Karnataka election 2023: ಮಸ್ಕಿ ಕ್ಷೇತ್ರ ವಶಕ್ಕೆ ಮುಂದು​ವ​ರಿದ ಗೌಡರ ಕದನ

ವಿಧಾನಸಭಾ ಚುನಾ​ವ​ಣೆಗೆ ಮಸ್ಕಿ ಕಣ​ದಲ್ಲಿ 7 ಜನ​ರಿದ್ದು, ಅವರ ಪೈಕಿ ಬಿಜೆ​ಪಿ-ಕಾಂಗ್ರೆಸ್‌ ನಡುವೆಯೇ ನೇರ ಹಣಾ​ಹಣಿ ಸಾಗಿದೆ. ಕಣ​ದಲ್ಲಿ ಬಿಜೆ​ಪಿಯ ಪ್ರತಾ​ಪ​ಗೌಡ ಪಾಟೀಲ್‌, ಕಾಂಗ್ರೆ​ಸ್‌ ಬಸನಗೌಡ ತುರ್ವಿಹಾಳ, ಜೆಡಿ​ಎ​ಸ್‌​ನ ರಾಘವೇಂದ್ರ ನಾಯಕ ಬಳಗನೂರು, ಕರ್ನಾ​ಟಕ ರಾಷ್ಟ್ರ ಸಮಿ​ತಿ​ಯಿಂದ ಗಂಗಮ್ಮ ಅಂಕುಶದೊಡ್ಡಿ ಮತ್ತು ಸೋಮನಗೌಡ, ಈಶಪ್ಪಗೌಡ ಮಾಲೀಪಾಟೀಲ್‌ ಹಾಗೂ ಹನುಮಂತಪ್ಪ ಅವರು ಪಕ್ಷೇ​ತರಾಗಿ ಸ್ಪರ್ಧಿ​ಸು​ತ್ತಿ​ದ್ದಾರೆ

Maski assembly constituency Competition between Congress and BJP at raichur rav

ರಾಮಕೃಷ್ಣ ದಾಸರಿ

ರಾಯ​ಚೂರು (ಮೇ.6) : ಕಳೆದ ಐದು ವರ್ಷ​ದಲ್ಲಿ ಎರಡು ಚುನಾ​ವ​ಣೆ​ಗ​ಳನ್ನು ಎದು​ರಿ​ಸಿದ ಮಸ್ಕಿ ವಿಧಾ​ನ​ಸಭಾ ಕ್ಷೇತ್ರದ ಮತ​ದಾ​ರರು ಈ ಸಲ ಯಾರನ್ನು ಆಯ್ಕೆ ಮಾಡ​ಲಿ​ದ್ದಾರೆ ಎನ್ನುವ ಕುತೂ​ಹಲ ಎಲ್ಲೆಡೆ ಮನೆ​ಮಾ​ಡಿದೆ. 2018ರಲ್ಲಿ ವಿಧಾನ​ಸಭಾ ಸಾರ್ವ​ತ್ರಿಕ ಚುನಾ​ವಣೆ ಕಂಡಿದ್ದ ಕ್ಷೇತ್ರದ ಮತ​ದಾ​ರರು ಬದ​ಲಾದ ರಾಜ​ಕೀಯ ಪರಿ​ಸ್ಥಿ​ತಿ​ಯಿಂದಾಗಿ 2021ರಲ್ಲಿ ಉಪ​ಚು​ನಾ​ವ​ಣೆ​ಯನ್ನು ಎದು​ರಿ​ಸ​ಬೇ​ಕಾ​ಗಿತ್ತು. ಈ ಬಾರಿ ಯಾರ ಪರ​ವಾಗಿ ಒಲ​ವನ್ನು ತೋರು​ತ್ತಿ​ದ್ದಾರೆ ಎನ್ನುವ ಗುಟ್ಟನ್ನು ಮತದಾರರು ಬಿಟ್ಟು​ಕೊ​ಡು​ತ್ತಿ​ಲ್ಲ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಫಲದಿಂದ ಹೊಸದಾಗಿ ಉದಯಗೊಂಡು ಪರಿ​ಶಿಷ್ಟಪಂಗ​ಡಕ್ಕೆ ಮೀಸ​ಲಿ​ನ ಮಸ್ಕಿ ವಿಧಾನಸಭಾ ಕ್ಷೇತ್ರವು ಕಳೆದ ಮೂರು ಸಾರ್ವ​ತ್ರಿಕ ಮತ್ತು ಒಂದು ಉಪ​ಚು​ನಾ​ವ​ಣೆ​ಯನ್ನು ಎದು​ರಿಸಿ ಇದೀಗ ನಾಲ್ಕ​ನೇ ಚುನಾ​ವ​ಣೆಗೆ ಸಿದ್ಧ​ಗೊಂಡಿದೆ. ಎರಡು ವರ್ಷ​ಗಳ ಹಿಂದೆ ನಡೆ​ದಿದ್ದ ಉಪ​ಚು​ನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿಸಿ ಗೆದ್ದು ಮೊದಲ ಸಲ ಶಾಸ​ಕ​ರಾ​ಗಿ ಆಯ್ಕೆ​ಯಾ​ಗಿ​ರುವ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವ​ರನ್ನು ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಮಣಿಸಿ ತಿರು​ಗೇಟು ನೀಡ​ಲು ಬಿಜೆಪಿ ಪಣ​ತೊ​ಟ್ಟಿದ್ದು, ಆ ನಿಟ್ಟಿ​ನಲ್ಲಿ ಪಕ್ಷದ ಅಭ್ಯರ್ಥಿ ಪ್ರತಾ​ಪ​ಗೌಡ ಪಾಟೀಲ್‌ ರಣ​ತಂತ್ರ ರೂಪಿ​ಸು​ತ್ತಿ​ದ್ದಾ​ರೆ.

ದೇಶದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ: ಬಿಎಸ್‌ವೈ

ಕ್ಷೇತ್ರದ ಇತಿ​ಹಾಸ:

ಇತಿಹಾಸ ಪ್ರಸಿದ್ಧವಾದ ಅಶೋಕ ಶಿಲಾ ಶಾಸನವಿರುವ ಹೆಗ್ಗಳಿಕೆ ಹೊಂದಿರುವ ಮಸ್ಕಿ(Maski assembly constituency)ಯಲ್ಲಿ ಲಿಂಗಸುಗೂರು ತಾಲೂಕಿನ 54, ಸಿಂಧನೂರು ತಾಲೂಕಿನ 74 ಮತ್ತು ಮಾನ್ವಿ ತಾಲೂಕಿನ 42 ಹಳ್ಳಿಗಳನ್ನು ಸೇರಿಸಿ ಪುನರ್‌ ವಿಂಗ​ಡಿ​ಸ​ಲಾ​ಗಿತ್ತು. ಈ ಹಿಂದೆ ಮೂರು ತಾಲೂಕುಗಳನ್ನೊಳಗೊಂಡ ಕ್ಷೇತ್ರವು ಇದೀಗ ನೂತನ ತಾಲೂಕಾಗಿ ಮಾರ್ಪಟ್ಟಿದ್ದು, ಮಸ್ಕಿ, ಹಾಲಾಪೂರು, ಗುಡದೂರು, ಪಾಮನಕಲ್ಲೂರು, ಬಳಗಾನೂರು, ಗುಂಜಳ್ಳಿ, ತುರ್ವಿಹಾಳ ಸೇರಿದಂತೆ ಒಟ್ಟು 7 ಹೋಬಳಿಗಳು ಹಾಗೂ 123 ಹಳ್ಳಿಗಳು ಮಸ್ಕಿ ವಿಧಾನಸಭಾ ವ್ಯಾಪ್ತಿಗೆ ಸೇರಿವೆ.

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ(Amaregowda Bayyapur) ಗರಡಿಯಲ್ಲಿ ಪಳಗಿದ್ದ ಪ್ರತಾಪಗೌಡ ಪಾಟೀಲ್‌(Pratap gowda patil), ಬಯ್ಯಾಪುರ ಜೊತೆಗೆ ಕಾಂಗ್ರೆಸ್‌ಗೆ ವಲಸೆ ಬಂದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರ ರಚನೆಗೊಂಡು ಪರಿಶಿಷ್ಟಪಂಗಡಕ್ಕೆ ಮೀಸಲಾಯಿತೋ ಆಗ ಬಿಜೆಪಿಗೆ ಜಿಗಿದ ಪ್ರತಾಪಗೌಡ ಟಿಕೆಟ್‌ ಗಿಟ್ಟಿಸಿಕೊಂಡು ಶಾಸಕರಾಗಿಯೂ ಆಯ್ಕೆಯಾದರು. 2008ರಲ್ಲಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್‌ 2013ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ, ಎರಡನೇ ಸಲ ಗೆಲವು ದಾಖಲಿಸಿದ್ದರು. 2018ರಲ್ಲಿ ನಡೆದ ಚುನಾ​ವ​ಣೆ​ಯಲ್ಲಿ ಅತ್ಯಂತ ಕಡಿಮೆ ಮತ​ಗಳ ಅಂತ​ರ​ದಲ್ಲಿ ಗೆಲವು ಕಂಡ ಪ್ರತಾ​ಪ​ಗೌಡ ಪಾಟೀಲ್‌ ಹ್ಯಾಟ್ರಿಕ್‌ ಬಾರಿಸಿ ಎರಡೇ ವರ್ಷ​ದಲ್ಲಿ ಶಾಸಕ ಸ್ಥಾನಕ್ಕೆ ರಾಜಿ​ನಾಮೆ ನೀಡಿ, ಬಿಜೆಪಿ ಸೇರಿ ಉಪ​ಚು​ನಾ​ವ​ಣೆಯಲ್ಲಿ ಸೋತಿ​ದ್ದರು.

ಮಸ್ಕಿ ಕ್ಷೇತ್ರ ರಚನೆಯಾಗಿ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಸ್ಪರ್ಧಿಸಿ 35,711 ಮತಗಳನ್ನು ಪಡೆದಿದ್ದರು. 28,068 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ ಅಭ್ಯರ್ಥಿ ತಿಮ್ಮಪ್ಪ ನಾಯಕ ವಿರುದ್ಧ ಪ್ರತಾಪಗೌಡ 7643 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಗೆ ಗುಡ್‌ ಬೈ ಹೇಳಿದ ಪ್ರತಾಪಗೌಡ ಪಾಟೀಲ್‌ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು 45,552 ಮತಗಳನ್ನು ಪಡೆದು ಎರಡನೇ ಸಲ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಪ್ರತಿ ಸ್ಪರ್ಧಿ ಕೆಜೆಪಿಯಿಂದ 26,405 ಮತಗಳನ್ನು ಪಡೆದಿದ್ದ ಮಾವ ಮಹಾದೇವಪ್ಪ ಗೌಡ ವಿರುದ್ಧ 19,147 ಅಂತರದಲ್ಲಿ ಗೆಲವು ಸಾಧಿಸಿದ್ದರು. ಇನ್ನು ಬಿಎಸ್‌ಆರ್‌ನ ಶೇಖರಪ್ಪ ತಳವಾರ 18,197 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

2018ರ ಚುನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿ​ಸಿ 60,387 ಮತ​ಗ​ಳನ್ನು ಪಡೆ​ದಿದ್ದ ಪ್ರತಾ​ಪ​ಗೌಡ ಪಾಟೀಲ್‌ 60,174 ಮತ​ಗ​ಳನ್ನು ಗಳಿ​ಸಿದ್ದ ಬಿಜೆಪಿ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವ​ರನ್ನು ಕೇವಲ 213 ಮತ​ಗಳ ಅಂತ​ರ​ದಿಂದ ಪರಾ​ಭ​ವ​ಗೊ​ಳಿಸಿ ಮೂರನೇ ಸಲ ಶಾಸ​ಕ​ರಾಗಿ ಆಯ್ಕೆ​ಯಾ​ಗಿ​ದ್ದರು. 2021ರಲ್ಲಿ ಉಪ​ಚು​ನಾ​ವ​ಣೆ​ಯಲ್ಲಿ ಬಿಜೆ​ಪಿ​ಯಿಂದ ಸ್ಪರ್ಧಿ​ಸಿ 55,731 ಮತ​ಗ​ಳನ್ನು ಪಡೆ​ದಿದ್ದ ಪ್ರತಾ​ಪ​ಗೌಡ ಪಾಟೀಲ್‌, ಕಾಂಗ್ರೆಸ್‌ನಿಂದ ಕಣ​ಕ್ಕಿ​ಳಿದು 86,337 ಮತ​ಗ​ಳನ್ನು ಗಳಿ​ಸಿದ್ದ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ವಿರುದ್ಧ ಬರೋ​ಬ್ಬರಿ 30,606 ಮತ​ಗಳ ಅಂತ​ರ​ದಲ್ಲಿ ಪರಾ​ಭ​ವ​ಗೊಂಡಿ​ದ್ದರು.

ಒಂದು ಉಪ​ಚು​ನಾ​ವಣೆ ಸೇರಿ ಒಟ್ಟು 4 ಚುನಾ​ವ​ಣೆ​ಗ​ಳನ್ನು ಎದು​ರಿ​ಸಿ​ರುವ ಮಸ್ಕಿ ಕ್ಷೇತ್ರದ ಮತ​ದಾ​ರರು ಮೂರು ಸಲ ಪ್ರತಾ​ಪ​ಗೌಡ ಪಾಟೀಲ್‌ ಹಾಗೂ ಒಂದು ಬಾರಿ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಅವ​ರಿಗೆ ಅವ​ಕಾಶ ನೀಡಿದ್ದಾರೆ. ಪ್ರಸಕ್ತ ಸಾರ್ವ​ತ್ರಿಕ ಚುನಾ​ವ​ಣೆ​ಯಲ್ಲಿ ಕಣ​ದಲ್ಲಿ 7 ಜನ​ರಿದ್ದು, ಅವರ ಪೈಕಿ ಬಿಜೆ​ಪಿ-ಕಾಂಗ್ರೆಸ್‌ ನಡುವೆಯೇ ನೇರ ಹಣಾ​ಹಣಿ ಸಾಗಿದೆ. ಕಣ​ದಲ್ಲಿ ಬಿಜೆ​ಪಿಯ ಪ್ರತಾ​ಪ​ಗೌಡ ಪಾಟೀಲ್‌, ಕಾಂಗ್ರೆ​ಸ್‌ ಬಸನಗೌಡ ತುರ್ವಿಹಾಳ, ಜೆಡಿ​ಎ​ಸ್‌​ನ ರಾಘವೇಂದ್ರ ನಾಯಕ ಬಳಗನೂರು, ಕರ್ನಾ​ಟಕ ರಾಷ್ಟ್ರ ಸಮಿ​ತಿ​ಯಿಂದ ಗಂಗಮ್ಮ ಅಂಕುಶದೊಡ್ಡಿ ಮತ್ತು ಸೋಮನಗೌಡ, ಈಶಪ್ಪಗೌಡ ಮಾಲೀಪಾಟೀಲ್‌ ಹಾಗೂ ಹನುಮಂತಪ್ಪ ಅವರು ಪಕ್ಷೇ​ತರಾಗಿ ಸ್ಪರ್ಧಿ​ಸು​ತ್ತಿ​ದ್ದಾರೆ. ಬಿಜೆಪಿ ಪ್ರತಾ​ಪ​ಗೌಡ ಪಾಟೀಲ್‌ ಉಪ​ಚು​ನಾ​ವಣೆ ಸೋಲಿನ ಸೇಡನ್ನು ತೀರಿ​ಸಿ​ಕೊ​ಳ್ಳುವ ತವ​ಕ​ದಲ್ಲಿದ್ದರೆ, ಪೂರ್ಣ ಪ್ರಮಾ​ಣದ ಅವ​ಧಿಗೆ ಶಾಸ​ಕ​ರಾ​ಗಲು ಕಾಂಗ್ರೆ​ಸ್‌ನ ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಶಕ್ತಿ​ ಮೀರಿ ಪ್ರಯ​ತ್ನಿ​ಸು​ತ್ತಿ​ದ್ದಾ​ರೆ.

'ಮಸ್ಕಿಗೆ ಬರು​ವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಪ್ಪು ಬಾವುಟ ಪ್ರದರ್ಶನ'

ಮಸ್ಕಿ ಕ್ಷೇತ್ರದ ಮತದಾರರ ಸಂಖ್ಯೆ

  • ಒಟ್ಟು 2,10,036
  • ಪುರುಷರು 1,03,132
  • ಮಹಿಳೆಯರು 1,06,898
  • ಇತ​ರೆ 06

ಜಾತಿ ಲೆಕ್ಕಾಚಾರ

  • ಲಿಂಗಾಯತು 30,000
  • ಪರಿಶಿಷ್ಟಪಂಗಡ 48,000
  • ಪರಿಶಿಷ್ಟಜಾತಿ 35,000
  • ಕುರುಬರು 26,000
  • ಅಲ್ಪಸಂಖ್ಯಾತರು 21,000

ಈವರೆಗೆ ಆಯ್ಕೆಯಾದವರು......

ಅವಧಿ ಅಭ್ಯರ್ಥಿ ಪಕ್ಷ

  • 2008 ಪ್ರತಾಪಗೌಡ ಪಾಟೀಲ್‌ ಬಿಜೆಪಿ
  • 2013 ಪ್ರತಾಪಗೌಡ ಪಾಟೀಲ್‌ ಕಾಂಗ್ರೆಸ್‌
  • 2018 ಪ್ರತಾ​ಪ​ಗೌಡ ಪಾಟೀ​ಲ್‌ ಕಾಂಗ್ರೆ​ಸ್‌
  • 2021(ಉ ಚು) ಆರ್‌.​ಬ​ಸ​ನ​ಗೌಡ ತುರ್ವಿ​ಹಾಳ ಕಾಂಗ್ರೆ​ಸ್‌

2018 ರ ಫಲಿತಾಂಶ

  • ಅಭ್ಯರ್ಥಿ ಅಭ್ಯರ್ಥಿ ಪಡೆದ ಮತ
  • ಪ್ರತಾಪಗೌಡ ಪಾಟೀಲ್‌ ಕಾಂಗ್ರೆಸ್‌ 60,387
  • ಆರ್‌.​ಬ​ಸ​ನ​ಗೌಡ ತುರ್ವಿ​ಹಾ​ಳ ಬಿಜೆ​ಪಿ 60,174

2021ರ ಉಪ​ಚು​ನಾ​ವಣೆ ಫಲಿ​ತಾಂಶ

ಅಭ್ಯ​ರ್ಥಿ ಪಕ್ಷ ಪಡೆದ ಮತ

  • ಆರ್‌.​ಬ​ಸ​ನ​ಗೌಡ ತುರ್ವಿ​ಹಾ​ಳ ಕಾಂಗ್ರೆ​ಸ್‌ 86,337
  • ಪ್ರತಾ​ಪ​ಗೌಡ ಪಾಟೀ​ಲ್‌ ಬಿಜೆ​ಪಿ 55,731
  • ಎಂಎ​ಸ್‌​ಕೆ01
Latest Videos
Follow Us:
Download App:
  • android
  • ios