Asianet Suvarna News Asianet Suvarna News

ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ

ಪ್ರಧಾನಿ ನರೇಂದ್ರ ಮೋದಿ ಅವರಂತ ನಾಯಕ ದೇಶದಲ್ಲಿ ಯಾರೂ ಇಲ್ಲ. ಬಡತನದಲ್ಲಿ ಹುಟ್ಟಿ, ಚಹಾ ಮಾರಿ ಮೇಲೆತ್ತರಕ್ಕೆ ಬಂದಿರುವ ಮೋದಿ ಅವರು ಬಡವರ ಬಗ್ಗೆ ಚಿಂತನೆ ಹೊಂದಿದ್ದಾರೆ. ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

MP Ramesh Jigajinagi Talks Over Pm Narendra Modi At Vijayapura gvd
Author
First Published Dec 3, 2023, 4:32 PM IST

ಇಂಡಿ (ಡಿ.03): ಪ್ರಧಾನಿ ನರೇಂದ್ರ ಮೋದಿ ಅವರಂತ ನಾಯಕ ದೇಶದಲ್ಲಿ ಯಾರೂ ಇಲ್ಲ. ಬಡತನದಲ್ಲಿ ಹುಟ್ಟಿ, ಚಹಾ ಮಾರಿ ಮೇಲೆತ್ತರಕ್ಕೆ ಬಂದಿರುವ ಮೋದಿ ಅವರು ಬಡವರ ಬಗ್ಗೆ ಚಿಂತನೆ ಹೊಂದಿದ್ದಾರೆ. ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಬಿಜೆಪಿ ಇಂಡಿ ಹಾಗೂ ಚಡಚಣ ಮಂಡಲ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ವಿಜಯಪುರ ಜಿಲ್ಲೆ ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

70 ವರ್ಷ ದೇಶವನ್ನಾಳಿದ ಇತರೆ ಪಕ್ಷದವರಿಗೆ ಬಡವರ ಬಗ್ಗೆ ಏಕೆ ಕನಿಕರ ಹುಟ್ಟಲಿಲ್ಲ. ಹೊಟ್ಟೆ ತುಂಬಿದವರಿಗೆ ಹಸಿದವರ ಕಷ್ಟ ಗೊತ್ತಾಗುವುದಿಲ್ಲ. ಹಿಂದಿನವರು ಬಡವರ ಬಗ್ಗೆ ವಿಚಾರ ಮಾಡಿಲ್ಲ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತುಂದು ಇದರಲ್ಲಿ ಕುಲಕಸಬು ಮಾಡುವ 18 ಸಮುದಾಯಗಳನ್ನು ಸೇರ್ಪಡೆ ಮಾಡಿ ಅವರು ಸ್ವಾಭಿಮಾನದಿಂದ ಬದುಕು ಸಾಗಿಸಲು ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಕಾರ್ಯಕರ್ತರು ಈ ಯೋಜನೆಯ ಪ್ರಯೋಜನವನ್ನು ತಲುಪಿಸುವ ಕೆಲಸ ಮಾಡಬೇಕು. ಈ ಜವಾಬ್ದಾರಿ ಕಾರ್ಯಕರ್ತರ ಮೇಲೆ ಇದೆ ಎಂದು ಹೇಳಿದರು.

ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ?: ಸಿದ್ದರಾಮಯ್ಯ

ಗಂಗಾ ಕಲ್ಯಾಣ ಜಾರಿ: ಕಾಂಗ್ರೆಸ್‌ ಪಕ್ಷ ದಲಿತರನ್ನು ಆರ್ಥಿಕವಾಗಿ ಮುಂದೆ ತರಬೇಕು ಎಂದು ಕುರಿ, ಕೋಳಿ ಸಾಕಾಣಿಕೆ ಮಾಡಲು ಸಾಲ ನೀಡುವ ಯೋಜನೆ ಮಾಡಿದ್ದರು. ಕುರಿ,ಕೋಳಿ ಸಾಗಾಣಿಕೆಯಿಂದ ದಲಿತರು ಉದ್ಧಾರ ಆಗಲ್ಲ ಎಂದು ತಿಳಿದು ನಾನು ಜನತಾದಳ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಜ್ಯದಲ್ಲಿ ಗಂಗಾಕಲ್ಯಾಣ ಯೋಜನೆ ಜಾರಿಗೆ ತಂದಿದ್ದೇನೆ. ದಲಿತರಿಗೆ 2 ಎಕರೆ ಭೂಮಿಯನ್ನು ನೀಡಿ, ಅದಕ್ಕೆ ಬೋರ್‌ವೆಲ್‌ ಕೊರೆಯಿಸಿ ಬದುಕು ಸಾಗಿಸಿ ಆರ್ಥಿಕವಾಗಿ ಮುಂದೆ ಬರುವಂತೆ ಮಾಡಿದ್ದೇನೆ ಎಂದು ಹೇಳಿದರು.

₹240 ಕೋಟಿ ಅನುದಾನ ಮಂಜೂರು: 1977ರಿಂದ ಇಲ್ಲಿಯವರೆಗೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವ ಇಂಡಿ ತಾಲೂಕಿನ ಹಿರಿಯರಿಗೆ ಅಭಿನಂದಿಸುತ್ತೇನೆ. ನನ್ನ ಜೀವನ ಉದ್ಧಾರ ಮಾಡಿದವರು ಇಂಡಿ ತಾಲೂಕಿನ ಹಿರಿಯರು. ಅವರನ್ನು ನೆನಪಿಸಿಕೊಳ್ಳುವುದು ನನ್ನ ಧರ್ಮ ಎಂದು ಹೇಳಿದರು. ಚಿಕ್ಕೊಡಿಯಿಂದ 3 ಬಾರಿ ಬೇರೆ ಬೇರೆ ಪಕ್ಷದಿಂದ ಗೆಲ್ಲಿಸಿದ್ದಾರೆ. ಇದಕ್ಕೆಲ್ಲಾ ನನ್ನ ವರ್ತನೆಯೇ ಕಾರಣ. ನಾನು ಇಷ್ಟು ಬೆಳವಣಿಗೆ ಹೊಂದಲು ನನ್ನ ವರ್ತನೆಯೇ ಕಾರಣ ಎಂದು ಹೇಳಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಕಾಲು ಹಿಡಿದು ₹60 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದರಿಂದ ಇಂದು ಇಂಡಿಗೆ ಕಾಲುವೆ ಮೂಲಕ ನೀರು ಬಂದಿದೆ. 

ಚಡಚಣದ 9 ಗ್ರಾಮಗಳು ನೀರಾವರಿಗೆ ಒಳಪಡೆ ಇರುವುದರಿಂದ ಅವುಗಳನ್ನು ನೀರಾವರಿಗೆ ಒಳಪಡಿಸಲು ನಾಗಠಾಣ ಶಾಸಕ ಹಾಗೂ ನಾನು ಚಿಂತನೆ ಮಾಡಿದ್ದೇವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಆರಂಭಗೊಂಡಿದೆ. ಕಾರಜೋಳ ಅವರು ನೀರಾವರಿ ಸಚಿವರಿದ್ದಾಗ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ₹280 ಕೋಟಿ ಹಾಗೂ ಇಂಡಿ ತಾಲೂಕಿನ 4 ಕೆರೆಗಳನ್ನು ತುಂಬಿಸಲು ₹240 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವಿವೇಕ ಡಬ್ಬಿ ,ಅನಿಲ ಜಮಾದಾರ, ಮಲ್ಲಿಕಾರ್ಜುನ ಕಿವಡೆ, ಸಾಬು ಮಾಶ್ಯಾಳ, ಸಿದ್ದಲಿಂಗ ಹಂಜಗಿ, ಕಾಸುಗೌಡ ಬಿರಾದಾರ ಮಾತನಾಡಿದರು. ಚಡಚಣ ಮಂಡಲ ಅಧ್ಯಕ್ಷ ರಾಮ ಅವಟಿ, ಹಣಮಂತ್ರಾಯಗೌಡ ಪಾಟೀಲ, ರಾಜಕುಮಾರ ಸಗಾಯಿ,ರವಿ ವಗ್ಗೆ, ಯಲ್ಲಪ್ಪ ಹದರಿ,ಶ್ರೀಶೈಲ ಮದರಿ, ವಿಜಯಲಕ್ಷ್ಮಿ ರೂಗಿಮಠ, ಸಂಜು ಐಹೋಳೆ ವೇದಿಕೆ ಮೇಲಿದ್ದರು.

ಮಧು ಬಂಗಾರಪ್ಪಗೆ ಅಧಿಕಾರದ ಮದ ನೆತ್ತಿಗೆ: ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

ಈ ವೇಳೆ ಭೀಮರಾಯಗೌಡ ಮದರಖಂಡಿ, ವಿಜು ಮಾನೆ, ಅನಿಲಗೌಡ ಬಿರಾದಾರ, ರಾಚು ಬಡಿಗೇರ, ಪ್ರಶಾಂತ ಗವಳಿ, ಸುರೇಶ ಕುಲಕರ್ಣಿ, ದೇವೆಂದ್ರ ಕುಂಬಾರ, ಶಾಂತು ಕಂಬಾರ, ಮಹಾದೇವ ಗುಡ್ಡೊಡಗಿ, ರಾಮಸಿಂಗ ಕನ್ನೊಳ್ಳಿ,ಸಂತೋಷಗೌಡ ಪಾಟೀಲ, ರಮೇಶ ಧರೆನವರ, ಅಶೋಕಗೌಡ ಬಿರಾದಾರ, ಮಲ್ಲು ವಾಲೀಕಾರ, ವಿಜು ಮೂರಮನ, ಸುನಂದಾ ಗಿರಣಿವಡ್ಡರ, ರಾಜಶೇಖರ ಯರಗಲ್ಲ, ಅಶೋಕ ಅಕಲಾದಿ,ಧರ್ಮು ಮದರಖಂಡಿ,ದತ್ತಾ ಬಂಡೆನವರ, ಸತೀಶ ಬೊಳೆಗಾಂವ ಮೊದಲಾದವರು ಸಭೆಯಲ್ಲಿ ಇದ್ದರು.

Follow Us:
Download App:
  • android
  • ios