ಒಳ ಮೀಸಲಾತಿ ತೆಗೆಯುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. 40-50 ವರ್ಷ ಅಧಿಕಾರ ನಡೆಸಿದವರಿಗೆ ಕೆಲಸ ಮಾಡಲು ಆಗಿರಲಿಲ್ಲ. ತಾಕತ್ತಿದ್ದರೆ ಒಳ ಮೀಸಲಾತಿ ಮುಟ್ಟಿನೋಡಿ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ಗೆ ಸವಾಲು ಹಾಕಿದರು.

ಕೋಲಾರ (ಏ.13): ಒಳ ಮೀಸಲಾತಿ ತೆಗೆಯುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. 40-50 ವರ್ಷ ಅಧಿಕಾರ ನಡೆಸಿದವರಿಗೆ ಕೆಲಸ ಮಾಡಲು ಆಗಿರಲಿಲ್ಲ. ತಾಕತ್ತಿದ್ದರೆ ಒಳ ಮೀಸಲಾತಿ ಮುಟ್ಟಿನೋಡಿ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ಗೆ ಸವಾಲು ಹಾಕಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರಕಾರ ಒಳ ಮೀಸಲಾತಿ ಕುರಿತು ಉತ್ತಮ ಕೆಲಸವನ್ನು ಮಾಡಿದೆ. ಆದರೆ, ಅದನ್ನು ತೆಗೆಯುವುದಾಗಿ ಕಾಂಗ್ರೆಸ್‌ನವರು ಹೇಳುತ್ತಿದ್ದು, ದಮ್ಮು-ತಾಕತ್ತಿದ್ದರೆ ಮುಟ್ಟಲಿ ಎಂದರು.

ನಂದಿನಿ ವಿಚಾರವಾಗಿ ಕುತಂತ್ರಗಳನ್ನು ಮಾಡಿ ಏನೇನೋ ಹೇಳುತ್ತಿದ್ದಾರೆ. ಕೆಎಂಎಫ್‌ಗೆ ಯಾವ ಯಾವ ಜಿಲ್ಲೆಯವರು ಅಧ್ಯಕ್ಷರಾಗಿದ್ದಾರೆ, ರೈತರಿಗೆ ಸಹಾಯಧನ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೊಟ್ಟಾಗ ಅದನ್ನು ಯಾವ ರೀತಿ ನುಂಗಿ ನೀರು ಕುಡಿದಿದ್ದಾರೆ ಎನ್ನುವುದು ಗೊತ್ತಿದೆ. ಕೋಚಿಮುಲ್‌ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ತಮ್ಮ ಖಾಸಗಿ ವಾಹನಗಳಿಗೆ ಒಕ್ಕೂಟದ ಡೀಸೆಲ್‌ ತುಂಬಿಸಿಕೊಂಡು ಅದರಲ್ಲಿ ಸಿಕ್ಕಿಕೊಂಡು ತಪ್ಪಿತಸ್ಥರಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.

ಕ್ಷೇತ್ರದ ಅಭಿವೃದ್ಧಿ, ಹೊಸ ಆಲೋಚನೆಯೊಂದಿಗೆ ಸ್ಪರ್ಧೆ: ಶಾಸಕ ಸಿ.ಎಸ್‌.ಪುಟ್ಟರಾಜು

ಅಮುಲ್‌ ಸಂಸ್ಥಾಪಕರೊಂದಿಗೆ ನೆಹರು ಫೋಟೋ ತೆಗೆಸಿಕೊಂಡಿದ್ದಾರೆ. ರೈತರ ಹೆಸರು ಹೇಳಿಕೊಂಡು ಬೆಣ್ಣೆ, ಮೊಸರು, ಹಾಲು, ತುಪ್ಪ ತಿಂದಿರುವ ನಂಜೇಗೌಡರು ಮೊದಲು ಅದನ್ನು ತಿಳಿದುಕೊಳ್ಳಲಿ. ದೊಡ್ಲ, ಹೆರಿಟೇಜ್‌ ಮತ್ತಿತರರ ಹಾಲುಗಳು ಬೇರೆ ರಾಜ್ಯಗಳಿಂದ ಬರುವಾಗ ಕಣ್ಣು ಮುಚ್ಚಿಕೊಂಡು ಇದ್ದರಾ ಎಂದು ಪ್ರಶ್ನಿಸಿದ ಸಂಸದರು, ರಾಜಕಾರಣ ಮಾಡಲಿ, ಆದರೆ ನೀಚ ರಾಜಕಾರಣ ಬೇಡ. ನಂದಿನಿಯೊಂದಿಗೆ ಅಮುಲ್‌ ಸೇರಿದರೆ ಎಲ್ಲಾ ರಾಜ್ಯಗಳಲ್ಲಿ ಮಾರಾಟ ಮಾಡುವುದಕ್ಕೆ ಅನುಕೂಲವಾಗುತ್ತದೆ.

ಮಾಲೂರು ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ: ಮಾಲೂರು ಕ್ಷೇತ್ರದ ಬಿಜೆಪಿ ಟಿಕೇಟ್‌ ಘೋಷಣೆಯಾಗುತ್ತಿದ್ದ ಹಾಗೆ ಇಲ್ಲಿನ ಬಿಜೆಪಿ ಪಕ್ಷದ ಕಾರ‍್ಯಕರ್ತರಲ್ಲಿ ಅಕ್ರೋಶ ಸ್ಫೋಟಗೊಂಡಿದ್ದು, ಟಿಕೇಟ್‌ ಆಕಾಂಕ್ಷಿ ಹೂಡಿ ವಿಜಯಕುಮಾರ್‌ ಬೆಂಬಲಿಗರು ಬಂಡಾಯದ ಕಳಹೆ ಕೊಗಿದ್ದಾರೆ, ಇದು ರಾಜ್ಯ ಬಿಜೆಪಿಗೆ ತಲೆನೋವು ತರಲಿದೆ. ನಾಲ್ಕುವರೆ ವರ್ಷದಿಂದ ಬಿಜೆಪಿ ಸಂಘಟನೆಗೆ ದುಡಿದ ಹೂಡಿ ವಿಜಯಕುಮಾರ್‌ ಅವರನ್ನು ಬಿಟ್ಟು ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಬಂದ ಮಾಜಿ ಶಾಸಕ ಮಂಜುನಾಥ್‌ ಗೌಡ ಅವರಿಗೆ ಟಿಕೆಟ್‌ ನೀಡಿದ್ದಾರೆಂದು ಆರೋಪಿಸಿ 40 ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು, ಸಾವಿರಾರು ಕಾರ‍್ಯಕರ್ತರು ಸಾಮೂಹಿಕವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದರಲ್ಲದೆ, ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಹೂಡಿಯನ್ನು ಬೆಂಬಲಿಸುವುದಾಗಿ ಘೋಷಿಸಿದರು.

ಮಂಗಳವಾರ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದ ಪಟ್ಟಿಯಲ್ಲಿ ಮಂಜುನಾಥ್‌ ಗೌಡರಿಗೆ ಮಣೆ ಹಾಕಿರುವ ಸುದ್ದಿ ಬಂದ ತಕ್ಷಣ ರೊಚ್ಚಿಗೆದ್ದ ಸಾವಿರಾರು ಸಂಖ್ಯೆಯ ಕಾರ‍್ಯಕರ್ತರು ಬುಧವಾರ ಬೆಳಗ್ಗಿನಿಂದಲೇ ಹೂಡಿ ನಿವಾಸದ ಬಳಿ ಜಮಾಯಿಸಿ ಬಿಜೆಪಿಯೊಂದಿಗೆ ಯಾವುದೇ ರಾಜಿಗೆ ಒಳಗಾಗದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಕಾರ‍್ಯಕರ್ತರ ಒತ್ತಾಯಕ್ಕೆ ಮಣಿದು ಮಧ್ಯಾಹ್ನ 3 ಗಂಟೆಗೆ ಕಾರ‍್ಯಕರ್ತರ ಸಭೆ ಕರೆದ ಹೂಡಿ ಅವರು ಮುಖಂಡರುಗಳ ಹಾಗೂ ಕಾರ‍್ಯಕರ್ತರ ಅಭಿಪ್ರಾಯ ತಿಳಿಸುವಂತೆ ಹೇಳಿದರು.

Chamarajanagar: ಕಾಂಗ್ರೆಸ್‌ಗೆ ಸ್ಟಾರ್‌ಗಳ ಅನಿವಾರ್ಯತೆ ಇಲ್ಲ: ಎಸ್‌.ನಾರಾಯಣ್‌

ಕ್ಷೇತ್ರದಲ್ಲಿ ಕೃಷ್ಣಯ್ಯ ಶೆಟ್ಟಿನಂತರ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಿದ ಹೂಡಿ ಅವರಿಗೆ ಅನ್ಯಾಯ ಮಾಡಿ ತಾಲೂಕು ಬಿಜೆಪಿಯನ್ನು ಮಾಜಿ ಶಾಸಕರಿಗೆ ಅಡ್ಡವಿಟ್ಟಸಂಸದ ಮುನಿಸ್ವಾಮಿ ಅವರಿಗೆ ಧಿಕ್ಕಾರ ಕೂಗಿದರು. ಕಾರ‍್ಯಕರ್ತರ ಪಕ್ಷವಾಗಿದ್ದ ಬಿಜೆಪಿ ಈಗ ಕಾರ‍್ಯಕರ್ತರನ್ನೇ ತುಳಿಯುವ ಪಕ್ಷವಾಗಿದೆ ಎಂದು ಕೂಗಿದ ಸಾವಿರಾರು ಕಾರ‍್ಯಕರ್ತರು ಸಾಮೂಹಿಕವಾಗಿ ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಮುಂದಿನ ವಾರದಲ್ಲೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಕಾರ‍್ಯಕರ್ತರ ಶಕ್ತಿ ತೋರಿಸುವ ಶಪಥ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.