Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯೊಲ್ಲ: ಸಂಸದ ಸಂಗಣ್ಣ ಕರಡಿ

ಕಾಂಗ್ರೆಸ್ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಕೇವಲ ಗ್ಯಾರಂಟಿಯ ಬಗ್ಗೆ ಮಾತನಾಡುತ್ತಾರೆ. ಈಗಾಗಲೇ ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ ಮಧ್ಯೆ ಖುರ್ಚಿ ಪೈಪೋಟಿ ನಡೆದಿದೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ.

MP Sanganna Kardi  said Karnataka Congress government will not last long sat
Author
First Published Jun 23, 2023, 2:52 PM IST

ಕೊಪ್ಪಳ (ಜೂ.23): ಕಾಂಗ್ರೆಸ್ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಕೇವಲ ಗ್ಯಾರಂಟಿಯ ಬಗ್ಗೆ ಮಾತನಾಡುತ್ತಾರೆ. ಈಗಾಗಲೇ ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ ಮಧ್ಯೆ ಖುರ್ಚಿ ಪೈಪೋಟಿ ನಡೆದಿದೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. 

ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿ 9 ವರ್ಷದ ಸಾಧನೆಯನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು. 2014 ರಲ್ಲಿ ಮೋದಿ 15 ಲಕ್ಷ ರೂಪಾಯಿ ಹಾಕುತ್ತೀನಿ ಎಂದು ಕಾಂಗ್ರೆಸ್ ಟೀಕೆ ಮಾಡಿದ್ದಾರೆ. ಜನಧನ ಯೋಜನೆಯಲ್ಲಿ ಬ್ಯಾಂಕ ಅಕೌಂಟ ತೆಗೆದು ಭ್ರಷ್ಟಾಚಾರ ತಡೆದಿದ್ದೆ ಸಾಧನೆ. ಜನೌಷಧಿ ಯೋಜನೆಯನ್ನು ಜನರಿಗೆ ಉತ್ತಮ ಔಷಧಿ ನೀಡಲಾಗಿದೆ. ಕಲುಷಿತ ನೀರು ಕುಡಿದು ಜನರ ಸಾವನ್ನಪ್ಪುತ್ತಿರುವದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಿಂದಿನ ಆಡಳಿತದಲ್ಲಿ ಅಧಿಕಾರಕ್ಕೆ ಬಂದು 45 ದಿನಗಳಲ್ಲಿ ಬಂದ್ ಕರೆ ನೀಡಿರಲಿಲ್ಲ. ಆದರೆ ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗಿರುವದರಿಂದ ವ್ಯಾಪಾರಿಸ್ಥರು ಬಂದ್ ಕರೆ ನೀಡಿದ್ದರು. ಈಗಾಗಲೇ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ ಮಧ್ಯೆ ಖುರ್ಚಿ ಪೈಪೋಟಿ ನಡೆದಿದೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ನಮಗೆ ಒಂದೇ ಹೆಂಡ್ತಿ, ಮುಸ್ಲಿಂರಿಗೆ 25 ಹೆಂಡ್ರು: ಇಲ್ಲಿ ಅನ್ನ ತಿಂದೋರು ನಮ್ಮಂಗಿಬೇಕು - ಕೆ.ಎಸ್. ಈಶ್ವರಪ್ಪ

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ಶಾಸಕ ದೊಡ್ಡನಗೌಡ ಪಾಟೀಲ ರಾಜಕಾರಣ ನಿಂತ ನೀರಲ್ಲ. ಪಕ್ಷಕ್ಕೆ ಸೋಲು ಮೊದಲು ಅಲ್ಲ. ಗ್ಯಾರಂಟಿ ಕೊಟ್ಟು ಅನುಷ್ಠಾನಗೊಳಿಸಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ಕಾರಗಯಕರ್ತರು ಹೋರಾಡ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಮೂರನೆಯ ಬಾರಿ ಪ್ರಧಾನಿಯಾಗಲು ಮತ್ತೆ ಸಂಘಟಿತರಾಗಬೇಕು. ಯಾರೇದೆ ತಪ್ಪು ಇದ್ದರು ಸರಿಪಡಿಸಿಕೊಂಡು ಪಕ್ಷವನ್ನು ಮುನ್ನುಡಿಸಿಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅರಳಿಸೋಣ ಎಂದರು.

ಕಾಂಗ್ರೆಸ್ ನಾಟಕ ಮಾಡಿ ಗೆದ್ದಿದ್ದಾರೆ: ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ ಚುನಾವಣೆಯಲ್ಲಿ ಸೋಲು ಅನುಭವಿಸಿದವರಿಗೆ ಸಂಕಟ ಗೊತ್ತಾಗುತ್ತೆ. ಸೋಲು ಗೊತ್ತಿಲ್ಲಸವರಿಗೆ ಗೊತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಸುಳ್ಳು ಹೇಳೋದು ಜಾಯಮಾನ ಹಿಂದೆ ಕೃಷ್ಞೆಯ ಯೋಜನೆ ವರ್ಷಕ್ಕೆ 10 ಸಾವಿರ ಕೋಟಿ ನೀಡುವುದಾಗಿ ಸುಳ್ಳು ಹೇಳಿದ್ದಾರೆ. ಈಗ ಸುಳ್ಳು ಹೇಗೆ ಹೇಳಬೇಕು ಎನ್ನುವದನ್ನು ತಮಿಳುನಾಡಿನಿಂದ ತಜ್ಞರ ಕರೆದುಕೊಂಡು ಬಂದಿದ್ದರು. ನರೇಂದ್ರ ಮೋದಿ ಪೊಳ್ಳು ಭರವಸೆಯನ್ನು ನೀಡಿಲ್ಲ. ಕಾಂಗ್ರೆಸ್ಸಿಗೆ ಅಭಿವೃದ್ದಿ ಮಾಡಿ ಗೆದ್ದವರಲ್ಲ. ಕಾಂಗ್ರೆಸ್ ನವರ ನಾಟಕ ಮಾಡಿ ಗೆದ್ದಿದ್ದಾರೆ. ಈಗ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ವಿದ್ಯುತ್ ಏರಿಕೆಯನ್ನು ಕೆಇಆರ್ ಸಿಯವರು ನೀಡುತ್ತಾರೆ. ಹಿಂದೆ ಬೊಮ್ಮಾಯಿಯವರು ಒಪ್ಪಿಕೊಂಡಿದ್ದಿಲ್ಲ. ಆದರೆ ಈ ವಿಷಯದಲ್ಲಿ ಸಚಿವ ಎಂ ಬಿ ಪಾಟೀಲ ಅಪ್ರಬುದ್ದರಾಗಿ ಮಾತನಾಡ್ತಾರೆ ಎಂದು ಟೀಕಿಸಿದರು.

ಗ್ಯಾರಂಟಿ ಘೋಷಿಸಿ ಮಂಕುಬೂದಿ ಎರಚಿದ್ದಾರೆ: ಇದೇ ಸಂದರ್ಭದಲ್ಲಿ ಮಾತನಾಡಿದ ಎಂಎಲ್ ಸಿ ಹೇಮಲತಾ ನಾಯಕ ಕೆಲಸ ಮಾಡಿ ಸೋತಿರುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಈಗಿನ ಸರಕಾರ ಪಠ್ಯಪುಸ್ತಕದಲ್ಲಿ ಸಣ್ಣತನ ಮಾಡಿ ಸಂಕುಚಿತವಾಗಿದೆ. ಗ್ಯಾರಂಟಿಯಲ್ಲಿ ಒಂದು ಬಸ್ ಫ್ರೀಯಾಗಿ ಯಶಸ್ವಿಯಾಗಿದ್ದಾರೆ. ಆದರೆ ಅಲ್ಲಿ ಗೊಂದಲವಿದೆ.‌ ಬಸ್ ಗಳು ಕಡಿಮೆ ಇದ್ದು ಜನರಿಗೆ ಸಮಸ್ಯೆಯಾಗಿದೆ. ಗ್ಯಾರಂಟಿ ಘೋಷಿಸಿ ಮಂಕುಬೂದಿ ಎರಚಿದ್ದಾರೆ. ಮಹಿಳಾ ಮಣಿಗಳನ್ನು ಮನೆಯೊಳಗೆ ಇರದಂತೆ ಮಾಡಿದ್ದಾರೆ. ಯುವನಿಧಿಯಿಂದ ಯುವಕರು ಹಾಳಾಗುತ್ತಾರೆ. ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕೊಡಬೇಕು ಎಂದರು.

ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕೆಟ್ಟ ಕನಸು: ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ನರೇಂದ್ರ ಮೋದಿಯವರು ಜನಪರ ಯೋಜನೆಗಳನ್ನು ಮನೆಗೆ ಮುಟ್ಟಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕೆಟ್ಟ ಕನಸು ಮರೆತು ಬಿಡಬೇಕು. ಸೋಲೇ ಗೆಲುವಿನ ಮೆಟ್ಟಲು ಎಂದು ತಿಳಿದುಕೊಳ್ಳಬೇಕು‌ ಎಂದರು. ಬಿಜೆಪಿ ಮುಖಂಡ ಕೆ. ಶರಣಪ್ಪ ಮಾತನಾಡಿ ಕಾರ್ಯಕರ್ತರ ನಿರಾಸೆರಾಗಿದ್ದಾರೆ. ಆಗ ಏನೇನೊ ಅಗಿ ಸೋತಿದ್ದೇವೆ. ಕಾರ್ಯಕರ್ತರು ನಿರಾಸರಾಗಿಲ್ಲ. ಮುಂಬರುವ ಚುಮಾವಣೆಗೆ ಈಗಾಗಲೇ ಸಂಘಟನೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಯನ್ನು ವಿಧಾನಸಭೆಯಲ್ಲಿ ಆಗಿರುವ ತಪ್ಪು ಲೋಕಸಭೆಯಲ್ಲಿ ಸರಿಪಡಿಸಬೇಕು. ಹಿಂದೆ ಆಗಿರುವ ತಪ್ಪು ಮುಂದಾಗಬಾರದು ಎಂದರು.

ವೇದಿಕೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹಾಲಪ್ಪ ಆಚಾರ, ಗಿರಿಗೌಡ, ಹೇಮಲತಾ ನಾಯಕ, ಪರಣ್ಣ ಮುಮವಳ್ಳಿ, ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಕೆ ಶರಣಪ್ಪ ವಕೀಲರು. ಮಂಜುಳಾ ಕರಡಿ, ಶಿವಲೀಲಾ ದಳವಾಯಿ.ಬಸವರಾಜ ಹಳ್ಳೂರು, ಉಮೇಶ ಸಜ್ಜನ, ಪ್ರದೀಪ ಹಿಟ್ನಾಳ, ಸುನೀಲ ಹೆಸರೂರು. ಮರಿಬಸಪ್ಪ. ಇದ್ದರು.

Follow Us:
Download App:
  • android
  • ios