Asianet Suvarna News Asianet Suvarna News

'ಈ ಗ್ಯಾರಂಟಿ ಹೊಡೆತಕ್ಕ ಯಾರ್ ತಡಿತಾರ್ ರೀ' ಬಿಜೆಪಿ ಸೋಲಿಗೆ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯೆ

ಅತ್ತಿ-ಸೊಸಿ ನಡುವೆ ಜಗಳ ಹಚ್ಚಲು ಉಚಿತ ಘೋಷಣೆ ಮಾಡಿದ್ದಾರೆ. ನಮ್ಮ ಜನರ ಸೋಮಾರಿತನಕ್ಕೆ ಸಾಕ್ಷಿ ಈ ಗ್ಯಾರಂಟಿ ಯೋಜನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ದೇವೇಂದ್ರಪ್ಪ

MP Devendrappa's statement on BJPs defeat in karnataka assembly election at bellary rav
Author
First Published Jun 1, 2023, 3:28 PM IST

ಬಳ್ಳಾರಿ (ಜೂ.1) : ಅತ್ತಿ-ಸೊಸಿ ನಡುವೆ ಜಗಳ ಹಚ್ಚಲು ಉಚಿತ ಘೋಷಣೆ ಮಾಡಿದ್ದಾರೆ. ನಮ್ಮ ಜನರ ಸೋಮಾರಿತನಕ್ಕೆ ಸಾಕ್ಷಿ ಈ ಗ್ಯಾರಂಟಿ ಯೋಜನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ದೇವೇಂದ್ರಪ್ಪ

ಮೋದಿ ಬಂದ್ರೂ ಬಿಜೆಪಿ ಗೆಲ್ಲಲಿಲ್ಲ ಯಾಕೆ ಎನ್ನುವ   ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಈ ಗ್ಯಾರಂಟಿ ಹೊಡೆತಕ್ಕ ಯಾರ್ ತಡಿತಾರ್ ರೀ..? ಅತ್ತಿ ನನಗೆ ಬೇಕು ಅಂತಾಳ, ಸೊಸಿ ನನಗ ಅಂತಾಳ. ಬಿಜೆಪಿ ಸೋಲಿನ ಕಾಂಗ್ರೆಸ್ ಗ್ಯಾರಂಟಿ ಕಾರಣ ಎಂದು ಪರೋಕ್ಷವಾಗಿ ಹೇಳಿದರು.
ಫ್ರೀ  ಸ್ಕೀಂ ಘೋಷಿಸಿ ಸರ್ಕಾರ ಅತ್ತಿ ಸೊಸಿ ನಡುವೆ ಜಗಳ ತಂದಿಟ್ಟಾರ. ನನ್ನ ಹೆಸರಿನ ಅಕೌಂಟ್‌ಗೆ ಹಾಕ್ತಾರೆ ಅಂತಾ ಅತ್ತಿ, ಇಲ್ಲಾ ನನ್ನ ಹೆಸರಿಗೇ ಹಾಕೋದು ಅಂತ ಸೊಸಿ. ನನಗೆ ಬಸ್ ಫ್ರೀ ಅಂತಾ ಅತ್ತಿ ನನಗೂ ಬಸ್ ಪ್ರೀ ಅಂತಾ ಸೊಸಿ. ಇಂಥ ಗ್ಯಾರಂಟಿ ಹೊಡತದಿಂದ ನಾವು ಪ್ರಚಾರ ಮಾಡಿನೂ ಸೋತೆವು ಎಂದರು ಅತ್ತೆ ಸೊಸಿ ಫ್ರೀ ಸಿಕ್ತದೆ ಅನ್ನೋ ಕಾರಣಕ್ಕೆ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ನಮ್ಮ ಜನರು ಸೋಮಾರಿಗಳು ಬಿಟ್ಟಿ ಸಿಗುತ್ತಂದ್ರ ವೋಟು ಹಾಕ್ತಾರ ಅತ್ತೆ ಸೊಸೆ ಜಗಳ ಹಚ್ಚೋದಕ್ಕೆ, ಸೋಮಾರಿತನಕ್ಕೆ, ಬೆಂಕಿ ಹಚ್ಚೋದಕ್ಕೆ ಈ ಎಲ್ಲಾ ಗ್ಯಾರಂಟಿ ಸ್ಕೀಂ ಮಾಡಿದ್ದಾರೆ ಎನ್ನಬಹುದು

ಪಾಂಡವರ ಇಂದ್ರಪ್ರಸ್ಥ ನೋಡಿ ಕೌರವರು ಉರಿದುಕೊಂಡಿದ್ರು, ಈಗ ಸಂಸತ್ ನೋಡಿ ಕಾಂಗ್ರೆಸ್‌ಗೆ ಉರಿ: ಸಿಟಿ ರವಿ

Follow Us:
Download App:
  • android
  • ios