Asianet Suvarna News Asianet Suvarna News

ಕಾಂಗ್ರೆ​ಸ್‌ಗೆ ಮತ ನೀಡಿದರೆ ತಾಲಿ​ಬಾನ್‌ ಸರ್ಕಾರ ಮಾಡ್ತಾ​ರೆ; ರಾಯಚೂರಲ್ಲಿ ಗರ್ಜಿಸಿದ ಸಿಂಹ

ಓಸಾಮಾಬಿನ್‌ ಲಾಡೆನ್‌, ಮುಲ್ಲ ಓಮರ್‌ಗಳಿಗೆ ಅಧಿಕಾರ ಕೊಟ್ಟರೆ ರಾಜ್ಯ​ದಲ್ಲಿ ತಾಲಿ​ಬಾನ್‌ ಸರ್ಕಾ​ರ ಆಡ​ಳಿ​ತಕ್ಕೆ ತರು​ತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಕಾಂಗ್ರೆಸ್ ವಿರುದ್ಧ ಗುಡು​ಗಿ​ದ​ರು.

MP pratapa Simha campaigned on behalf of BJP candidate Tipparaju Havaldar at raichur constituency rav
Author
First Published May 6, 2023, 4:11 PM IST

ರಾಯ​ಚೂರು (ಮೇ.6) : ಓಸಾಮಾಬಿನ್‌ ಲಾಡೆನ್‌, ಮುಲ್ಲ ಓಮರ್‌ಗಳಿಗೆ ಅಧಿಕಾರ ಕೊಟ್ಟರೆ ರಾಜ್ಯ​ದಲ್ಲಿ ತಾಲಿ​ಬಾನ್‌ ಸರ್ಕಾ​ರ ಆಡ​ಳಿ​ತಕ್ಕೆ ತರು​ತ್ತಾರೆ ಎಂದು ಸಂಸದ ಪ್ರತಾಪ ಸಿಂಹ ಗುಡು​ಗಿ​ದ​ರು.

ತಾಲೂಕಿನ ಯಾಪಲದಿನ್ನಿ ಗ್ರಾಮ​ದಲ್ಲಿ ಶುಕ್ರ​ವಾರ ಹಮ್ಮಿ​ಕೊಂಡಿದ್ದ ರಾಯ​ಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪ​ರಾಜು ಹವ​ಲ್ದಾರ್‌ ಅವರ ಪರ​ವಾದ ಪ್ರಚಾರ ಸಮಾ​ವೇಶ​ದಲ್ಲಿ ಮಾತ​ನಾ​ಡಿ​ದ ಅವರು, ಡಿ.ಕೆ.ಶಿವ​ಕು​ಮಾರ ರಾಮ​ನ​ಗ​ರ​ದ​ಲ್ಲಿದ್ದ ಶಿವ​ನ​ ಬೆ​ಟ್ಟವನ್ನು ಯೇಸು ಬೆಟ್ಟಮಾಡಿ​ದರು. ಸಿದ್ದ​ರಾ​ಮಯ್ಯ ಟಿಪ್ಪು​ವಿನ ಜನ್ಮಕುಂಡಲಿ ಬರೆ​ಸಿ​ದ್ದಾರೆ. ಇದೀಗ ಕಾಂಗ್ರೆಸ್‌ ಪ್ರಣಾ​ಳಿ​ಕೆ​ಯಲ್ಲಿ ಬಜ​ರಂಗ​ದಳ ನಿಷೇ​ಧಿ​ಸು​ವು​ದಾಗಿ ಹೇಳಿ​ದ್ದಾರೆ. ಅದ​ಕ್ಕಾ​ಗಿಯೇ ಡಿಕೆಶಿ ಅವರ ಹೆಲಿ​ಕಾ​ಪ್ಟ​ರ್‌ಗೆ ಹದ್ದು ಹೊಡೆ​ದಿದೆ. ಸಿದ್ದ​ರಾ​ಮ​ಯ್ಯನ ಕಾರಿನ ಮೇಲೆ ಕಾಗೆ ಕುಳಿ​ತಿದೆ. ಇದು ಕಾಂಗ್ರೆಸ್‌ ನಾಯ​ಕ​ರನ್ನು ಕಂಡರೆ ಪ್ರಾಣಿ-ಪಕ್ಷಿ​ಗ​ಳಿಗೂ ಆಗಲ್ಲ ಎನ್ನು​ವು​ದನ್ನು ತಿಳಿ​ಯು​ತ್ತಿದೆ ಎಂದು ಡಿ.ಕೆ ಶಿವ​ಕು​ಮಾರ್‌ ಸಿದ್ದ​ರಾ​ಮ​ಯ್ಯ(Siddaramaiah)ಗೆ ಟಾಂಗ್ ನೀಡಿ​ದರು.

KARNATAKA ELECTION 2023: ಮಸ್ಕಿ ಕ್ಷೇತ್ರ ವಶಕ್ಕೆ ಮುಂದು​ವ​ರಿದ ಗೌಡರ ಕದನ

ಸಿದ್ದರಾಮಯ್ಯ ವರುಣಾದಲ್ಲಿ ಮನೆಗೆ ಹೋಗುವುದು ನಿಶ್ಚಿತ. ಸ್ವಂತ ಕ್ಷೇತ್ರ​ದಲ್ಲಿ ಗೆಲ್ಲಲು ತಿಣ​ಕಾ​ಡು​ತ್ತಿ​ರುವ ಅವರು ರಾಜ್ಯದ ಸಿಎಂ ಆಗಲು ಹೊರ​ಟಿ​ದ್ದಾರೆ. ಹಿಂದೆ ವರು​ಣಾ​ದಲ್ಲಿ ನಾಮ​ಪತ್ರ ಹಾಕಿದ ನಂತರ ಬರು​ವು​ದಿಲ್ಲ ಎಂದಿದ್ದ ಸಿದ್ದ​ರಾ​ಮಯ್ಯ ಬಿಜೆಪಿ ಅಭ್ಯರ್ಥಿ ವಿ.ಸೋ​ಮಣ್ಣ ಅವ​ರಿಗೆ ಟಿಕೆಟ್‌ ಸಿಕ್ಕ ನಂತರ ಸೋಲಿನ ಭೀತಿ ಶುರು​ವಾ​ಗಿದೆ ಎಂದು ಹೇಳಿ​ದ​ರು.

ಕಾಂಗ್ರೆಸ್‌ನವರು ಪುಕ್ಕಟೆ ಯೋಜನೆಗಳು ಬಗ್ಗೆ ಮಾತನಾಡುತ್ತಾರೆ ಹೊರತು ಅವರಿಗೆ ದೂರದೃಷ್ಟಿಯಿಲ್ಲ. ಸಿದ್ದರಾಮಯ್ಯರನ್ನು ಮೈಸೂರು ಜನರೆ ನಂಬುವುದಿಲ್ಲ. ಹಾಲಿ ಸಿಎಂರನ್ನು 35 ಸಾವಿರ ಮತಗಳ ಅಂತರದಿಂದ ಜನರು ಗೆಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾ​ರಂಭ​ದಲ್ಲಿ ಕೇಂದ್ರ ಸಚಿವ ಡಾ.ಮ​ನ​ಸುಖ ಮಾಂಡ​ವೀಯ, ಬಿಜೆಪಿ ರಾಷ್ಟ್ರೀಯ ಉಪಾ​ಧ್ಯಕ್ಷೆ, ರಾಜ್ಯ ಉಸ್ತು​ವಾರಿ ಡಿ.ಕೆ.​ಅ​ರು​ಣಾ, ಅಭ್ಯರ್ಥಿ ತಿಪ್ಪ​ರಾಜು ಹವ​ಲ್ದಾ​ರ,​ಸಂಸದ ರಾಜಾ ಅಮ​ರೇ​ಶ್ವರ ನಾಯಕ ಮಾತ​ನಾ​ಡಿ​ದರು.

ದೇವದುರ್ಗ: ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!

ಈ ಸಂದ​ರ್ಭ​ದಲ್ಲಿ ಮಾಜಿ ಎಂಎಲ್ಸಿ ಎನ್‌.​ಶಂಕ್ರಪ್ಪ, ಬಿಜೆಪಿ ಜಿಲ್ಲಾ​ಧ್ಯಕ್ಷ ರಮಾ​ನಂದ ಯಾದವ್‌, ಎಪಿ​ಎಂಸಿ ಅಧ್ಯಕ್ಷ ಅಚು​ತ​ರೆಡ್ಡಿ, ಮುಖಂಡ​ರಾದ ಎನ್‌.​ಕೇ​ಶ​ವ​ರೆಡ್ಡಿ, ಎಚ್‌.​ಜ​ಗ​ದೀಶ ಸೇರಿ​ದಂತೆ ಪಕ್ಷದ ವಿವಿಧ ಮೋರ್ಚಾ​ಗಳ ಪ್ರಮು​ಖ​ರು, ​ಕಾ​ರ್ಯ​ಕ​ರ್ತರು, ಅಪಾ​ರ ​ಸಂಖ್ಯೆ​ಯಲ್ಲಿ ಜನರು ಭಾಗ​ವ​ಹಿ​ದ್ದ​ರು.

Follow Us:
Download App:
  • android
  • ios