ಸಂಸದರ ವರ್ತನೆ ಹೇಗಿರಬೇಕೆಂದು ಪಕ್ಷಗಳ ಪ್ರಣಾಳಿಕೆಯಲ್ಲಿ ಇರಲಿ

  • ಸಂಸತ್‌ನಲ್ಲಿ ಸದಸ್ಯರ ವರ್ತನೆ ಹೇಗಿರಬೇಕು ಎನ್ನುವ ಬಗ್ಗೆ ರಾಜಕೀಯ ಪಕ್ಷಗಳು ನೀತಿ ಸಂಹಿತೆ ರೂಪಿಸಲಿ
  • ನೀತಿ ಸಂಹಿತೆ ರೂಪಿಸಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಳ್ಳಬೇಕು 
  • ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ
MP behaviors Should mention in parties manifesto Says Venkaiah naidu snr

 ಬೆಂಗಳೂರು (ಆ.25):  ಸಂಸತ್‌ನಲ್ಲಿ ಸದಸ್ಯರ ವರ್ತನೆ ಹೇಗಿರಬೇಕು ಎನ್ನುವ ಬಗ್ಗೆ ರಾಜಕೀಯ ಪಕ್ಷಗಳು ನೀತಿ ಸಂಹಿತೆ ರೂಪಿಸಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ.

ರಾಜಭವನದಲ್ಲಿ ಮಂಗಳವಾರ ಪತ್ರಕರ್ತರ ಜತೆ ಔಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಇತ್ತೀಚೆಗೆ ನಡೆದ ಕಲಾಪದಲ್ಲಿ ಸದಸ್ಯರ ನಡವಳಿಕೆ ತಲೆತಗ್ಗಿಸುವಂತಹದಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗುತ್ತಿದೆ. ದುರ್ವರ್ತನೆ ತೋರಿದವರ ವಿರುದ್ಧ ಕ್ರಮಕ್ಕೆ ಹಲವು ಮಂದಿ ಮನವಿ ಮಾಡಿದ್ದಾರೆ. ಹೀಗಾಗಿ ಮಾಜಿ ಸಭಾಧ್ಯಕ್ಷರು ಸೇರಿದಂತೆ ಇತರೆ ನಿವೃತ್ತ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧಿವೇಶನಕ್ಕೆ ತಡೆ, ಅನುಚಿತ ವರ್ತನೆಯಿಂದ ನೋವಾಗಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

ಸಂಸದರ ಕಾರ್ಯನಿರ್ವಹಣೆ ಕುರಿತು ರಾಜಕೀಯ ಪಕ್ಷಗಳು ತಿಳಿ ಹೇಳಬೇಕು. ಅಧಿವೇಶನ ಸುಗಮವಾಗಿ ನಡೆಯಲು ಮತ್ತು ಸಂಸದರ ಪಾಲ್ಗೊಳ್ಳುವಿಕೆ ಕುರಿತು ರಾಜಕೀಯ ಪಕ್ಷಗಳು ನೀತಿ ಸಂಹಿತೆ ರೂಪಿಸಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಅದನ್ನು ಘೋಷಿಸಿಕೊಳ್ಳಬೇಕು. ಮತದಾರರು ಯಾವ ಪಕ್ಷಗಳ ಸಂಸದರ ನೀತಿಸಂಹಿತೆ ಉತ್ತಮ ಎನ್ನುವುದನ್ನು ತೀರ್ಮಾನಿಸಿ ಸಂಸದರನ್ನು ಆಯ್ಕೆ ಮಾಡುವ ಅವಕಾಶ ಇರಬೇಕು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟುಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಸದರ ಪಾಲ್ಗೊಳ್ಳುವಿಕೆ ಸರಿಯಾಗಿದ್ದರೆ ಅಧಿವೇಶನ ಕಲಾಪಗಳನ್ನು 100 ದಿನ ನಡೆಸಬಹುದು. ಕೆಲವು ಸಮಯದಲ್ಲಿ ಕೆಲವೇ ನಿಮಿಷದಲ್ಲಿ ಮಸೂದೆ ಪಾಸ್‌ ಆಗುವುದು ಉತ್ತಮ ಸಂಪ್ರದಾಯವಲ್ಲ. ಮಸೂದೆ ಮಂಡಿಸಿದಾಗ, ಪ್ರತಿಪಕ್ಷದ ಸದಸ್ಯರು ಮಸೂದೆ ಬಗ್ಗೆ ಚರ್ಚಿಸಬೇಕು. ಯಾರೂ ಮಾತನಾಡಲು ಇಚ್ಛಿಸದಿದ್ದರೆ ಏನು ಮಾಡಲಾಗುವುದಿಲ್ಲ. ಹಲವು ವೇಳೆಯಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ಅವಕಾಶ ನೀಡಿದರೂ ಗದ್ದಲ ಮಾಡಿದರೆ ಏನು ಮಾಡಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios