ನಾನು ಜೀವಮಾನದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾರು ಏನೇ ಹೇಳಿದರೂ ನಾನು ಆ ರೀತಿಯ ರಾಜಕೀಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಜೂ.16): ನಾನು ಜೀವಮಾನದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾರು ಏನೇ ಹೇಳಿದರೂ ನಾನು ಆ ರೀತಿಯ ರಾಜಕೀಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸ್ವಪಕ್ಷೀಯ ಸಂಸದ ಪ್ರತಾಪ್ ಸಿಂಹ ಅವರ ಹೊಂದಾಣಿಕೆ ರಾಜಕಾರಣದ ಹೇಳಿಕೆ ಬಗ್ಗೆ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಜೀವಮಾನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಇನ್ನು ಸಿದ್ದರಾಮಯ್ಯ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಲೋಕಾಯುಕ್ತಕ್ಕೆ ಹೊಸದಾಗಿ ದೂರು ನೀಡಿದ್ದಾರೆ. ಈ ಬಗ್ಗೆ ದಾಖಲೆ ನೀಡಲು ಸಿದ್ಧ ಎಂದರು.
ಕೆಂಪಣ್ಣ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಮಂಡನೆ ಮಾಡಿಲ್ಲ ಎಂಬ ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಅವರಿಗೆ ಮಾಹಿತಿ ಕೊರತೆ ಇದೆ. ಕೆಂಪಣ್ಣ ವರದಿ ಮಂಡನೆ ಮಾಡುವ ಅಗತ್ಯವಿಲ್ಲ. ವರದಿ ಸ್ವೀಕಾರ ಮಾಡಿ ಸಚಿವ ಸಂಪುಟದಲ್ಲಿ ಚರ್ಚಿಸಿ ತನಿಖೆಗೆ ಆದೇಶಿಸಲಾಗಿತ್ತು. ಹೀಗಾಗಿ ಮರುತನಿಖೆಗೆ ಆದೇಶ ಮಾಡಿ ಕಾಲಹರಣ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೊಂದಾಣಿಕೆ ಬಗ್ಗೆ ಮಾತನಾಡುವವರಿಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರು ಇದ್ದಾರೆ. ನಾನು ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಹೋಗಿದ್ದು ಸಂಬಂಧದ ಮೇಲೆ. ಬೀಗರ ಕಾರ್ಯಕ್ರಮ ಇದ್ದ ಕಾರಣ ನಾನು ಅವರ ಮನೆಗೆ ಹೋಗಿದ್ದೆ ಎಂದು ಬೊಮ್ಮಾಯಿ ಹೇಳಿದರು.
ಪ್ರತಾಪ್ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು: ಎನ್.ಚಲುವರಾಯಸ್ವಾಮಿ
ಬೊಮ್ಮಾಯಿ ಬೀಗರು, ರಾಜಕೀಯ ಚರ್ಚಿಸಿಲ್ಲ: ನಾನು, ಬಸವರಾಜ ಬೊಮ್ಮಾಯಿ ಬೀಗರು. ಚುನಾವಣೆ ಆದ ಬಳಿಕ ಭೇಟಿ ಆಗಿರಲಿಲ್ಲ. ಇಬ್ಬರೂ ಗೆದ್ದಿದ್ದು, ನನಗೆ ಅವ್ರು ಹಾರ ಹಾಕಿದ್ರು, ನಾನು ಶಾಲು ಹೊದಿಸಿ, ಅಭಿನಂದಿಸಿದೆ ಎಂದು ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲಿ ಎಂಬುದಾಗಿ ಹೇಳಿದೆ.
ಕೆಲವೊಂದು ವಿಚಾರಗಳ ನಾವು ಮಾಧ್ಯಮಗಳ ಮುಂದೆಲ್ಲಾ ಹೇಳಲು ಆಗುವುದೂ ಇಲ್ಲ ಎಂದರು. ಬೊಮ್ಮಾಯಿ ಬಿಜೆಪಿಯವರು. ನಾವು ಕಾಂಗ್ರೆಸಿನವರು. ನಮ್ಮ ಮಧ್ಯೆ ರಾಜಕೀಯ ಮಾತುಕತೆಯಾದರೂ ಏನಿರುತ್ತದೆ? ಹೊಂದಾಣಿಕೆ ರಾಜಕಾರಣ ಮಾಡುವುದಕ್ಕೆ ನಾವು ಚುನಾವಣೆ ಪೂರ್ವದಲ್ಲಿ ಭೇಟಿಯಾಗಿಲ್ಲ. ಚುನಾವಣೆ ನಂತರ ಭೇಟಿ ಆಗಿದ್ದೇವೆ. ಮೈಸೂರು ಸಂಸದ ಪ್ರತಾಪ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಅಂತಾ ನಾನು ನೋಡಿದ್ದೀನಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿದ್ಯುತ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ: ಸಂಸದ ಮುನಿಸ್ವಾಮಿ
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಂತೆ ವೀರಶೈವ ಮಹಾಸಭಾದ ಪದಾಧಿಕಾರಿಗಳ ಸಭೆ ಕರೆದು, ತೀರ್ಮಾನ ಕೈಗೊಳ್ಳುತ್ತೇವೆ. ಸಮೀಕ್ಷೆ ಬಹಿರಂಗದ ಸಾಧಕ-ಬಾಧಕಗಳ ಬಗ್ಗೆ ಆ ಸಭೆಯಲ್ಲಿ ಚರ್ಚಿಸಿ, ಮಹಾಸಭಾ ಏನು ಮಾಡಬೇಕೆಂಬ ತೀರ್ಮಾನ ಕೈಗೊಳ್ಳುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ? ಜಾಮದಾರ ಒಬ್ಬ ಇದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲಾಂದ್ರೆ ನಾವು ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
