Asianet Suvarna News Asianet Suvarna News

Karnataka election 2023: ಭಟ್ಕಳ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಲು ಪಟ್ಟು: ಮಹಿಳೆಯರ ಪ್ರತಿಭಟನೆ

ಇಲ್ಲಿನ ಮಜ್ಲಿಸೆ ಇಸ್ಲಾ -ವ- ತಂಜೀಂ ಸಂಸ್ಥೆಯಲ್ಲಿ ಈಚೆಗೆ ನಡೆದ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಜಮಾತ್‌ ಪ್ರತಿನಿಧಿಗಳ ಸಭೆಯಲ್ಲಿ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗಳನ್ನು ತಂಜೀಂ ಬೆಂಬಲಿಸದಿರಲು ನಿರ್ಣಯ ಕೈಗೊಂಡಿರುವುದಕ್ಕೆ ಮುಸ್ಲಿಂ ಮಹಿಳೆಯರು ತಂಝೀಂ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Muslim candidate to field in Bhatkal constituency Women protest rav
Author
First Published Mar 24, 2023, 10:28 AM IST

ಭಟ್ಕಳ (ಮಾ.24) : ಇಲ್ಲಿನ ಮಜ್ಲಿಸೆ ಇಸ್ಲಾ -ವ- ತಂಜೀಂ ಸಂಸ್ಥೆಯಲ್ಲಿ ಈಚೆಗೆ ನಡೆದ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಜಮಾತ್‌ ಪ್ರತಿನಿಧಿಗಳ ಸಭೆಯಲ್ಲಿ ವಿಧಾನಸಭಾ ಚುನಾವಣೆ(Karnataka assembly election )ಗೆ ಮುಸ್ಲಿಂ ಅಭ್ಯರ್ಥಿಗಳನ್ನು ತಂಜೀಂ ಬೆಂಬಲಿಸದಿರಲು ನಿರ್ಣಯ ಕೈಗೊಂಡಿರುವುದಕ್ಕೆ ಮುಸ್ಲಿಂ ಮಹಿಳೆಯರು ತಂಝೀಂ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಂಝೀಂ ನಡೆಸಿದ ಜಮಾತ್‌ ಪ್ರತಿನಿಧಿಗಳ ಸಭೆ(Jamaat representatives meeting)ಯಲ್ಲಿ ಭಟ್ಕಳ(Bhatkal), ಶಿರಾಲಿ, ಮಂಕಿ, ಮುರ್ಡೇಶ್ವರ, ಹೊನ್ನಾವರ, ಉಪೋ›ಣಿ, ಸಂಶಿ ಮುಂತಾದ ಪ್ರದೇಶಗಳ ಜಮಾತ್‌ ಪ್ರತಿನಿಧಿಗಳು ಭಾಗವಹಿಸಿದ್ದು ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎನ್ನುವ ಒಂದು ಪಂಗಡವಾದರೆ, ಇದಕ್ಕೆ ಇನ್ನೊಂದು ಪಂಗಡ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಂತರ ಈ ಕುರಿತು ಗಂಭೀರ ಚರ್ಚೆ ಮಾಡಿ ಮತದಾನಕ್ಕೆ ಮುಂದಾದಾಗ ಮುಸ್ಲಿಂ ಅಭ್ಯರ್ಥಿ ಬೇಕು ಎನ್ನುವುದಕ್ಕೆ ಅಲ್ಪ ಮತಗಳು ಬಂದಿದ್ದು, ಬೇಡಾ ಎನ್ನುವುದಕ್ಕೆ ಹೆಚ್ಚಿನ ಮತಗಳು ಬಿದ್ದವು. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ತಂಜೀಂ ಬೆಂಬಲಿಸದಿರಲು ನಿರ್ಧರಿಸಿತ್ತು.

Bhatkal Assembly Election: ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಬೆಂಬಲವಿಲ್ಲ, ತಂಜೀಮ್‌ ನಿರ್ಧಾರ!

ತಂಝೀಂ ಬೆಂಬಲದೊಂದಿಗೆ ಜೆಡಿಎಸ್‌ನಿಂದ ಸ್ಪರ್ಧಿಸಲು ಉದ್ದೇಶಿಸಿದ್ದ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರಿಗೆ ತೀರಾ ಹಿನ್ನಡೆಯಾಗಿದೆ. ತಂಜೀಂ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನೂರಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ಬುಧವಾರ ತಂಝೀಂಗೆ ಮುತ್ತಿಗೆ ಹಾಕಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅವರನ್ನು ಗೆಲ್ಲಿಸಲು ಸುಲಭವಾಗುತ್ತದೆ. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಉತ್ತಮ ವಾತಾವರಣ ಇರುವಾಗ ತಂಜೀಂ ಅಭ್ಯರ್ಥಿ ಕಣಕ್ಕಿಳಿಸದೇ ಇರಲು ನಿರ್ಣಯಿಸಿರುವುದು ಸರಿಯಲ್ಲ ಎಂದು ಮಹಿಳೆಯರು ವಾದಿಸಿದರು.

ಈ ಸಂದರ್ಭದಲ್ಲಿ ಮನವಿಯೊಂದನ್ನು ನೀಡಿದ ಮಹಿಳೆಯರು ತಂಜೀಂ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದಿರಲು ನಿರ್ಧರಿಸಿದ್ದರಿಂದ ಭಟ್ಕಳದಲ್ಲಿ ಮುಸ್ಲಿಂರಿಗೆ ಭಾರೀ ಹಿನ್ನೆಡೆಯಾಗಿದೆ. ಇಲ್ಲಿಯ ವರೆಗೆ ಸ್ಪರ್ಧಿಸಿದ ಯಾವುದೇ ಅಭ್ಯರ್ಥಿ ಇಲ್ಲಿಯ ತನಕ ನಮ್ಮ ಸಮುದಾಯಕ್ಕೆ ಸಹಾಯ ಮಾಡಿಲ್ಲ. ಕೋವಿಡ್‌ ಸಮಯದಲ್ಲಿ ತಮ್ಮ ಸಮುದಾಯ ಭಾರೀ ಸಂಕಷ್ಟಎದುರಿಸಿದರೂ ಸಹ ನಮಗೆ ಯಾರದ್ದೇ ಸಹಾಯ ದೊರೆತಿಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮವರೇ ಆದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಅವರು ಚುನಾವಣೆಯಲ್ಲಿ ಸೋಲುವುದಾದರೂ ತೊಂದರೆ ಇಲ್ಲ, ನಾವು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಲೇಬೇಕು. ತಂಝೀಂ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ನಾವು ನಮಗೆ ಸಂವಿಧಾನಾತ್ಮಕವಾಗಿ ನೀಡಿದ ಮತದಾನದ ಹಕ್ಕನ್ನು ಈ ಸಲ ನೋಟಾಕ್ಕೆ ಹಾಕುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದುಗಳ ಸಂಖ್ಯೆ ಇಳಿಮುಖವಾಗುತ್ತಿದೆ: ಕಲ್ಲಡ್ಕ ಪ್ರಭಾಕರ್ ಭಟ್ ಕಳವಳ...

ಆಕ್ರೋಶಗೊಂಡ ಮಹಿಳೆಯರನ್ನು ತಂಝೀಂ ಮುಖಂಡರು ಸಮಾಧಾನಿಸಲು ಯತ್ನಿಸಿದರು. ಮಹಿಳೆಯರು ಈ ಬಾರಿ ಚುನಾವಣೆಯಲ್ಲಿ ಭಟ್ಕಳ ಕ್ಷೇತ್ರದಲ್ಲಿ ಸೋಲಲಿ, ಗೆಲ್ಲಲಿ ತಂಝೀಂ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲೇಬೇಕು ಎಂದು ಪಟ್ಟು ಹಿಡಿದರು. ಮುಸ್ಲೀ ಮಹಿಳೆಯರ ದಿಢೀರ್‌ ಪ್ರತಿಭಟನೆ ತಂಜೀಂನ ತಲೆನೋವಿಗೆ ಕಾರಣವಾಗಿದ್ದು, ತೆಗೆದುಕೊಂಡು ನಿರ್ಧಾರವನ್ನೇ ಗಟ್ಟಿಮಾಡುತ್ತದೋ ಅಥವಾ ನಿರ್ಧಾರ ಬದಲಾಯಿಸುತ್ತದೋ ಎಂದು ಕಾದು ನೋಡಬೇಕು.

Follow Us:
Download App:
  • android
  • ios