ಶಾಸಕ ಮುನಿರತ್ನ ನನ್ನ ಕಾಲು ಹಿಡಿಬೇಕಿಲ್ಲ: ಸಂಸದ ಡಿ.ಕೆ.ಸುರೇಶ್
ಶಾಸಕ ಮುನಿರತ್ನ ಅವರು ಕ್ಷೇತ್ರದ ಅನುದಾನದ ಬಗ್ಗೆ ನನ್ನನ್ನು ದೂರುವ ಅಗತ್ಯವಿಲ್ಲ. ನಾನು ಸರ್ಕಾರ ಅಲ್ಲ, ಸರ್ಕಾರ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬೆಂಗಳೂರು (ಅ.12): ‘ಶಾಸಕ ಮುನಿರತ್ನ ಅವರು ಕ್ಷೇತ್ರದ ಅನುದಾನದ ಬಗ್ಗೆ ನನ್ನನ್ನು ದೂರುವ ಅಗತ್ಯವಿಲ್ಲ. ನಾನು ಸರ್ಕಾರ ಅಲ್ಲ, ಸರ್ಕಾರ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುನಿರತ್ನ ಅವರು ಅನುದಾನದ ವಿಚಾರ ಚರ್ಚಿಸುವುದಾದರೆ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಬಳಿ ಚರ್ಚಿಸಲಿ. ನನ್ನ ಕಾಲು ಹಿಡಿಯುವ ಅಗತ್ಯವಿಲ್ಲ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುನಿರತ್ನ ಬಹಳ ದೊಡ್ಡ ಸಿನಿಮಾ ನಿರ್ಮಾಪಕರು. ಅವರು ಇನ್ನೂ ಏನೇನು ಡ್ರಾಮಾ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ ಮಾಡಲಿ.
ಅಕ್ರಮ ನಡೆದಿದೆ ಎಂದು ಅವರೇ ಪತ್ರ ಬರೆದಿದ್ದಾರೆ. ಅದರ ಪ್ರಕಾರ ತನಿಖೆ ನಡೆಯುತ್ತಿದ್ದರೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಅವರು ಪತ್ರ ಬರೆದಿದ್ದು ಅದಕ್ಕೆ ನಾನು ಉತ್ತರ ನೀಡುತ್ತೇನೆ. ಬಿಬಿಎಂಪಿ ಕಮಿಷನರ್ ಅವರಿಗೆ ಬರೆದು ಅವರ ಕ್ಷೇತ್ರದ ಒಂದು ವಾರ್ಡ್ ಸಂಬಂಧಿಸಿದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಸಿಬಿಐಗೆ ಕೊಡಬೇಕು ಎಂದಿದ್ದರು. ಅದಕ್ಕೂ ಮೊದಲು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಅವರು ಇನ್ನೂ ಏನೇನು ನಾಟಕ ಆಡುತ್ತಾರೋ ನೋಡೋಣ ಎಂದರು.
ಮದುವೆಯಾಗುವ ಹುಡುಗ ಅದಿತಿ ಗಂಡನ ಥರ ಇರಬೇಕು: ನಾನು ರಶ್ಮಿಕಾ ಬಿಂಬ ಎಂದ ಸೋನು ಗೌಡ!
ಶಾಶ್ವತ ನೀರು ಸಂಗ್ರಹಣೆಗೆ ಕ್ರಮ: ಮಾವತ್ತೂರು ಕೆರೆಯಲ್ಲಿ ಶಾಶ್ವತವಾಗಿ ನೀರನ್ನು ಸಂಗ್ರಹಿಸುವ ಯೋಜನೆ ರೂಪಿಸಿದ್ದು ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿಯ ಬೂದಿಗುಪ್ಪೆ ಚಾಕನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಮಾವತ್ತೂರು ಡ್ಯಾಂನಲ್ಲಿ ನೀರು ಸಂಗ್ರಹಣೆ ಹಾಗೂ ಕಾಡು ಪ್ರಾಣಿಗಳ ಹಾವಳಿ ಕುರಿತು ಅಹವಾಲು ನೀಡಿದ್ದಾರೆ. ಈ ಭಾಗದ ರೈತರ ಜಮೀನುಗಳಲ್ಲಿ ಅಂತರ್ಜಲ ಕುಸಿದು ಬೆಳೆಗಳಿಗೆ ನೀರಿಲ್ಲವೆನ್ನುವುದು ನಮ್ಮ ಗಮನಕ್ಕೆ ಬಂದಿದೆ.
ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತದೆ: ಶಾಸಕ ಯತ್ನಾಳ್
ಇದಕ್ಕೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ 20 ಕೋಟಿ ವೆಚ್ಚದಲ್ಲಿ ಮಾವತ್ತೂರು ಕೆರೆ ತುಂಬಿಸುವ ಕಾಮಗಾರಿ ಆರಂಭಿಸಿ ತುಂಗಣಿ ಬೂದಿಗುಪ್ಪೆ ಹಾಗೂ ಆನೇಕಲ್ ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ವಿಧಾನಪ ರಿಷತ್ ಸದಸ್ಯ ಎಸ್. ರವಿ, ತಹಶೀಲ್ದಾರ್ ಸ್ಮಿತಾರಾಮು, ತಾಪಂ ಇಒ ಭೈರಪ್ಪ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ನಗರಸಭೆಯ ಮಾಜಿ ಅಧ್ಯಕ್ಷ ಕೆ ಎನ್ ದಿಲೀಪ್, ಬೂದಿಗುಪ್ಪೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ, ಉಪಾಧ್ಯಕ್ಷೆ ಪದ್ಮಮ್ಮ, ಚಾಕನಹಳ್ಳಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಗಂಗರಾಜು, ಲೋಕೋಪಯೋಗಿ ಇಲಾಖೆಯ ಟಿ.ಮೂರ್ತಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.