Asianet Suvarna News Asianet Suvarna News

ಉತ್ತರ ಕರ್ನಾಟಕದಲ್ಲೇ ಜೆಡಿ​ಎ​ಸ್‌ಗೆ 40ಕ್ಕೂ ಹೆಚ್ಚು ಸ್ಥಾನ: ಎಚ್‌ಡಿಕೆ ವಿಶ್ವಾ​ಸ

ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತಿರುವ ಉತ್ತರ ಕರ್ನಾಟಕ ಭಾಗದಿಂದಲೇ ಈ ಬಾರಿ ಜೆಡಿಎಸ್‌ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More than 40 seats for JDS in North Karnataka assembly electi says HDK rav
Author
First Published Apr 14, 2023, 10:24 AM IST | Last Updated Apr 14, 2023, 10:25 AM IST

ಕಲಬುರಗಿ (ಏ.14) : ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತಿರುವ ಉತ್ತರ ಕರ್ನಾಟಕ ಭಾಗದಿಂದಲೇ ಈ ಬಾರಿ ಜೆಡಿಎಸ್‌ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಸಂಚಾರದಲ್ಲಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಕ(North karnataka) ಭಾಗದ ಬಹಳಷ್ಟುಜನ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರ ಜೊತೆ ಮಾತುಕತೆ ಸಾಗಿದೆ. ಅವರ ಹೆಸರು ಈಗ ಬಹಿರಂಗಪಡಿಸಲಾರೆ. ಅಚ್ಚರಿ ಎಂಬಂತೆ ಹಲವರು ಜೆಡಿಎಸ್‌ ಸೇರಲಿದ್ದಾರೆ. ಏ.14ರಂದು ಬೆಂಗಳೂರಿನಲ್ಲಿ ನಡೆಯಲರುವ ಸಮಾರಂಭದಲ್ಲಿ ಜೆಡಿಎಸ್‌ ಪಕ್ಷಕ್ಕೆ ಮಾಜಿ ಶಾಸಕರ ಹಾಗೂ ಮುಖಂಡರ ದಂಡೇ ಸೇರಲಿದೆ ಎಂದರು.

ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಮುಂಚೆ ಜನತಾ ಪರಿವಾರಲ್ಲಿದ್ದು ಬೆಳೆದವರೇ ಇಂದು ಬೇರೆ ಬೇರೆ ಪಕ್ಷಗಳಲ್ಲಿನ ವಿದ್ಯಾಮನಗಳಿಗೆ ಬೇಸತ್ತು ಮತ್ತೆ ತಮ್ಮ ಮನೆಗೇ ಮರಳುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ- ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುತ್ತಿದ್ದಾರೆ. ಸೇರ್ಪಡೆಯ ಈ ಭರಾಟೆ ನೋಡಿದರೆ ಉ.ಕ. ದಿಂದಲೇ 40ಕ್ಕೂ ಅಧಿಕ ಸ್ಥಾನಗಳು ಪಕ್ಷಕ್ಕೆ ಬರಲಿವೆ. ಹೀಗಾಗಿ ಸರಳ ಬಹುಮತಕ್ಕೆ ಅಗತ್ಯವಿರುವ 123 ಸ್ಥಾನ ಜೆಡಿಎಸ್‌ ಗೆಲ್ಲೋದರಲ್ಲಿ ಅನುಮಾನವಿಲ್ಲವೆಂದರು.

ನಿರೀಕ್ಷೆ ಮೀರಿ ಮಾಜಿ ಶಾಸಕರು, ಮುಖಂಡರು ಸೇರುತ್ತಿದ್ದು, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌(Doddappagowda Patil) ನರಿಬೋಳ ಸೇರಿದಂತೆ ಹಲವರು ಸೇರುತ್ತಿದ್ದಾರೆ. ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಸೇರ್ಪಡೆ ಸಮಾವೇಶ ನಡೆಯಲಿದೆ. ಜೆಡಿಎಸ್‌(JDS Party) ಮುಳುಗಿತು ಎನ್ನುವವರಿಗೆ ಮುಖ ಹೊಡೆದಂತೆ ನೂಕು ನುಗ್ಗಲು ಎನ್ನುವಂತೆ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿವರಣೆ ನೀಡಿದರು.

ಜೆಡಿಎಸ್‌ ಪಟ್ಟಿನಾಳೆ ರೆಡಿ:

ಜೆಡಿಎಸ್‌ ಅಭ್ಯರ್ಥಿಗಳ ಅಂತಿಮ ಪಟ್ಟಿಏ.14ರ ಸಂಜೆಯೇ ಬಿಡುಗಡೆಗೊಳಿಸಲಾಗುವುದು. ಪಕ್ಷಕ್ಕೆ ಸೇರ್ಪಡೆಯಾದವರ ಹೆಸರುಗಳನ್ನು ಸೇರಿಸಿ ಅಂತಿಮ ಪಟ್ಟಿಪ್ರಕಟಿಸಲಾಗುವುದು, ಈಗಾಗಲೇ ಘೋಷಿಸಲಾಗಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನ ಬದಲಾವಣೆ ಇರೋದಿಲ್ಲ. ಪಂಚರತ್ನ ಯಾತ್ರೆಯಲ್ಲಿ ಸಂಘಟನೆಯ ದೃಷ್ಟಿಯಿಂದ ಎಡವಿರುವ 8ರಿಂದ 10 ಕಡೆ ಉಮೇದುವಾರರ ಬದಲಾವಣೆ ಮಾಡುವುದಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕಡೂರು ಮಾಜಿ ಶಾಸಕ ವೈ.ಎಸ್‌.ವಿ. ದತ್ತಾ ಪಕ್ಷ ಸೇರ್ಪಡೆ ವಿಷಯ ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ಜನತಾ ಪರಿವಾರ ಬಿಟ್ಟು ಹೋದವರೆಲ್ಲ ಮರಳಿ ಜೆಡಿಎಸ್‌ಗೆ ಬರುತ್ತಿದ್ದಾರೆ ಎಂದರು.

ಮೈತ್ರಿ ಸರ್ಕಾರದ ಸಾಲಮನ್ನಾ ಹಣ ಬೇರೆ ಕೆಲಸಕ್ಕೆ ಬಳಕೆ: ಬಿಜೆಪಿ ಸರ್ಕಾರದಿಂದ ರೈತರಿಗೆ ಅನ್ಯಾಯ : ಎಚ್‌ಡಿಕೆ

ಖರ್ಗೆಗೆ ಸಿಎಂ 2018ರಲ್ಲೇ ಮಾಡಬಹುದಿತ್ತಲ್ಲ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge) ಮುಖ್ಯಮಂತ್ರಿಯಾದರೆ ಕೆಳಗಡೆ ಕೆಲಸ ಮಾಡಲು ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಆದರೆ 2018ರಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದರು. ಅದನ್ನು ಆಗಲೇ ಜಾರಿ ತರಬೇಕಿತ್ತು. ಈಗ ತೋರಿಕೆಗೆ ಹೇಳಲಾಗುತ್ತಿದೆ, ಕಾಗ್ರೆಸ್‌ನ ಕೆಲವು ನಾಯಕರಿಗೆ ತೋರಿಕೆಗೆ ಬರೀ ಹೇಳಿಕೆ ನೀಡುವುದೇ ಗೊತ್ತು, ನುಡಿದಂತೆ ನಡೆಯೋದೇ ಕಷ್ಟವೆಂದು ಪರೋಕ್ಷವಾಗಿ ಡಿಕೆಶಿಗೆ ತಿರುಗೇಟು ನೀಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವ್ಕರ್‌, ಮುಖಂಡರಾದ ದೇವೇಗೌಡ ತೆಲ್ಲೂರ್‌ ಇದ್ದರು.

Latest Videos
Follow Us:
Download App:
  • android
  • ios