ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೆರವು ಸಿಎಂ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ಫುಲ್ ಗರಂ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಮುಸ್ಲಿಮರಿಗೆ ಅನುದಾನ ನೀಡಬೇಕೆಂದರೆ ನಿಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಕೊಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.
ದಾವಣಗೆರೆ (ಡಿ.10) : ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ಅನುದಾನವನ್ನೂ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಮುಸ್ಲಿಮರಿಗೆ ಅನುದಾನ ನೀಡಬೇಕೆಂದರೆ ನಿಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಕೊಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.
ಬಿಎಸ್‌ವೈ ಬಗ್ಗೆ ಮಾತಾಡಿದ್ರೆ ನಾನು ಸುಮ್ನಿರಲ್ಲ; ಸೋಮಣ್ಣ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ!
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೇವಸ್ಥಾನಗಳ ಹುಂಡಿಗಳಿಗೆ ಹಿಂದೂ ಭಕ್ತರು ನೀಡುವ ಕಾಣಿಕೆ ಹಣವನ್ನು ಮುಸ್ಲಿಮರಿಗೆ ನೀಡುತ್ತೀರಾ? ಇಡೀ ರಾಜ್ಯವೇ ಬರದಿಂದ ತತ್ತರಿಸಿದೆ. ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್ ಸರ್ಕಾರ ಹೇಳಿದಂತೆ ರೈತರ ಖಾತೆಗೆ 2 ಸಾವಿರ ರು. ಪರಿಹಾರ ಹಣ ಬಂದಿಲ್ಲ. ಒಬೊಬ್ಬ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ತುತ್ತಾದ ರೈತರಿಗೆ ಈ ವರೆಗೆ ಸರ್ಕಾರ ಬೆಳೆ ಹಾನಿ ಪರಿಹಾರವನ್ನೇ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿ:
ಕೇಸರಿ ಪೇಟ ಧರಿಸುವುದಿಲ್ಲ, ಹಣೆಗೆ ಕುಂಕುಮ ಹಚ್ಚಲು ವಿರೋಧಿಸುವ ಸಿದ್ದರಾಮಯ್ಯ, ದೇವಸ್ಥಾನದ ಹುಂಡಿ ಹಣ ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತೀರಾ? ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಮೊದಲು ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ. ಪಂಚರಾಜ್ಯದ ಚುನಾವಣೆಯಲ್ಲಿ ಸೋತು ಹತಾಶರಾದ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಮನವೊಲಿಸಲು ಏನೇನೋ ಭರವಸೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಗುತ್ತಿಗೆದಾರರ ಆರೋಪದ ಬಗ್ಗೆ ತನಿಖೆಯಾಗಲಿ:
ಕೊಟ್ಟ ಭರವಸೆಗಳ ಪೈಕಿ ಯಾವುದನ್ನೂ ಸಮರ್ಪಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ. ಶೇ.40 ಕಮಿಷನ್ ಸರ್ಕಾರ ಇದೆಂಬುದಾಗಿ ಸ್ವತಃ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಹಿರಂಗ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದರು.
ಗುತ್ತಿಗೆದಾರರ ಸಂಘದ ಮುಖಂಡರ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸ್ವತಃ ಗುತ್ತಿಗೆದಾರರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಣ ಕೊಡದೆ ಬಿಲ್ ಆಗದ ಬಗ್ಗೆ ಲಿಖಿತ ದೂರು ನೀಡಿರುವುದು ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು.
ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಅಣಜಿ ಬಸವರಾಜ ಇತರರಿದ್ದರು.
ಸಮಸ್ತ ಹಿಂದೂಗಳ ಕ್ಷಮೆ ಕೇಳಲಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಬಹಳ ದಿನ ಆಳ್ವಿಕೆ ಮಾಡಲ್ಲ, ಸಂಪೂರ್ಣ ದಿವಾಳಿಯಾಗಿ ಈ ಸರ್ಕಾರವೇ ಬಿದ್ದು ಹೋಗಲಿದೆ. ನಾವು ಯಾರ ವಿರೋಧಿಯೂ ಅಲ್ಲ. ಎಲ್ಲರಿಗೂ ಸಮಾನವಾಗಿ ಕಾಣುತ್ತೇವೆ. ಆದರೆ, ಸಿದ್ದರಾಮಯ್ಯ ಏನು ಪಾಕಿಸ್ತಾನದಲ್ಲಿ ಆಡಳಿತ ಮಾಡುತ್ತಿದ್ದಾರಾ? ಸಿದ್ದರಾಮಯ್ಯ ಹೇಳಿಕೆಯಿಂದ ಹಿಂದೂಗಳಿಗೆ ತೀವ್ರ ನೋವಾಗಿದ್ದು, ತಕ್ಷಣವೇ ಸಮಸ್ತ ಹಿಂದೂಗಳ ಕ್ಷಮೆ ಕೇಳಲಿ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಅನುದಾನ ಹೇಗೆ ಕೊಡುತ್ತಾರೋ ನೋಡೋಣ.
ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ವೀರ ಸಾವರ್ಕರ್ ಬಗ್ಗೆ ಹಗುರ ಮಾತು ಸಹಿಸಲಾಗಲ್ಲ
ವೀರ ಸಾವರ್ಕರ್ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಆದರೆ, ಇದೇ ಸಿದ್ದರಾಮಯ್ಯ ಮತಾಂಧ ಟಿಪ್ಪುವಿನ ಜಯಂತಿ ಮಾಡುತ್ತಾರೆ. ಔರಂಗಜೇಬನ ಕಟೌಟ್ ಹಾಕಿದರೂ ಸುಮ್ಮನಿರುತ್ತಾರೆ. ಸದನದಲ್ಲಿ ಸಾಬ್ರಿರಿಗೆ ನಮಸ್ತೆ ಮಾಡಬೇಕೆಂದು ಸಚಿವ ಜಮೀರ್ ಅಹಮ್ಮದ್ ವಿವಾದಾತ್ಮಕ ಹೇಳಿಕೆ ನೀಡಿ ಸಭಾಧ್ಯಕ್ಷ ಸ್ಥಾನಕ್ಕೆ ಅವಮಾನಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಪಣವಾಗಿಟ್ಟು, ಅಂಡಮಾನ್ ನಲ್ಲಿ ಕಾಲಾಪಾನಿ ಶಿಕ್ಷೆಗೆ ಗುರಿಯಾಗಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಪ್ರಿಯಾಂಕ ಖರ್ಗೆ, ಸಿದ್ದರಾಮಯ್ಯ ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡುವುದು ಸಹಿಸಲ್ಲ ಎಂದರು.
ಇನ್ಮುಂದೆ ನಾನು ನಿದ್ದೆ ಮಾಡಲ್ಲ; ರಾಜ್ಯಾದ್ಯಂತ ಓಡಾಡುವೆ: ಎಂಪಿ ರೇಣುಕಾಚಾರ್ಯ
ಜಾತಿ, ಧರ್ಮ ಎಂದು ಆರೆಸ್ಸೆಸ್ ನೋಡಲ್ಲ; ಗೂಳಿಹಟ್ಟಿ ಹೇಳಿಕೆ ಒಪ್ಪಲ್ಲ
ಆರೆಸ್ಸೆಸ್ ನಲ್ಲಿ ಭಾರತ ಮಾತೆ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಭಾರತ ಮಾತೆಯನ್ನು ನಂಬಿದವರು ಎಲ್ಲರನ್ನೂ ಸಂಘದವರು ನಮ್ಮವರು ಎನ್ನುತ್ತಾರೆ. ಜಾತಿ, ಧರ್ಮ ಎಂಬುದಾಗಿ ಯಾವುದನ್ನೂ ಆರೆಸ್ಸೆಸ್ ನೋಡುವುದಿಲ್ಲ. ನಾನೂ ನಾಗಪುರ ಕಚೇರಿಗೆ ಹೋಗಿ ಬಂದಿದ್ದೇನೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ ನನ್ನ ಸ್ನೇಹಿತ. ಆರೆಸ್ಸೆಸ್ ಬಗ್ಗೆ ಗೂಳಿಹಟ್ಟಿ ಹೇಳಿಕೆ ನಾನು ಒಪ್ಪುವುದಿಲ್ಲ. ಇಂತಹ ಆರೋಪವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.