ಬೆಂಗಳೂರು(ಅ.29): ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್‌ ನಾಯಕರು ಸ್ವತಂತ್ರರಾಗಿದ್ದಾರೆ. ಆದರೆ, ನಿಧನ ಹೊಂದಿರುವ ತಾಯಿ ಬಗ್ಗೆ ಮಾತನಾಡಬೇಡಿ’ ಎಂದು ಹೇಳುತ್ತಾ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿರುವ ಅವರು, ‘ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾರೆ ಎಂಬ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. 25 ವರ್ಷದ ಹಿಂದೆ ನಿಧನ ಹೊಂದಿರುವ ತಾಯಿಯನ್ನು ಹೇಗೆ ಮಾರಾಟ ಮಾಡಿಕೊಳ್ಳಲಿ? ಇಂತಹ ಹೇಳಿಕೆ ನೀಡಬೇಡಿ’ ಎಂದು ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡುತ್ತಾ ಮುನಿರತ್ನ ಗದ್ಗದಿತರಾದರು.

BJP ಅಭ್ಯರ್ಥಿ ಮುನಿರತ್ನ ಪರ ಡಿಬಾಸ್, ಖುಷ್ಬೂ ಪ್ರಚಾರ: RR ನಗರದಲ್ಲಿ ಸ್ಟಾರ್ ರಂಗು

ಯಾವುದೇ ರಾರ‍ಯಲಿಯಲ್ಲಿ ಪಕ್ಷದ ನಾಯಕರು ಇದ್ದ ವೇಳೆ ಜಿಂದಾಬಾದ್‌ ಎಂದು ಘೋಷಣೆ ಕೂಗುವುದು ಸಾಮಾನ್ಯ. ಅದೇ ರೀತಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಕಾಂಗ್ರೆಸ್‌ ನಾಯಕರು ‘ತಾಯಿ ಮಾರಿಕೊಂಡ’ ಎಂಬ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದ್ದು, ಪದ ವಾಪಸ್‌ ಪಡೆಯುವಂತೆ ಆಗ್ರಹಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.