ನಾಲ್ಕು ಸ್ಥಾನಗಳು ಶೀಘ್ರ ಲಭ್ಯವಾಗಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. ನಾಮನಿರ್ದೇಶಿತ ಸ್ಥಾನಕ್ಕೆ ವಿ.ಆರ್.ಸುದರ್ಶನ್, ವಿನಯ್ ಕಾರ್ತಿಕ್, ರಾಣಿ ಸತೀಶ್, ಎಸ್.ಆರ್. ಪಾಟೀಲ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಪೈಪೋಟಿ ಆರಂಭಿಸಿದ್ದಾರೆ.

ಬೆಂಗಳೂರು(ಅ.25):  ಸಿ.ಪಿ.ಯೋಗೇಶ್ವರ್ ರಾಜೀನಾಮೆಯಿಂದ ತೆರವಾಗಿರುವ ಸಾನವೂ ಸೇರಿದಂತೆ ಆಡಳಿತರೂಢ ಕಾಂಗ್ರೆಸ್‌ಗೆ ಶೀಘ್ರ ಲಭ್ಯವಾಗಲಿರುವ ನಾಮ ನಿರ್ದೇಶನ ಮಾಡಬಹುದಾದ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. 

ಸಿ.ಪಿ.ಯೋಗೇಶ್ವ‌ರ್ ಅವರು ಹಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಾಮ ನಿರ್ದೇಶನಗೊಂಡಿದ್ದ ಅವರ ಅವಧಿ ಇನ್ನೂ ಎರಡು ವರ್ಷ ಬಾಕಿಯಿತ್ತು. ಇನ್ನು ಗಣ ಸಾಧಕರಿಗೆ ಸರ್ಕಾರ ನಾಮನಿರ್ದೇಶನೆ ಮಾಡುವ ಸ್ಥಾನಗಳಿಂದ ಪರಿಷತ್ತಿಗೆ ಅವಕಾಶ ಪಡೆದಿದ್ದ ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್, ಹಾಗೂ ಯು.ಬಿ.ವೆಂಕಟೇಶ್ ಅವರ ಅವಧಿ ಈ ಅಕ್ಟೋಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ಅವಧಿ ಮುಂದಿನ ವರ್ಷದ ಜನವರಿ ತಿಂಗಳ ಅಂತ್ಯಗೊಳ್ಳಲಿದೆ. 

ಕಾಂಗ್ರೆಸ್‌ ಗೂಡಿಗೆ ಹಾರಿದ ವಲಸೆ ಹಕ್ಕಿ: ಹಳೇ ಮೈಸೂರಲ್ಲಿ ನಾವಿಕನಿಲ್ಲದ ಹಡಗಿನಂತಾದ ಬಿಜೆಪಿ!

ಹೀಗೆ ನಾಲ್ಕು ಸ್ಥಾನಗಳು ಶೀಘ್ರ ಲಭ್ಯವಾಗಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. ನಾಮನಿರ್ದೇಶಿತ ಸ್ಥಾನಕ್ಕೆ ವಿ.ಆರ್.ಸುದರ್ಶನ್, ವಿನಯ್ ಕಾರ್ತಿಕ್, ರಾಣಿ ಸತೀಶ್, ಎಸ್.ಆರ್. ಪಾಟೀಲ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಪೈಪೋಟಿ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಆಪ್ತ ವೆಂಕಟೇಶ್‌ಗೆ ಅವಕಾಶ? 

ಕಳೆದ ಮೂರು ದಶಕಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿರುವ ಹಾಗೂ ಹಾಲಿ ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಯಾದ ವೆಂಕಟೇಶ್ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿಯವರೊಂದಿಗೆ ದಶಕಗಳ ಕಾಲ ಕಾರ್ಯನಿರ್ವಹಿಸಿ ಉನ್ನತ ಹುದ್ದೆ ಪಡೆದವರ ಸಂಖ್ಯೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಇದೆ. 

ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ: ಡಿ.ಕೆ.ಶಿವಕುಮಾರ್

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮೊಂದಿಗೆ ದಶಕಗಳ ಕಾಲ ಇದ್ದ ತಿಪ್ಪೇಸ್ವಾಮಿ ಅವರಿಗೆ ಇಂತಹುದೇ ಹುದ್ದೆ ದೊರೆಯುವಂತೆ ಮಾಡಿದ್ದರು. ಯಡಿಯೂರಪ್ಪ ಅವರು ತಮ್ಮ ಆಪ್ತ ಸಿದ್ದಲಿಂಗಸ್ವಾಮಿಗೆ ಬಿಜೆಪಿ ಟಿಕೆಟ್ ಕೊಡಿಸಿ ಖುದ್ದುಸಿದ್ದರಾಮಯ್ಯ ಅವರ ಸಮ್ಮುಖ ದೇವರುಣದಿಂದ ಸ್ಪರ್ಧೆ ಮಾಡುವಂತೆ ಮಾಡಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ವೆಂಕಟೇಶ್ ಹೆಸರು ಮಾಧ್ಯಮಗಳಲ್ಲಿ ಕೇಳಿಬಂದಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್ ಅವರು, ಈ ಹುದ್ದೆಯ ಬಯಕೆ ಹಾಗೂ ಅರ್ಹತೆ ಎರಡೂ ತಮಗೆ ಇದೆ ಎಂದು ಭಾವಿಸಿ ಮಾಧ್ಯಮ ಗಳಲ್ಲಿ ಚರ್ಚೆಯಾಗಿರಬಹುದು. ಆದರೆ, ತಾವು ಈ ಈ ಹುದ್ದೆಗಾಗಿ ಪ್ರಯತ್ನಿಸಿಲ್ಲ, ಸಿಎಂ ಅವ ರನ್ನು ಮುಜುಗರಕ್ಕೆ ತಳ್ಳುವ ಉದ್ದೇಶ ಇಲ್ಲ ಎಂದರು.