ಜನಾರ್ದನ ರೆಡ್ಡಿ ಸ್ನೇಹ ರಾಜಕೀಯಕ್ಕೆ ಹೊರತಾದುದು: ಶ್ರೀರಾಮುಲು
ಜನಾರ್ದನ ರೆಡ್ಡಿ ಅವರ ಜತೆಗಿನ ತಮ್ಮ ಸ್ನೇಹ ರಾಜಕೀಯಕ್ಕೆ ಹೊರತಾದದ್ದು. ಪಕ್ಷ ತಾಯಿಗೆ ಸಮವಾದುದು. ಪಕ್ಷ ಹಾಗೂ ಸ್ನೇಹವನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಯಲ್ಲಾಪುರ (ಡಿ.10) : ಜನಾರ್ದನ ರೆಡ್ಡಿ ಅವರ ಜತೆಗಿನ ತಮ್ಮ ಸ್ನೇಹ ರಾಜಕೀಯಕ್ಕೆ ಹೊರತಾದದ್ದು. ಪಕ್ಷ ತಾಯಿಗೆ ಸಮವಾದುದು. ಪಕ್ಷ ಹಾಗೂ ಸ್ನೇಹವನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಪರಿಶಿಷ್ಟಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಯಲ್ಲಾಪುರದ ನಂದೊಳ್ಳಿಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರೆಡ್ಡಿ ಅವರನ್ನು ಪಕ್ಷಕ್ಕೆ ತರುವ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಲಿದೆ. ಜನಾರ್ದನ ರೆಡ್ಡಿ ಜತೆ ಬಿಜೆಪಿ ನಾಯಕರು ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಹನುಮ ಜಯಂತಿಗೆ ತೆರಳಿದ್ದರು. ಸಾರ್ವಜನಿಕ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಳ್ಳುವುದು ಸಹಜ. ಈ ಬಗ್ಗೆ ಯಾರು ಅಪಾರ್ಥ ಕಲ್ಪಿಸುವುದು ಬೇಡ ಎಂದರು.ಎಂದರು.
ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಒಂದೊಂದು ದಿಕ್ಕಿಗೆ ಓಡುತ್ತಿದ್ದಾರೆ. ಇವರು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಎಲ್ಲ ಸಮೀಕ್ಷೆಗಳ ಪ್ರಕಾರ ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೆಲವೆಡೆ ಏನಾದರೂ ಸಮಸ್ಯೆಗಳಿದ್ದಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ, ಪಕ್ಷ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಹೇಳುವುದೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಉತ್ತರಿಸಿದರು.
Ballari Politics: ಹೊಸ ಪಕ್ಷ ಕಟ್ಟಲು 'ಗಣಿಧಣಿ' ನಿರ್ಧಾರ?: ಆಪ್ತಮಿತ್ರರ ಮಧ್ಯೆ ಬಿರುಕು
30 ಕುಟುಂಬಕ್ಕೆ ಕೂಡಲೇ ವಿದ್ಯುತ್ ಸಂಪರ್ಕ; ಶ್ರೀರಾಮುಲು
ಕಳೆದ 40 ವರ್ಷದಿಂದ ಗಂಗಾಧರ ಎನ್ನುವವರ ತೋಟದಲ್ಲಿ 30ಕ್ಕೂ ಹೆಚ್ಚು ಕುಟುಂಬದವರು ವಾಸಿಸುತ್ತಿದ್ದು, ಅವರಿಗೆ ನೀರು, ವಿದ್ಯುತ್ ಸಂಪರ್ಕ ನೀಡಿಲ್ಲವೆಂದು ಮಹಿಳೆಯೋರ್ವರು ಸಚಿವ ಶ್ರೀರಾಮುಲು ಎದುರು ಅಳಲು ತೋಡಿಕೊಂಡರು. ಪಟ್ಟಣದ ಲೋಕೋಪಯೋಗಿ ಪರಿವೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾಗ ಮಹಿಳೆ ಕುಟುಂಬಗಳ ಸ್ಥಿತಿಯನ್ನು ಸಚಿವರ ಎದುರು ತೆರೆದಿಟ್ಟರು.
ಇದಕ್ಕೆ ಸ್ಪಂದಿಸಿದ ಸಚಿವರು, ತಹಸೀಲ್ದಾರ್ ಅವರನ್ನು ಕರೆದು 40 ವರ್ಷದಿಂದ ವಿದ್ಯುತ್ ನೀಡದಿರುವುದು ಹೀನಾಯ ಸ್ಥಿತಿ. ಯಾವುದೇ ಕಾರಣಕ್ಕೂ ಅವರ ಮನೆಗೆ ತಕ್ಷಣ ವಿದ್ಯುತ್ ಹಾಗೂ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು. ಉದ್ಯಮ ನಗರವನ್ನು ವಾಸ್ತವ್ಯಕ್ಕೆ ಬಳಸಲು ಸರ್ಕಾರದಲ್ಲಿ ಅವಕಾಶವಿಲ್ಲ. ಹೀಗಾಗಿ ಸ್ವಲ್ಪ ದೂರವಾದರೂ ಶಾಶ್ವತ ವಾಸ್ತವ್ಯದ ಬಗ್ಗೆ ಅಲ್ಲಿಯ ಜನರಿಗೆ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರರಿಗೆ ಶ್ರೀರಾಮುಲು ಸಲಹೆ ನೀಡಿದರು. ತುಳಸಿದಾಸ ಪಾವಸ್ಕರ ಮಾತನಾಡಿ, ನಕಲಿ ಪರಿಶಿಷ್ಟಜಾತಿಯವರಿಂದ ಇತರ ನೈಜ ಪರಿಶಿಷ್ಟಜಾತಿ, ಪರಿಶಿಷ್ಟಜನಾಂಗವರಿಗೆ ಅನ್ಯಾಯವಾಗುತ್ತಿದೆ ಎಂದರು.
ಹುಲಿಗೆ ಬೇಟೆಗೆ ಸಿದ್ಧವಾದರೆ ಯಾರೂ ತಡೆಯಲಾಗದು: ಜನಾರ್ದನ ರೆಡ್ಡಿ
ವಕೀಲ ಜಯರಾಮ ಸಿದ್ದಿ ಮಾತನಾಡಿ, ಸಿದ್ದಿ ಜನಾಂಗದವರು ಪರಿಶಿಷ್ಟಪಂಗಡಕ್ಕೆ ಸೇರಿದ್ದರೂ ಅವರಿಗೆ ಸೂಕ್ತ ಭದ್ರತೆ ಹಾಗೂ ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲ. ಸಿದ್ದಿ ಜನಾಂಗದವರು ವಾಸಿಸುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಸಿದ್ದಿ ಜನಾಂಗದವರ ಅಭಿವೃದ್ಧಿಗೆ ಸರ್ಕಾರ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು.