Asianet Suvarna News Asianet Suvarna News

ಮಲ್ಲಿಕಾರ್ಜುನ್ ಖರ್ಗೆ ಒಂದು ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸಲಿ, ಆಮೇಲೆ ಸಿಎಂ ಆಗಲಿ ನೋಡೋಣ: ಕಟೀಲ್ ಚಾಲೆಂಜ್

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಮಲ್ಲಿಕಾರ್ಜುನ್ ಖರ್ಗೆ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ.  ಡಿಕೆ ಶಿವಕುಮಾರ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಲಿ ನೋಡೋಣ ಎಂದು ಚಾಲೆಂಜ್ ಹಾಕಿದ್ದಾರೆ.

mp nalin kumar kateel challenge to Mallikarjun Kharge to win one constituency in karnataka  gow
Author
First Published Apr 13, 2023, 4:47 PM IST

ಬೆಂಗಳೂರು (ಏ.13): ಕನಕಪುರ ಹಾಗೂ ವರುಣಾದಲ್ಲಿ ಬಿ ಎಲ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಷಿ ಸ್ಪರ್ಧೆಗೆ ಕಾಂಗ್ರೆಸ್ ನಿಂದ ಪಂಥಾಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ.  ಡಿಕೆ ಶಿವಕುಮಾರ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಲಿ ನೋಡೋಣ. ಹೇಗೂ  ಅವರು ಮುಖ್ಯಮಂತ್ರಿ ಕನಸು ಕಾಣ್ತಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಕೂಡ ಮುಖ್ಯಮಂತ್ರಿ ಆಗಬೇಕಾಗಿರೋರು ಅಲ್ವಾ..? ಅವರು ಒಂದು ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಿ ಗೆದ್ದು ತೋರಿಸಲಿ ಎಂದು ಜೋಷಿ ಮತ್ತು ಸಂತೋಷ್ ಅವರನ್ನು ಕೆಣಕಿದ್ದ ಕಾಂಗ್ರೆಸ್ ಗೆ ಮಲ್ಲಿಕಾರ್ಜುನ್ ಖರ್ಗೆ ವಿಚಾರ ಎತ್ತುವ ಮೂಲಕ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಇನ್ನು ಎಂಪಿ ಕುಮಾರಸ್ವಾಮಿ ಅವರಿಗೆ  ಮೂಡಿಗೆರೆ ಲ್ಷೇತ್ರದ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಅಸಮಾಧಾನವಾಗಿದ್ದಾರೆ. ಈ ಬಗ್ಗೆ ಮಾತನಾಡಿ ಕಟೀಲ್ ಕುಮಾರಸ್ವಾಮಿಗೆ ಅಸಮಾಧಾನ ಇದೆ‌. ಅಸಮಾಧಾನಿತರ ಜೊತೆ ಮಾತಾಡ್ತೇವೆ ಎಂದಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ ನಗರ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆ ಅವರು ಅಸಮಾಧಾನಗೊಂಡಿದ್ದು, ಈ ವಿಚಾರಕ್ಕೆ ದೆಹಲಿ ನಾಯಕರು ಮಾತಾಡ್ತಾ ಇದ್ದಾರೆ ಎಂದಿದ್ದಾರೆ. ಇನ್ನು ಮೂರನೇ ಪಟ್ಟಿಯಲ್ಲಿ ಇನ್ನಷ್ಟು ಅಚ್ಚರಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ಹೌದು ಅಚ್ಚರಿ ಇದೆ ಕಾದು ನೋಡಿ. ಇನ್ನೆರಡು ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ ಆಗಲಿದೆ ಎಂದಿದ್ದಾರೆ.

ಎರಡೂ ಪಕ್ಷಗಳಿಂದ ನನ್ನ ಮುಗಿಸಲು ಯತ್ನ: ನಾನು ಮಾಡಿದ ತಪ್ಪೇನು?

ಇನ್ನು ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್ ಗೆ ಟಿಕೆಟ್ ನೀಡದ ಬೆನ್ನಲ್ಲೇ ಅವರ ಬೆಂಬಲಿಗರ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಮಾತನಾಡಿದ ಕಟೀಲ್ ನಿನ್ನೆ ಪಕ್ಷದ ಕಚೇರಿಗೆ ಬಂದಿದ್ರು, ತಮ್ಮ ಬೇಡಿಕೆಯನ್ನು ಇಟ್ಟಿದಾರೆ. ಕರೆದು ಮಾತಾಡುವ ಕೆಲಸ ಮಾಡಿದ್ದೇನೆ  ಎಂದಿದ್ದಾರೆ.

ತಮಗೆ ಅಥವಾ ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿ ಶೆಟ್ಟರ್, ದೆಹಲಿಯಿಂದ ಬಿಎಸ್‌ವೈ ನಿವಾಸಕ್ಕೆ ಆಗಮನ!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios