ನಮಗೆ ಒಂದೇ ಹೆಂಡ್ತಿ, ಮುಸ್ಲಿಂರಿಗೆ 25 ಹೆಂಡ್ರು: ಇಲ್ಲಿ ಅನ್ನ ತಿಂದೋರು ನಮ್ಮಂಗಿಬೇಕು - ಕೆ.ಎಸ್. ಈಶ್ವರಪ್ಪ

ನಮಗೆ ಒಂದೇ ಹೆಂಡತಿ ಆದರೆ ಮುಸ್ಲಿಂರಿಗೆ 25 ಹೆಂಡತಿ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಏಕರೂಪ ಕಾನೂನು ಬರುತ್ತೆ. ಇಲ್ಲಿಯ ಅನ್ನ ತಿಂದು ನಮ್ಮಂಗೆ ಇರಬೇಕು. 

Former Minister KS Eshwarappa said Hindus have only one wife but Muslims have 25 wives sat

ಕನ್ನಡಪ್ರಭ ವಾರ್ತೆ, ಕೊಪ್ಪಳ 
ಕೊಪ್ಪಳ (ಜೂ.23): ನಮಗೆ ಒಂದೇ ಹೆಂಡತಿ ಆದರೆ ಮುಸ್ಲಿಂರಿಗೆ 25 ಹೆಂಡತಿ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಏಕರೂಪ ಕಾನೂನು ಬರುತ್ತೆ. ಇಲ್ಲಿಯ ಅನ್ನ ತಿಂದು ನಮ್ಮಂಗೆ ಇರಬೇಕು. ಎಲ್ಲರು ಒಂದೇ ಎಲ್ಲರೂ ಸಮಾನರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದರು. ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಡಿ ಕೆ ಶಿವಕುಮಾರ. ಇನ್ನೂ ಒಂದು ತಿಂಗಳು ಅವಕಾಶ ನೀಡುತ್ತೇವೆ. ಜುಲೈ 4 ರೊಳಗಾಗಿ ಗ್ಯಾರಂಟಿ ಕೊಡದಿದ್ದರೆ ವಿಧಾನಸಭೆ ಹಾಗು ಹೊರಗೋ ಬಿಡೋದಿಲ್ಲ. ಹುಲಿಗೆಮ್ಮನ ಮೇಲೆ ಆಣೆ ಮಾಡಿ ಹೇಳುತ್ತೇನೆ. ಮುಂದೆ ರಾಜ್ಯದಲ್ಲಿ ಬಿಜೆಪಿ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸರಕಾರ ಐದು ವರ್ಷವಿರುವುದಿಲ್ಲ. ಈಗಾಗಲೇ ಸಿದ್ದರಾಮಯ್ಯ ಡಿ ಕೆ ಶಿವಕುಮಾರ ಮುಖ್ಯಮಂತ್ರಿ ರೇಸ್‌ ನಡೆದಿದೆ. ಚುನಾವಣೆಯಲ್ಲಿ ಸೋಲಿಗೆ ನಾವು ಎದುರೋದಿಲ್ಲ. ಏದುರಿಸುವುದಿಲ್ಲ, ನಾವು ಹೆದರೋ ಪ್ರಶ್ನೆ ಇಲ್ಲ. ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕೇವಲೇ ಇಬ್ಬರು ಗೆದ್ದಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಗೆದ್ದಿದ್ದರುವಾಗ ಎದೆ ಗುಂದಿಲ್ಲ. ಯಾವುದೊ ಚುನಾವಣೆಯಾದಾಗ ಸೋತಾಗ ಹೆದರುತ್ತೇವೇನು. ಯವುದೊ ಗ್ಯಾರಂಟಿ ತೋರಿಸಿ ಗೆದ್ದಿಲ್ಲ. ಕಾಂಗ್ರೆಸ್ಸಿನವರು ಅಧಿಕಾರ ಬಂದಿದೆ ಎಂದು ಕುಣಿಬಹುದು. ಆದರೆ ಜನ ಲೋಕಸಭೆಯಲ್ಲಿ ಸೋಲಿಸಲು ಸೆಡ್ಡುಹೊಡೆದು ತಯಾರಿಯಾಗಿದ್ದಾರೆ. ಸೋಲಿನಲ್ಲಿ ದೃತಿಗೆಡುವ ಹೇಡಿಗಳಲ್ಲ ಎಂದರು.

ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ

ಒಂದು ತಲೆಗೆ 10 ತಲೆ ಉರುಳಿಸ್ತಾರೆ:  ಸೈನಿಕರಿಗೆ ಶಸ್ತ್ರಗಳನ್ನು ಕೊಟ್ಟು ಅವರ ನಮ್ಮ ಒಬ್ಬ ಸೈನಿಕರನ್ನು ಹೊಡೆದರೆ ನೀವು ಹತ್ತು ಜನರನ್ನು ಹೊಡೆಯಿರಿ ಎಂದಿದ್ದಾರೆ. ಹೀಗಾಗಿ ಪಾಕಿಸ್ತಾನದವರು ಭಾರತದತ್ತ ತಲೆಹಾಕಿ ಮಲಗಿಕೊಳ್ಳುವುದಿಲ್ಲ. ನಿರುದ್ಯೋಗಿ ಯುವಕರಿಗೆ 3000, ಮಹಿಳೆಯರಿಗೆ 2000 ರೂಪಾಯಿ ಎಂಬ ಸುಳ್ಳು ಹೇಳಿಲ್ಲ. ನರೇಂದ್ರ ಮೋದಿಯ ಐದು ಕೆಜಿ ಅಕ್ಕಿ ಆದರೆ ಇಲ್ಲಿ ಅವನ ಫೋಟೊ. ಯಾರ ಕೇಳಿ ಅಕ್ಕಿ ಕೊಡುತ್ತೀನಿ ಎಂದಿದ್ದರು. ನರೇಂದ್ರ ಮೋದಿಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರಕ್ಕೆ ಹೆದರೋದಿಲ್ಲ ಎಂದು ಹೇಳಿದರು.

ದೇವಸ್ಥಾನದ ಜಾಗದಲ್ಲಿ ಕಟ್ಟಿದ ಮಸೀದಿ ಹೊಡೆಯುತ್ತೇವೆ:  2024 ರಲ್ಲಿ ಅಯೋದ್ಯ ರಾಮಮಂದಿರ ನಿರ್ಮಾಣವಾಗಿದೆ. ಪುಣ್ಯವಿದ್ದವರು ಉದ್ಘಾಟನೆಗೆ ಬನ್ನಿ. ಕಾಂಗ್ರೆಸ್ ರಾಮಮಂದಿರ ಕಟ್ಟೋದಿಲ್ಲ ಎಂದಿದ್ದರು. ಕಾಶಿ ವಿಶ್ವನಾಥನ ಕ್ಷೇತ್ರದಲ್ಲಿ ಈಶ್ವರ ನೀರು ತೊಳೆದುಕೊಂಡು ನಮಾಜಿಗೆ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ನಾವು ಬಿಡೋದಿಲ್ಲ. ಶ್ರದ್ಧಾ ಕೇಂದ್ರಗಳಲ್ಲಿ ಗೌರವ ತರುತ್ತೇವೆ. ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾರೊ ಅಲ್ಲಿ ಹೊಡೆದು ಮತ್ತೆ ಮಂದಿರ ಕಟ್ಟುತ್ತೇವೆ. ನಾವು ಹೊಸ ಮಸೀದಿ ಹಾಗು ಚರ್ಚಗಳನ್ಬು ಹೊಡೆಯುವದಿಲ್ಲ ಎಂದರು‌. 

ಗ್ಯಾರಂಟಿ ಜಾರಿ ತರಲಾಗದಿದ್ದರೆ ಅಧಿಕಾರ ಬಿಡಿ: ಬಿ.ಎಸ್‌.ಯಡಿಯೂರಪ್ಪ

ಈ ವೇಳೆ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೋಲಿನಿಂದ ದೃತಿಗೆಡಬಾರದು. ಜನರ ತೀರ್ಮಾನಕ್ಕೆ ಬದ್ದರಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಎಲ್ಲರೂ ಪ್ರಯತ್ನಿಸಬೇಕು. ನರೇಂದ್ರಯನ್ನು ಜಗತ್ತಿನ ಹಿರಯಣ್ಣ ಅಮೆರಿಕಾ ಸಹ ಮೋದಿಯವರನ್ನು ಹೊಗಳಿದ್ದು ಹೆಮ್ಮೆಯಾಗಿದೆ.ಸೋಲು ಗೆಲುವು ಸಹಜ. ಸೋಲನ್ನು ಏದುರಿಸುವ ಶಕ್ತಿ ಬಿಜೆಪಿಗಿದೆ. ಜಿಲ್ಲೆಯಲ್ಲಿ ಏನೇ ಸಮಸ್ಯೆ ಇದ್ದರೂ ನಿಮ್ಮೊಂದಿಗೆ ಇರುತ್ತೇವೆ ಎಂದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ, ವಿಧಾನಪರಿಷತ್‌ ಸದಸ್ಯ ಹೇಮಲತಾ ನಾಯಕ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios