ನನ್ನ ವಿರುದ್ಧ ಭ್ರಷ್ಟಾಚಾರ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ: ಬೈರತಿ ಸುರೇಶ್ಗೆ ಸಂಸದೆ ಕರಂದ್ಲಾಜೆ ಸವಾಲು
ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಬೆಳಗಾವಿ (ಅ.28): ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆ ಮಾಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದೆ, ಬೈರತಿ ಸುರೇಶ ಮುಡಾ ಹಗರಣ ಬಯಲಾಗುತ್ತಿದ್ದಂತೆ ತರಾತುರಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಹೋಗಿ ಸಾವಿರಾರು ಫೈಲ್ಸ್ ತಂದು ಸುಟ್ಟು ಹಾಕಿದ್ರು. ನಾನು ಅದರ ಬಗ್ಗೆ ಧ್ವನಿ ಎತ್ತಿದ್ದೇನೆ. ತಮ್ಮ ಬಂಡವಾಳ ಬಯಲು ಮಾಡಿದ್ದಕ್ಕೆ ನನ್ನ ವಿರುದ್ಧ ವೈಯಕ್ತಿಕ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಿಮ್ಮಂತೆ ನಾನು ಲೂಟಿ ಮಾಡಲು ಬಂದಿಲ್ಲ. ಶೋಭಾ ಕರಂದ್ಲಾಜೆ ನಾನು, ಯಾವತ್ತೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದೂ ಇಲ್ಲ. ಹಾಗೇನಾದ್ರೂ ಭ್ರಷ್ಟಾಚಾರ ಮಾಡಿದ ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದು ನೇರ ಸವಾಲು ಹಾಕಿದರು.
ಸೈಟ್ ಕೊಡದಿದ್ದಕ್ಕೆ ವಿಶ್ವನಾಥ್‌ಗೆ ಸಿಟ್ಟು, ಕಡಿಮೆ ಬೆಲೆಗೆ ಎಕರೆಗಟ್ಟಲೆ ನಿವೇಶನ ಕೇಳಿದ್ದರು: ಸಚಿವ ಬೈರತಿ ಸುರೇಶ್
ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣನಿಗೆ ನೇಮಕ ಮಾಡಿದ್ದಾರೆ. ಪೊನ್ನಣ್ಣನಿಗೆ ವಿದ್ಯುತ್ ಇಲಾಖೆಗೂ ಏನು ಸಂಬಂಧ? ಪೊನ್ನಣ್ಣ ಇರೋದು ಸಿಎಂ ಕಾನೂನು ಸಲಹೆಗಾರರಾಗಿ. ಫೇಕ್ ಫೈಲ್ ಕ್ರಿಯೆಟ್ ಮಾಡಲು ಪೊನ್ನಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಅದರಲ್ಲಿ ಸ್ವತಃ ನೀವೇ ಒಂದು ಭ್ರಷ್ಟಾಚಾರ ಮಾಡಲು ಹೊರಟ್ಟಿದ್ದೀರಿ. ನಿಜವಾಗಲೂ ನನ್ನ ವಿರುದ್ಧ ನಿಮ್ಮ ಬಳಿ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಿ ನೋಡೋಣ. ಮುಡಾ ಹಗರಣ, ವಾಲ್ಮೀಕಿ ನಿಗಮ ಲೂಟಿಯಿಂದ ನಿಮಗೆ ಸಂಕಷ್ಟ ಶುರುವಾಗಿದೆ. ಮುಡಾ ಬಗ್ಗೆ ಲೋಕಾಯುಕ್ತ ತನಿಖೆ ಚುರುಕಾಗಿದೆ. ಇದರಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳು ಸಹ ಎಂಟ್ರಿಯಾಗಿವೆ. ಈ ಭಯದಿಂದ ನನ್ನ ವಿರುದ್ಧ ಆರೋಪ ಮಾಡಲು ಹೊರಟಿದ್ದೀರಿ. ಈಗಲೂ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ, ಮೈಸೂರಿನಿಂದ ಬೈರತಿ ಸುರೇಶ್ ಫೈಲ್ ತಂದು ಸುಟ್ಟು ಹಾಕಿದ್ದು ಸತ್ಯ ಎಂದು ಪುನರುಚ್ಚರಿಸಿದರು.