ಎಚ್‌ಡಿಕೆ ಮೊದಲು ತಮ್ಮ ಮನೆ ಬೆಂಕಿ ಆರಿಸಿಕೊಳ್ಳಲಿ: ಸಂಸದ ಮುನಿಸ್ವಾಮಿ
ಮೊದಲು ನಿಮ್ಮ ಮನೆಯಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಆರಿಸಿಕೊಳ್ಳಿ, ನಂತರ ನಮ್ಮ ಪಕ್ಷದ ಬಗ್ಗೆ ಯೋಚಿಸುವಿರಂತೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಸಂಸದ ಎಸ್.ಮುನಿಸ್ವಾಮಿ ಎಚ್‌ಡಿಕೆ ಹಾಕೋದೆಲ್ಲಾ ಠುಸ್ ಬಾಂಬ್ ಎಂದು ಲೇವಡಿ ಮಾಡಿದರು.
ಕೋಲಾರ (ಫೆ.06): ಮೊದಲು ನಿಮ್ಮ ಮನೆಯಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಆರಿಸಿಕೊಳ್ಳಿ, ನಂತರ ನಮ್ಮ ಪಕ್ಷದ ಬಗ್ಗೆ ಯೋಚಿಸುವಿರಂತೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಸಂಸದ ಎಸ್.ಮುನಿಸ್ವಾಮಿ ಎಚ್‌ಡಿಕೆ ಹಾಕೋದೆಲ್ಲಾ ಠುಸ್ ಬಾಂಬ್ ಎಂದು ಲೇವಡಿ ಮಾಡಿದರು. ತಾಲೂಕಿನ ನರಸಾಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ನಿಮ್ಮ ಪಕ್ಷ, ನಿಮ್ಮ ಮನೆಯ ಗೊಂದಲ ಮೊದಲು ಪರಿಹರಿಸಿಕೊಂಡು ನಂತರ ಬಿಜೆಪಿಯಲ್ಲಿನ ಗೊಂದಲದ ಕುರಿತು ಮಾತನಾಡಿ, ಬಾಯಿ ಚಪಲಕ್ಕೆ ಏನೇನೋ ಮಾತನಾಡಬೇಡಿ ಎಂದು ಸಲಹೆ ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಪ್ರಹ್ಲಾದಜೋಷಿ ವಿರುದ್ದ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲು ಬಾಂಬ್ ಹಾಕಿದ್ದಾರೆ ಅವರದ್ದು ಬಾಂಬ್ ಅಲ್ಲ ಅದು ಠುಸ್ ಬಾಂಬ್, ಬಿಜೆಪಿಯಲ್ಲಿ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನೇ ಇದ್ದರೂ ಬಿಜೆಪಿ ಆಂತರಿಕ ವಿಚಾರ, ನಮ್ಮ ಪಕ್ಷ ಒಡೆಯುವ ಇವರ ಪ್ರಯತ್ನ ಫಲಿಸದು ಎಂದರು. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಕುಮಾರಸ್ವಾಮಿ ಅವರ ಠುಸ್‌ಬಾಂಬ್‌ಗೆ ಹೆದರುವುದಿಲ್ಲ. ಅವರ ಪಕ್ಷದಲ್ಲಿರುವವರು ಯಾರ್ಯಾರು ಕಾಂಗ್ರೆಸ್, ಬಿಜೆಪಿಗೆ ಹೋಗ್ತಾರೆ ಅದನ್ನು ಮೊದಲು ಸರಿಪಡಿಸಿಕೊಳ್ಳಲಿ ಬಿಜೆಪಿ ಉಸಾಬರಿ ಅವರಿಗೆ ಅಗತ್ಯವಿಲ್ಲ ಎಂದರು.
ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ: ಸಂಸದ ಡಿ.ಕೆ.ಸುರೇಶ್
ದೇಶದಲ್ಲಿರುವ ಒಕ್ಕಲಿಗರು, ಲಿಂಗಾಯಿತರು, ದಲಿತರು ಒಂದೇ ಪಾರ್ಟಿಯಲ್ಲಿ ಇಲ್ಲ. ಎಲ್ಲಾ ಪಕ್ಷದಲ್ಲಿ ಎಲ್ಲಾ ಸಮುದಾಯದವರಿದ್ದಾರೆ, ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ದ ಕೂಡಾ ದಲಿತ ಮುಖಂಡರು ಕರಪತ್ರ ಹಂಚಿ ವಿರೋಧ ಮಾಡ್ತಿದ್ದಾರೆ. ಮೋದಿ, ಬೊಮ್ಮಾಯಿ, ಯಡಿಯೂರಪ್ಪ, ಸಂತೋಷ್‌ಜಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಡಿಕೆಶಿ ಹೇಳಿಕೆಗೆ ಸಂಸದ ಗರಂ: ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಮುನಿಸ್ವಾಮಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಧ್ವನಿ ಕಳೆದುಕೊಂಡಿರುವ ಪಕ್ಷ ಅದಕ್ಕಾಗಿಯೇ ಅದು ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ, ಇಡೀ ದೇಶದಲ್ಲಿ ಈಗಾಗಲೇ 3,4ನೇ ಸ್ಥಾನಕ್ಕೆ ಕಾಂಗ್ರೆಸ್ ತಲುಪಿದೆ, ಒಂದು ರಾಜ್ಯದಲ್ಲಿ ಒಂದೆರಡು ಶಾಸಕರು ಗೆಲ್ಲಿಸಿಕೊಟ್ಟಲು ಸಾಧ್ಯವಾಗಿಲ್ಲ ಇದೇ ಗತಿ ಕರ್ನಾಟಕದಲ್ಲೂ ಬರಲಿದೆ ಎಂದರು. ಪ್ರಜಾಧ್ವನಿ ಯಾತ್ರೆಗೆ ಜನರೇ ಬರುತ್ತಿಲ್ಲ ಕೋಲಾರ,ಮುಳಬಾಗಿಲು, ಮಾಲೂರಿನಲ್ಲಿ ಜನರು ಬಾರದೇ ಕಳಿಸಿದ ಬಸ್‌ಗಳೂ ಖಾಲಿ ಖಾಲಿಯಾಗಿ ವಾಪಸ್ ಬರುತ್ತಿವೆ, ಜನರಿಗೆ ಸೀರೆ ಹಂಚಿ ಕರೆತಂದಿದ್ದನ್ನು ಮಾಧ್ಯಮಗಳೇ ಬಯಲಿಗೆ ತಂದಿವೆ ಎಂದರು. ಜತೆಗೆ ಜನ ಸೀರೆಗೆ ಕಿತ್ತಾಡಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಶಾಸಕ ಜಮೀರ್ ಅಹಮದ್
ದಿನೇಶ್ ಗುಂಡೂರಾವ್ ಹಂದಿ ಇರಬೇಕು: ಬಿಜೆಪಿಯವರನ್ನು ಹಂದಿಗೆ ಹೋಲಿಸಿರುವ ದಿನೇಶ್ ಗುಂಡೂರಾವ್ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ದಿನೇಶ್ ಗುಂಡೂರಾವ್ ಮತ್ತು ಅವರ ಪಕ್ಷದವರೇ ಹಂದಿಗಳಿರಬೇಕು. ತಂದೆ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿರುವ ದಿನೇಶ್‌ಗೆ ಮಾತಿನ ಮೇಲೆ ಹಿಡಿತವಿಲ್ಲ, ಸೋಲಿನ ಹತಾಶೆ ಅವರನ್ನು ಕಾಡುತ್ತಿದೆ ಎಂದು ಟೀಕಿಸಿ, ತಂದೆ ಹೆಸರು ಬಿಟ್ಟು ನಂತರ ಚುನಾವಣೆಗೆ ಸ್ಪರ್ಧಿಸಿ ರಾಜಕಾರಣ ಮಾಡಲಿ ಎಂದರು. ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಅವರು, ಮಾಲೂರಿನಲ್ಲಿ ನಂಜೇಗೌಡ, ಬಂಗಾರಪೇಟೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ, ಕೆಜಿಎಫ್‌ನಲ್ಲಿ ರೂಪಕಲಾ ಸಹಾ ಸೋಲಲಿದ್ದಾರೆ ಯಾವುದೇ ಅನುಮಾನ ಬೇಡ ಎಂದ ಅವರು, ನಮ್ಮ ಜನಪರವಾದ, ಅಭಿವೃದ್ಧಿಪರವಾದ ಆಡಳಿತ ಎಂದರು.