಎದುರಾಳಿ ಇರಬಹುದು. ನಾನು ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿಲ್ಲ. ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕಿತ್ತು ಅಂತ ಹೇಳಿದ್ದಾರೆ.