'ಇನ್ನೊಂದು ವಾರದಲ್ಲೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ' ಶಾಕಿಂಗ್ ಭವಿಷ್ಯ ನುಡಿದ ಛಲವಾದಿ ನಾರಾಯಣಸ್ವಾಮಿ!
ಶನಿವಾರ ಬಿಜೆಪಿ ಮೈಸೂರಿಗೆ ಪಾದಯಾತ್ರೆ ಹೊರಡಲಿದೆ, ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಕುರ್ಚಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.
ಕೋಲಾರ (ಆ.3) : ಕರ್ನಾಟಕ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಭವಿಷ್ಯ ಇನ್ನು ವಾರವಷ್ಟೇ. ಶನಿವಾರ ಬಿಜೆಪಿ ಮೈಸೂರಿಗೆ ಪಾದಯಾತ್ರೆ ಹೊರಡಲಿದೆ, ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಕುರ್ಚಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕೆಂದಿದ್ದರು. ಆ ಸಂದರ್ಭದಲ್ಲಿ ಅದೃಷ್ಟವಷಾತ್ ವಾಪಸ್ ಕಳುಹಿಸಲಾಯಿತು. ಇಲ್ಲದಿದ್ದರೆ ಬಂಗಾರದ ಭೂಮಿಯ ಕೋಲಾರಕ್ಕೆ ಕೆಟ್ಟ ಹೆಸರಿನ ಶಾಪ ತಟ್ಟುತ್ತಿತ್ತು ಎಂದರು. ಪರಿಶಿಷ್ಟರ ಹಣ ದುರ್ಬಳಕೆ
ಸಿದ್ದರಾಮಯ್ಯ(Siddaramaia) ದಲಿತ ಪರ ಎಂದು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎಸ್ಸಿ,ಟಿಪಿಎಸ್ಸಿಗಳ ವಿವಿಧ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಅನುದಾನ ಗ್ಯಾರಂಟಿಗಳಿಗೆ 25369 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ ೫೨ ಸಾವಿರ ಕೋಟಿ ರು. ಇಟ್ಟಿದ್ದರೂ ಈ ಹಣವನ್ನು ಏಕೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ ಅನುದಾನ ನೇರವಾಗಿ ಚಿನ್ನದ ಅಂಗಡಿಗಳಿಗೆ ಹೇಗೆ ವರ್ಗಾವಣೆ ಮಾಡಿದರು. ಅನುದಾನ ದುರ್ಬಳಿಕೆ ಆಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದರು.ಮೈಸೂರಿನ ಮುಡಾ ಹಗರಣ
ಸಿದ್ದರಾಮಯ್ಯ ವಾಲ್ಮೀಕಿ ಹಗರಣದ ಜವಾಬ್ದಾರಿ ಹೊರಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮುಡಾ ಯೋಜನೆ(Muda scam)ಯಲ್ಲಿ 1992 - 93 ರಲ್ಲಿ ನೋಟಿಫೀಕೇಷನ್ ಆಗಿದ್ದರೂ ಡಿ ನೋಟಿಫಿಕೇಷನ್ ಜಾರಿಯಾಗಿರಲಿಲ್ಲ. ಅವರಿಗೆ ಆಗಲೇ 40 ಲಕ್ಷ ರೂ 3 ಕುಟುಂಬಗಳಿಗೆ ಪರಿಹಾರ ಘೋಷಿಸಿತ್ತು ಅವರು ಪಡೆಯದೆ ಹೋದಾಗ ನ್ಯಾಯಾಲಯದ ಸೂಚನೆಯಂತೆ ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಲಾಗಿತ್ತು ನಂತರದಲ್ಲಿ ಕುಟುಂಬದವರಿಂದ ಪತ್ರ ಪಡೆದು ಅಕ್ರಮವಾಗಿ ಡಿ. ನೋಟಿಫೀಕೇಷನ್ ಮಾಡಿದರು. ೨೦೦೪ವರೆಗೆ ಸುಮ್ಮನಿದ್ದು ನಂತರ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ನಂತರದಲ್ಲಿ ಮುಡಾ ನಿವೇಶಗಳನ್ನು ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಅವೈಜ್ಞಾನಿಕವಾಗಿ ಭೂ ಪರಿವರ್ತನೆ ಮಾಡಿಸಿ 2010 ವರೆಗೆ ತಟಸ್ಥವಾಗಿದ್ದು ನಂತರದಲ್ಲಿ ತಮ್ಮ ಪತ್ನಿಗೆ ಕುಂಕುಮ ಭಾಗ್ಯವೆಂದು ನೀಡಿದ್ದಾರೆ ಎಂದು ತಿಳಿಸಿದರು.
ಈ ನಿವೇಶವನ್ನು ಮುಡಾಗೆ ನೀಡಲಾಗಿತ್ತು ನಂತರದಲ್ಲಿ ವ್ಯವಸಾಯಕ್ಕೆಂದು ವಾಪಸ್ ಪಡೆದಿದ್ದರು, 2016 ರವರೆಗೆ ಸುಮ್ಮನಿದ್ದು ನಂತರ ಅದನ್ನು ನಿವೇಶಗಳಾಗಿ ವಿಂಗಡಿಸಿ ಶೇ 50:50 ಅನುಪಾತದಲ್ಲಿ ಹಂಚಿಕೆ ಮಾಡಿಕೊಂಡು 14 ನಿವೇಶಗಳನ್ನು ನೀಡಲು ಮುಡಾದ ಸಭೆಯ ನಡುವಳಿಕೆಯಲ್ಲೂ ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.ಸಿಎಂ ಪತ್ನಿ ಹೆಸರಿಗೆ 14 ಸೈಟ್
ಆಡಳಿತ ಸಮಿತಿ ಇಲ್ಲದೆ ಅಧಿಕಾರಿಗಳಿಗೆ ನಿವೇಶನ ಹಂಚಿಕೆ ಮಾಡಲು ಬರುವುದಿಲ್ಲ ಪರಿಹಾರ ನೀಡಿ ಪತ್ರಗಳನ್ನು ವರ್ಗಾವಣೆ ಮಾಡಿದ್ದಾರೆ. ೧೯೧೯-೧೯೨೦ರಲ್ಲಿ ಸಿದ್ದರಾಮಯ್ಯರ ಪತ್ನಿ ಹೆಸರಿಗೆ ೧೪ ನಿವೇಶನಗಳನ್ನು ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಗ ಬಿಜೆಪಿ ಸರ್ಕಾರವೇ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯರ ಭ್ರಷ್ಟಚಾರ ಬೆಳಕಿಗೆ ಬಂದಿದ್ದು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಪಾಲರು ನೀಡಿರುವ ನೋಟಿಸ್ ತಿರಸ್ಕರಿಸಿದ್ದಾರೆ. ಈಗ ಬಿಜೆಪಿಯವರ ಹಗರಣಗಳನ್ನು ಬಿಚ್ಚುತ್ತೇವೆ ಎಂದು ಬ್ಲಾಕ್ ಮೈಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಹಗರಣಗಳನ್ನು ಬೇಕಾದರೆ ಬಿಚ್ಚಲಿ ನೋಡೋಣಾ ಎಂದು ಸವಾಲ್ ಹಾಕಿದರು.
ಭೂಕುಸಿತಕ್ಕೆ ಶಾಶ್ವತ ಪರಿಹಾರಕ್ಕಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ಮರುಚಿಂತನೆ: ಸಿಎಂ ಸಿದ್ದರಾಮಯ್ಯ
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್‌ಗೌಡ, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ. ಬಿ.ವಿ.ಮಹೇಶ್, ಮಾಗೇರಿ ನಾರಾಯಣಸ್ವಾಮಿ, ಮಹೇಶ್, ರಾಜೇಶ್ ಸಿಂಗ್, ಕಪಾಲಿ, ಅಪ್ಪಿರಾಜು, ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ರಮೇಶ್, ಲೋಕೇಶ್ ಇದ್ದರು..