ಮೋದಿ ಬಗ್ಗೆ ಮಾತನಾಡುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ: ಸಂಸದ ಪ್ರತಾಪ್‌ ಸಿಂಹ ಟಾಂಗ್

ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಮಾತನಾಡವಷ್ಟು ದೊಡ್ಡ ಮನುಷ್ಯನಲ್ಲ ನೀವು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ತಿರುಗೇಟು ನೀಡಿದ್ದಾರೆ. 

Mysore Pratap Simha said that CM Siddaramaiah not big to talk about PM Narendra Modi sat

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮೇ 30): ಪ್ರಧಾನಿ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೋ ಇಲ್ಲವೋ ಎಂಬುದನ್ನು ನೀವು ಪರಮಾರ್ಶಿಸಲು ಹೋಗಬೇಡಿ. ಮೋದಿಯವರ ಬಗ್ಗೆ ಮಾತನಾಡವಷ್ಟು ದೊಡ್ಡ ಮನುಷ್ಯನಲ್ಲ ನೀವು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ತಿರುಗೇಟು ನೀಡಿದ್ದಾರೆ. 

ಒಂಭತ್ತು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಮಡಿಕೇರಿಯಲ್ಲಿ ನಡೆದ ಜಿಲ್ಲಾಭಿವೃದ್ಧಿ ಸಮನ್ವಯ ಸಮಿತಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರೇ ಪ್ರಧಾನಿ ಮೋದಿ ಅವರನ್ನು ನೀವು ನರಹಂತಕ ಎಂದು ಪದೇ ಪದೇ ಹೇಳಿದ ಪರಿಣಾಮ ಜನರು ನಿಮಗೆ ಎಷ್ಟು ಸೀಟು ಕೊಟ್ಟರು ಎನ್ನುವುದು ಗೊತ್ತಿದೆ ಎಂದು ಹೇಳಿದರು.

ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ: ಜೂ.1ರಿಂದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭ

ಭರವಸೆ ನೊಡಿ ಜನ ಮತ ಹಾಕಿದ್ದಾರೆ, ನಿಮ್ಮ ಮುಖವನ್ನಲ್ಲ: ಪ್ರಧಾನಿ ಮೋದಿಯವರಿಗೆ 2014 ರಲ್ಲಿ ರಾಜ್ಯದಲ್ಲಿ ಜನರು 17 ಸೀಟು ನೀಡಿದ್ದರು. 2019 ರಲ್ಲಿ 25 ಸೀಟು ನೀಡಿದ್ದರು. ಮೋದಿಜಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿದ್ದಾರೋ ಇಲ್ಲವೋ ಎಂದು 2024 ರ ಚುನಾವಣೆಯಲ್ಲಿ ಜನರು ಉತ್ತರ ನೀಡುತ್ತಾರೆ. ನೀವುಗಳು ನೀಡಿರುವ ಭರವಸೆಗಳ ಬಗ್ಗೆಯಷ್ಟೇ ನೀವು ಮಾತನಾಡಿ. ದೇಶದಲ್ಲಿ 30 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಬಂದಿರುವ ಮೋದಿಯವರ ಬಗ್ಗೆ ನಿಮಗೆ ಮಾತು ಬೇಡ. ನೀವು ಕೊಟ್ಟಿರುವ ಮಾತುಗಳನ್ನು ಮೊದಲು ಈಡೇರಿಸಿ. ಚುನಾವಣೆಯಲ್ಲಿ ನೀವು ನೀಡಿರುವ ಭರವಸೆಗಳನ್ನು ನೋಡಿಯೇ ಜನರು ನಿಮಗೆ ಮತಗಳನ್ನು ಹಾಕಿದ್ದಾರೆಯೇ ಹೊರತ್ತು, ನಿಮ್ಮ ಮುಖಗಳನ್ನು ನೋಡಿ ಯಾರೂ ವೋಟ್ ಹಾಕಿಲ್ಲ ಎಂದು ವ್ಯಂಗ್ಯ ಮಾಡಿದರು.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಷರತ್ತು ಬೇಡ: ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಹೇಳಿದ್ದಿರಿ. ಆಗ ಯಾವುದೇ ನಿರ್ಬಂಧಗಳು ಇರಲಿಲ್ಲ. ಮಹಿಳೆ ಅತ್ತೆ ಮನೆಗಾದರೂ ಹೋಗಲಿ, ತಾಯಿ ಮನೆಗಾದರೂ ಹೋಗಲಿ, ಕಾಶಿಗಾದರೂ ಹೋಗಲಿ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಂಡಿದ್ದರೆ ಅದು ಒಳ್ಳೆಯದು. ಅದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಖಚಿತ, ಉಚಿತ, ಖಂಡಿತ ನಿಶ್ಚಿತ ಎಂದೆಲ್ಲಾ ಹೇಳಿದ್ದರು. ಗ್ಯಾರಂಟಿ ಭಾಗ್ಯ ಹೇಳುವಾಗ ಯಾವುದೇ ಕಂಡಿಷನ್ ಹೇಳಿರಲಿಲ್ಲ. 2000 ರೂಪಾಯಿಯನ್ನು ಎಲ್ಲರಿಗೂ ಕೊಡಬೇಕು ಎಂದು ಹೇಳಿದ್ದವರು ಬಳಿಕ ದಾರಿಯಲ್ಲಿ ಹೋಗುವವರಿಗೆಲ್ಲಾ ಕೊಡಲು ಆಗುವುದಿಲ್ಲ ಎಂದಿದ್ದಾರೆ. ಯಾಕೆ ಹೀಗೆ ನೀವು ಜನರನ್ನು ತಾರತಮ್ಯ ಮಾಡಿ ಮಾತನಾಡುತ್ತೀರ. ದಾರಿಯಲ್ಲಿ ಹೋಗುವವರೇ ಅಲ್ಲವೆ ನಿಮಗೆ ವೋಟ್ ಹಾಕಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್‌ ನ್ಯೂಸ್‌ ಕೊಟ್ಟ ಕಾಂಗ್ರೆಸ್‌ ಸರ್ಕಾರ: ಅಮೃತ ಮಳಿಗೆ ಆರಂಭ

ನಂಗೂ ಫ್ರೀ, ನಿಂಗೂ ಫ್ರೀ ಎಂದವರಿಗೆ ಯಾಕೆ ಚಿಂತೆ: ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಉಚಿತ ವಿದ್ಯುತ್ ಎಂದು ಹೇಳಿದ್ದರು. ನನಗೂ ಫ್ರೀ, ನಿನಗೂ ಫ್ರೀ, ಕಾಕ ಪಾಟೀಲ್ಗೂ ಫ್ರೀ ಎಂದಿದ್ದರು. ಯಾಕೆ ಇನ್ನೂ ಉಚಿತ ವಿದ್ಯುತ್ ನೀಡಲಾಗುತ್ತಿಲ್ಲ. ಕರ್ನಾಟಕದಲ್ಲಿ ಎಷ್ಟು ಕುಟುಂಬಗಳಿಗೆ ಗೃಹ ಬಳಕೆಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ ಎಂಬುದು ನಿಮಗೆ ಗೊತ್ತಿಲ್ಲವೇ. ಎಷ್ಟು ವಿದ್ಯಾರ್ಥಿಗಳು ಡಿಗ್ರಿ ಮುಗಿಸಿ ಹೊರಗೆ ಬಂದಿದ್ದಾರೆ ಎನ್ನುವ ಲಿಸ್ಟ್ ಪಡೆಯುವುದಕ್ಕೆ ಎಷ್ಟು ಹೊತ್ತು ಬೇಕು. ನೀವು ನೀಡಿದ್ದ ಉಚಿತ ಭರವಸೆಗಳ ಜಾರಿ ಮಾಡಿ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios