ಟಿಪ್ಪುವಿನ ಹೆಸರನ್ನು ಬಳಸಿ ಸಿದ್ದು ರಾಜಕಾರಣ: ಸಂಸದ ಅನಂತಕುಮಾರ ಹೆಗಡೆ
ನೂತನ ರಾಮಮಂದಿರ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಗುರುತು. ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು.
ಶಿರಸಿ (ಡಿ.25): ನೂತನ ರಾಮಮಂದಿರ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಗುರುತು. ಹಿಜಾಬ್ ಹಿಂದೆ ತಿರುಗುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ಬಹುಸಂಖ್ಯಾತರ ಪರವಾಗಿಲ್ಲ. ಕೇವಲ ಓಲೈಕೆ ರಾಜಕಾರಣದಲ್ಲಿ ನಿಸ್ಸೀಮವಾಗಿರುವ ಕಾಂಗ್ರೆಸ್‌ಗೆ ಅಲ್ಪ ಸಂಖ್ಯಾತರ ಮತವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ.
ಯಾರು, ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭವಿಷ್ಯದಲ್ಲಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡಲಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪುವಿನ ಹೆಸರನ್ನು ಬಳಸಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅನಂತ್, ರಾಜಕೀಯದಲ್ಲಿ ಏಳು-ಬೀಳು ಸ್ವಾಭಾವಿಕ. ಮುಂದಿನ ದಿನದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದ್ದು, ದುರಂಹಕಾರಿ ಸಿದ್ದರಾಮಯ್ಯ ಸರ್ಕಾರ ಹೆಚ್ಚಿನ ದಿನ ಉಳಿಯುವುದಿಲ್ಲ.
ಅಲ್ಪಸಂಖ್ಯಾತರ ಓಲೈಕೆ: ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಹಿಂದೂ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಎಂದಿಗೂ ಉಳಿಯಲಾರದು. ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದೇ ಇದ್ದವರು ಈ ಉಚಿತ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜನಕ್ಕೂ ಇದು ಬೇಕಾಗಿಲ್ಲ. ಅವರ ಮೇಲೆ ಈ ಉಚಿತವನ್ನು ಹೇರಿದ್ದರಿಂದ ಅಭಿವೃದ್ಧಿಗೆ ಹಣವಿಲ್ಲದಂತಾಗಿದೆ. ಈ ಸರ್ಕಾರ ಕೈಗೊಂಡಿರುವ ಅನೇಕ ಅಭಿವೃದ್ಧಿ ಯೋಜನೆಗಳೇ ಕುಂಠಿತವಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆ ಅರ್ಥ ಮಾಡಿಕೊಂಡು ಉಚಿತ ಕೊಡುಗೆ ನೀಡಬೇಕು. ಸಾಲ ತಂದು ಉಚಿತ ನೀಡುವ ಈಗಿನ ಸರ್ಕಾರ ಹುಚ್ಚು ಸರ್ಕಾರ ಎಂದು ಜರಿದರು.
ಅಭಿವೃದ್ಧಿಗೆ ವಿರೋಧ: ಜಿಲ್ಲೆಗೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇಲ್ಲಿಯ ಪೂರ್ವಾಗ್ರಹ ಪೀಡಿತರು ಸದಾ ವಿರೋಧವನ್ನೇ ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯ ಬಂದರು ಅಭಿವೃದ್ಧಿಗೆ ಶ್ರಮಿಸಿದರೆ ವಿರೋಧಿಸುತ್ತಾರೆ, ರಾಷ್ಟ್ರೀಯ ಹೆದ್ದಾರಿ ಮಂಜೂರಾದರೆ ಸ್ಟೇ ತರುತ್ತಿದ್ದಾರೆ. ಕೇಂದ್ರ ಸರ್ಕಾರ ಜಿಲ್ಲೆಯ ಪ್ರಮುಖ ರಸ್ತೆಗಳನ್ನೆಲ್ಲ ಹೆದ್ದಾರಿಯಾಗಿ ಪರಿವರ್ತಿಸಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೂ ತೊಂದರೆ ನೀಡುತ್ತಾರೆ. ಅಭಿವೃದ್ಧಿ ಆಗಬೇಕು ಎಂದರೆ ಹೇಗೆ ಎಂದು ಪ್ರಶ್ನಿಸಿದ ಅನಂತಕುಮಾರ ಹೆಗಡೆ, ಕೆಲವೇ ಕೆಲವು ಸ್ಥಾಪಿತ ಹಿತಾಸಕ್ತಿಗಳು ವಿರೋಧ ಮಾಡುತ್ತಿವೆ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣದಿಂದ ದಟ್ಟ ಕಾಡು ನಾಶವಾಗುವುದು ನಿಜ. ಕೇವಲ ಆರ್ಥಿಕ ಅಭಿವೃದ್ಧಿಗಾಗಿ ಮಳೆ ಕಾಡನ್ನು ಬಲಿಕೊಡುವುದು ಒಳ್ಳೆಯ ಲಕ್ಷಣ ಅಲ್ಲ. ಹೊನ್ನಾವರ, ಬೇಲೆಕೆರೆಯಲ್ಲಿ ಬಂದರಾಗಿದ್ದರೆ ಈ ರೈಲು ಮಾರ್ಗದ ಅವಶ್ಯಕತೆ ಜಾಸ್ತಿ ಆಗುತ್ತಿತ್ತು. ಜಿಲ್ಲೆಯ ಮೂಲಭೂತ ಅಗತ್ಯತೆ, ಅಭಿವೃದ್ಧಿಯ ಬಗ್ಗೆ ಒತ್ತಾಸೆ ಶುರು ಮಾಡಬೇಕು. ಜಿಲ್ಲೆಯ ಯೋಜನೆಗಳ ವಿರೋಧಿಸುವ ಕೆಲವೇ ಸ್ಥಾಪಿತ ಹಿತಾಸಕ್ತಿಗಳು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಲಿ. ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಬಗ್ಗೆ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ, ಪುನಃ ಪುನಃ ವಿರೋಧ ಮಾಡಿದ್ದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದರು.
ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್
ರಾಮಮಂದಿರ ನಿರ್ಮಾಣ ಶತಮಾನಗಳ ವಿಜಯೋತ್ಸವ. ಲಕ್ಷಾಂತರ ಜನರ ಪ್ರಾಣಾರ್ಪಣೆ ಆದ ಬಳಿಕ ಹಿಂದೂ ಸಮಾಜಕ್ಕೆ ಸಿಕ್ಕ ವಿಜಯ ಇದು. ಹಿಂದೂ ಸಮಾಜ ಹೇಗೆ ತಲೆ ಎತ್ತಿ ನಿಲ್ಲುತ್ತದೆ ಎಂಬುದಕ್ಕೆ ಸಾಕ್ಷಿ ರಾಮಮಂದಿರ ನಿರ್ಮಾಣ ಎಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ.