ಭೋಪಾಲ್‌, (ಜುಲೈ.17): ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೀವ್ರ ರಾಜಕೀಯ ಬಿರುಗಾಳಿ ಎದುರಿಸುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ 2ನೇ ಸುತ್ತಿನ ರಾಜಕೀಯ ಹೈಡ್ರಾಮ ಶುರುವಾಗಿದೆ.

ಹೌದು.. ಮಧ್ಯಪ್ರದೇಶದ ಬರ್ಹಾನ್​ಪುರದ ನೇಪಾನಗರದ ಕಾಂಗ್ರೆಸ್ ಕಾಂಗ್ರೆಸ್‌ ಶಾಸಕಿ ಸುಮಿತ್ರಾ ದೇವಿ ಕಾಸ್ಡೇಕರ್‌ ಅವರು ಇಂದು (ಶುಕ್ರವಾರ) ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ರಾಜಸ್ಥಾನ ರಾಜಕೀಯ ಡ್ರಾಮಾ ಕ್ಲೈಮಾಕ್ಸ್‌ಗೆ ದಿನಾಂಕ ಫಿಕ್ಸ್! ಪೈಲಟ್ ಕಿರುನಗೆ

ರಾಜೀನಾಮೆ ನೀಡಿದ ಬೆನ್ನಲ್ಲಿಯೇ  ಸುಮಿತ್ರಾ ದೇವಿ ಕಾಸ್ಡೇಕರ್‌ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ಮೂಲಕ ಮಧ್ಯಪ್ರದೇಶದಲ್ಲಿ ಮಾರ್ಚ್​ 22ರಿಂದ ಇಲ್ಲಿಯವರೆಗೆ ಒಟ್ಟು 24 ಕಾಂಗ್ರೆಸ್​ ಎಂಎಲ್​ಎಗಳು ರಾಜೀನಾಮೆ ನೀಡಿದಂತಾಗಿದೆ. 

ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಅವರ ಬೆಂಬಲಿಗರು ಕೂಡ ಕಾಂಗ್ರೆಸ್‌ ತೊರೆದಿದ್ದರು. ಸಿಂಧಿಯಾ ಬಣದ ಶಾಸಕರ ನೆರವಿನಿಂದ ಬಿಜೆಪಿ ಮತ್ತೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. 

ಇಷ್ಟು ಮಧ್ಯಪ್ರದೇಶ ಬೆಳವಣಿಗೆ ಆಗಿದ್ದೇ ತಡ. ಅತ್ತ ಕೊರೋನಾ ಭೀತಿಯ ಮಧ್ಯೆ ರಾಜಸ್ಥಾನದಲ್ಲಿ ಹೈಡ್ರಾಮ ನಡೆದಿದ್ದು, ಕಾಂಗ್ರೆಸ್ ವಿರುದ್ಧವೇ ಸಚಿನ್ ಪೈಲೆಟ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದೇ ಚಾನ್ಸ್ ಎಂದು ಬಿಜೆಪಿ ಸಹ ರಾಜಸ್ಥಾನದ ರಾಜ ಆಗಲು ಕಸರತ್ತು ನಡೆಸಿದೆ.