Asianet Suvarna News Asianet Suvarna News

ಉದಯನಿಧಿ ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿ: ಸಂಸದ ರಾಘವೇಂದ್ರ

ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿಯೊಬ್ಬ ಸನಾತನ ಧರ್ಮದ ವಿರುದ್ದ ಮಾತನಾಡಿರುವುದು ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

MP BY Raghavendra Slams On Udhayanidhi Stalin Over Sanatana Dharma gvd
Author
First Published Sep 9, 2023, 6:48 PM IST

ತೀರ್ಥಹಳ್ಳಿ (ಸೆ.09): ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಅತ್ಯಂತ ಮಹತ್ವವನ್ನು ಹೊಂದಿದೆ. ಈ ಹಬ್ಬದ ಆಚರಣೆಯಲ್ಲಿ ಸೇರಿರುವ ಮಹಿಳೆಯರನ್ನು ಕಂಡಾಗ ಭಾರತ ನಿರ್ಮಾಣದಲ್ಲಿ ಇಷ್ಟು ಸಾಕು ಎನಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಶ್ರಾವಣ ಮಾಸ ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾಸದಲ್ಲಿ ವರಮಹಾಲಕ್ಷ್ಮೀ ವ್ರತ ಸೇರಿದಂತೆ ಅನೇಕ ಪ್ರಮುಖ ಹಬ್ಬಗಳನ್ನು ಕೂಡ ಆಚರಿಸಲಾಗುತ್ತದೆ. 

ಈ ವೃತಾಚರಣೆ ಮನೆಗಳಲ್ಲಿ ಮಾಡುವುದಕ್ಕಿಂತ ಸಾರ್ವತ್ರಿಕವಾಗಿ ಎಲ್ಲರೂ ಒಂದೆಡೆ ಸೇರಿ ಆಚರಿಸುವುದರಿಂದ ಭಾರತ ನಿರ್ಮಾಣ ಕಾರ್ಯಕ್ಕೆ ಹೆಚ್ಚು ಒತ್ತು ದೊರೆಯಲಿದೆ ಎಂದು ಹೇಳಿದರು. ಹಿಂದೂ ಧರ್ಮವನ್ನು ವಿರೋಧಿಸುವ ತಲೆಕೆಟ್ಟ ರಾಜಕಾರಣಿಯೊಬ್ಬ ಸನಾತನ ಧರ್ಮದ ವಿರುದ್ದ ಮಾತನಾಡಿರುವುದು ಖಂಡನೀಯ. ಇಂಥ ಹೇಳಿಕೆಗಳ ಮೂಲಕ ಹಿಂದೂ ಧರ್ಮಕ್ಕೆ ಅಪಚಾರ ಎಸಗುವ ವ್ಯಕ್ತಿಗಳ ಧರ್ಮ ವಿರೋಧಿ ವರ್ತನೆಗೆ ವಿರುದ್ಧ ಹಿಂದುಗಳು ಸಂಘಟಿತರಾಗುವ ಅಗತ್ಯವಿದೆ. ನಮ್ಮ ಸರ್ಕಾರ ತಂದಿರುವ ಗೋಹತ್ಯಾ ನಿಷೇಧವನ್ನು ಈಗಿನ ಸರ್ಕಾರ ರದ್ದುಪಡಿಸಲು ಮುಂದಾಗಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ಅವರೇ ಬರಗಾಲ ಘೋ‍ಷಣೆ ಮಾಡಿ: ಬೊಮ್ಮಾಯಿ

ಹೆಣ್ಣುಮಕ್ಕಳ ಸಬಲೀಕರಣದ ಸಲುವಾಗಿ ಯಡ್ಯೂರಪ್ಪ ಸರ್ಕಾರ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತಿದೆ. ಆಯುಷ್ಮಾನ್ ಯೋಜನೆಯಲ್ಲಿ ₹5 ಲಕ್ಷದವರೆಗೆ ಆರ್ಥಿಕ ನೆರವು, ಮೋದಿ ಕೇರ್‌ನಲ್ಲಿ ಅತಿ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ಮಹಿಳೆಯರಿಗಾಗಿ ಹತ್ತುಹಲವು ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಈ ದೇಶದ ಜನರ ಭಾವನೆ ಮತ್ತು ಧಾರ್ಮಿಕ ಆಚರಣೆಯನ್ನು ಗೌರವಿಸುವ ಮನೋಭಾವ ಹೊಂದಿದೆ. ಇದನ್ನು ಮುಂದುವರಿಸುವ ಬದ್ಧತೆ ಹೊಂದಿದೆ. ಸಾವಿರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವ ಇಂಥ ಧಾರ್ಮಿಕ ಆಚರಣೆಗಳ ಬಗ್ಗೆ ವಿರೋಧ ಮಾಡುವವರನ್ನು ಜನರೇ ಉಚ್ಚಾಟನೆ ಮಾಡಲಿದ್ದಾರೆ. ಲೇವಡಿ ಮಾಡುವುದನ್ನು ಬಿಟ್ಟು, ನೀವೂ ಇಂತಹಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.

ಪ್ರೀತಿಗೆ ವಯಸ್ಸಿನ ಗಡಿ ಇಲ್ಲ: 75ರ ವಯಸ್ಸಿನಲ್ಲೂ 35ರ ಯುವತಿಗೆ ತಾಳಿ ಕಟ್ಟಿದ ಅಜ್ಜ!

2024 ಜನವರಿ ನಮ್ಮ ಕನಸಿನ ರಾಮಮಂದಿರ ಉಧ್ಘಾಟನೆಗೊಳ್ಳಲಿದೆ. ಬಡವರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಚೈತನ್ಯ ತುಂಬಿದವರು ನರೇಂದ್ರ ಮೋದಿ ಎಂಬುದನ್ನು ಜನತೆ ಮರೆಯಬಾರದು. ಸಂಸದರಾದ ರಾಘಣ್ಣ ಅವರಿಂದ ಈ ಜಿಲ್ಲೆಗೆ ವಿಮಾನ ನಿಲ್ದಾಣ, ತಾಲೂಕಿಗೆ 64 ಸಮುದಾಯ ಭವನ, ಹೊಸ ಸೇತುವೆಗಳು ಹೀಗೆ ಹತ್ತುಹಲವು ಯೋಜನೆಗಳು ತಾಲೂಕಿಗೆ ಮಂಜೂರಾಗಿವೆ. ಭಾರತೀಪುರ ತಿರುವಿನಲ್ಲಿ ₹56 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣವಾಗುತ್ತಿದೆ. ಜನಜೀವನ್ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ. ಮುಂಬರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಬೆಂಬಲ ನರೇಂದ್ರ ಮೋದಿ ಮತ್ತು ಬಿ.ವೈ. ರಾಘವೇಂದ್ರರ ಮೇಲಿರಲಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಗೀತಾ ಶೆಟ್ಟಿ, ಸವಿತಾ ಉಮೇಶ್, ಕೆ.ನಾಗರಾಜ ಶೆಟ್ಟಿ, ದತ್ತಾತ್ರಿ, ಅಶೋಕಮೂರ್ತಿ ಮುಂತಾದವರು ಇದ್ದರು.

Follow Us:
Download App:
  • android
  • ios