Asianet Suvarna News Asianet Suvarna News

ಸಚಿವ ಸುಧಾಕರ್‌ ಮೆಡಿಕಲ್‌ ಕಾಲೇಜು ಕಿತ್ಕೊಂಡರು: ಸಂಸದ ಡಿ.ಕೆ.ಸುರೇಶ್

ಕನ​ಕ​ಪು​ರ​ದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿ​ಕಲ್‌ ಕಾಲೇಜು ಸ್ಥಳಾಂತರಗೊಂಡ ವಿಚಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟ​ಡ ಹಸ್ತಾಂತರ ಸಮಾ​ರಂಭ​ದಲ್ಲಿ ಪ್ರಸ್ತಾಪಗೊಂಡು ಡಿಕೆ ಸಹೋ​ದ​ರರು ಹಾಗೂ ಆರೋಗ್ಯ ಸಚಿವ ಕೆ.ಸುಧಾ​ಕರ್‌ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. 

MP DK Suresh Slams On Minister Dr K Sudhakar gvd
Author
First Published Feb 13, 2023, 4:41 AM IST

ಕನ​ಕ​ಪುರ (ಫೆ.13): ಕನ​ಕ​ಪು​ರ​ದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿ​ಕಲ್‌ ಕಾಲೇಜು ಸ್ಥಳಾಂತರಗೊಂಡ ವಿಚಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟ​ಡ ಹಸ್ತಾಂತರ ಸಮಾ​ರಂಭ​ದಲ್ಲಿ ಪ್ರಸ್ತಾಪಗೊಂಡು ಡಿಕೆ ಸಹೋ​ದ​ರರು ಹಾಗೂ ಆರೋಗ್ಯ ಸಚಿವ ಕೆ.ಸುಧಾ​ಕರ್‌ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು. ಇನ್ಪೋಸಿಸ್‌ ಸಂಸ್ಥೆ ವತಿಯಿಂದ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಸಂಸದ ಡಿ.ಕೆ.​ಸು​ರೇಶ್‌, ನಮ್ಮ ಜೊತೆಯೇ ಇದ್ದ ಸ್ನೇಹಿತರಾದ ಸಚಿವ ಸುಧಾಕರ್‌ ಅವರು ಅನಿವಾರ್ಯ ಕಾರಣದಿಂದ ನಮ್ಮ ಮೇಲೆ ಮುನಿಸಿಕೊಂಡು ನಮ್ಮಿಂದ ದೂರವಾದರು. 

ಅಲ್ಲದೆ, ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ನಮ್ಮಿಂದ ಕಿತ್ತುಕೊಂಡು ಹೋಗಿದ್ದು ಬಹಳ ಬೇಸರ ತರಿಸಿದೆ. ಇನ್ನು ಕೆಲವೇ ದಿನಗಳಲ್ಲಿ ನಮಗೆ ಅವಕಾಶ ದೊರೆಯಲಿದೆ. ಆ ಸಮಯದಲ್ಲಿ ಸುಧಾಕರ್‌ ಅವರ ಕೈಯಿಂದಲೇ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿಸುತ್ತೇವೆ ಎಂದು ಹೇಳಿ​ದರು. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮಾತ​ನಾಡಿ, ಕನ​ಕ​ಪುರಕ್ಕೆ ಮೆಡಿ​ಕಲ್‌ ಕಾಲೇಜನ್ನು ಸಚಿವ ಸಂಪು​ಟ​ದಲ್ಲಿ ಪಾಸ್‌ ಮಾಡಿಸಿ, ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಿಸಿ, ಟೆಂಡರ್‌ ಪ್ರಕ್ರಿಯೆ ಸಹ ನಡೆ​ದಿತ್ತು. ಅಂತಹ ಸಮ​ಯ​ದ​ಲ್ಲಿ ಅದನ್ನು ವಾಪಸ್‌ ಪಡೆ​ದಿದ್ದು ನೋವಾಗಿ, ಗಾಯ​ವಾಗಿ ಉಳಿ​ದಿದೆ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದರು.

ಚುನಾ​ವಣೆಯಲ್ಲಿ ಸ್ಪರ್ಧೆಸಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್‌

ಕಾಲೇಜು ಕಿತ್ಕೊಂಡಿಲ್ಲ: ಸಮಾರಂಭ ಉದ್ಘಾಟಿಸಿ ಮಾತನಾಡಿದ ಸು​ಧಾ​ಕರ್‌, ನಮ್ಮ ಸಂಸ​ದರು ಆಗಾಗ ಮೆಡಿ​ಕಲ್‌ ಕಾಲೇಜು ಕಿತ್ತು​ಕೊಂಡು ಹೋದ​ರೆಂದು ಹೇಳು​ತ್ತಲೇ ಇರು​ತ್ತಾರೆ. ಕನ​ಕ​ಪು​ರಕ್ಕೆ ಮಂಜೂ​ರಾ​ಗಿದ್ದ ಮೆಡಿ​ಕಲ್‌ ಕಾಲೇ​ಜನ್ನು ನಾನು ತೆಗೆ​ದು​ಕೊಂಡು ಹೋಗ​ಲಿಲ್ಲ. ಸಿದ್ದ​ರಾ​ಮ​ಯ್ಯನ​ವರು ಮುಖ್ಯ​ಮಂತ್ರಿ ಆಗಿ​ದ್ದಾ​ಗಲೇ ಚಿಕ್ಕಬಳ್ಳಾಪುರಕ್ಕೆ ಮೆಡಿ​ಕಲ್‌ ಕಾಲೇಜು ಮಂಜೂ​ರಾ​ಗಿತ್ತು. ಯಡಿ​ಯೂ​ರ​ಪ್ಪ​ನ​ವರು ಬಂದ ಮೇಲೆ ಹಣ ಬಿಡು​ಗಡೆ ಮಾಡಿ​ದರು. ಮುಂದಿನ ದಿನ​ಗ​ಳಲ್ಲಿ ಕನ​ಕ​ಪು​ರದಲ್ಲೂ ಮೆಡಿ​ಕಲ್‌ ಕಾಲೇಜು ಸ್ಥಾಪ​ನೆ​ಯಾ​ಗ​ಲಿದ್ದು, ಈ ವಿಚಾ​ರ​ವಾಗಿ ಮುಖ್ಯ​ಮಂತ್ರಿ​ಗ​ಳೊಂದಿಗೆ ಚರ್ಚೆ ನಡೆ​ಸಿ​ದ್ದೇವೆ ಎಂದು ತಿರು​ಗೇಟು ನೀಡಿ​ದ​ರು. ಮೊದಲ ಬಾರಿ​ಗೆ ಕನ​ಕ​ಪು​ರಕ್ಕೆ ಬಂದಿ​ದ್ದೇನೆ. ಹಾಗಾಗಿ, ಸುಮ್ಮನೆ ಹೋಗ​ಬಾ​ರದೆಂದು ಕನ​ಕ​ಪು​ರಕ್ಕೆ ನಮ್ಮ ಕ್ಲಿನಿಕ್‌ ಹಾಗೂ ಮಹಿ​ಳೆ​ಯ​ರಿ​ಗಾಗಿ ಆಯು​ಷ್ಮತಿ ಕ್ಲಿನಿಕ್‌ನ್ನು ಮಂಜೂರು ಮಾಡು​ತ್ತಿ​ದ್ದೇನೆ ಎಂದರು.

Follow Us:
Download App:
  • android
  • ios