ಮೈತ್ರಿ ಸರ್ಕಾರದ ಸಾಲಮನ್ನಾ ಹಣ ಬೇರೆ ಕೆಲಸಕ್ಕೆ ಬಳಕೆ: ಬಿಜೆಪಿ ಸರ್ಕಾರದಿಂದ ರೈತರಿಗೆ ಅನ್ಯಾಯ : ಎಚ್‌ಡಿಕೆ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಸಾಲಮನ್ನಾ ಹಣವನ್ನು ಬಿಜೆಪಿ ಸರ್ಕಾರ ಬೇರೆ ಕೆಲಸಕ್ಕೆ ಉಪಯೋಗಿಸಿಕೊಂಡು ರೈತರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

Karnataka election news Salamanna issueHD Kumaraswamy accused BJP at haveri rav

ರಾಣಿಬೆನ್ನೂರು ಏ.14) : ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಸಾಲಮನ್ನಾ ಹಣವನ್ನು ಬಿಜೆಪಿ ಸರ್ಕಾರ ಬೇರೆ ಕೆಲಸಕ್ಕೆ ಉಪಯೋಗಿಸಿಕೊಂಡು ರೈತರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಆರೋಪಿಸಿದರು.

ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಜೆಡಿಎಸ್‌ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಎರಡು ಬಾರಿಯೂ ರೈತರ ಸಾಲಮನ್ನಾ ಮಾಡಿರುವೆ. ಬಿಜೆಪಿ ಸರ್ಕಾರ ಈ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸ್ವಾಂತನ ಹೇಳುವ ಕೆಲಸ ಮಾಡಲಿಲ್ಲ. ಆದರೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಏಕಾಂಗಿಯಾಗಿ ಬಂದು ಸ್ವಾಂತನ ಹೇಳಿದ್ದಲ್ಲದೆ ಕುಟುಂಬದ ಸ್ಥಿತಿಯನ್ನು ನೋಡಿ ಸಹಾಯಧನ ನೀಡಿದೆ ಎಂದರು.

ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬಡ ಕುಟುಂಬಗಳ ಪರವಾಗಿ ಸರ್ಕಾರ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ. ಬಡಕುಟುಂಬಗಳ ಏಳಿಗೆಗಾಗಿ . 29 ಸಾವಿರ ಕೋಟಿ ಕೊಟ್ಟಿರುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಅದನ್ನು ಯಾವ ಬಡವರಿಗೆ ಕೊಟ್ಟಿರುವಿರಿ? ಇದರ ಬಗ್ಗೆ ಪಿಎಂ ಕೊಟ್ಟವರದಿಯಂತೆ ಕರ್ನಾಟಕದಲ್ಲಿ 20 ಜಿಲ್ಲೆಯ ಜನರು ಅಪೌಷ್ಟಿಕತೆ ಕೊರತೆ ಕಾಡುತ್ತಿದ್ದು ಅದರಲ್ಲಿ ಬಹುಪಾಲು ಉತ್ತರ ಕರ್ನಾಟಕದಲ್ಲಿದೆ. ನದಿ ಯೋಜನೆಯಲ್ಲಿ ಸಾವಿರಾರು ಕೋಟಿ ಹೊಡೆದು ಮನುಷ್ಯತ್ವ ಇಲ್ಲದ ಎರಡು ಪಕ್ಷಗಳನ್ನು ಈಗಲೂ ಬೆಂಬಲಿಸುತ್ತೀರಾ? ಎಂದು ಪ್ರಶ್ನಿಸಿದರು.

ಇಲ್ಲಿನ ಪಕ್ಷೇತರ ಶಾಸಕನನ್ನು ಮಂತ್ರಿ ಮಾಡಿದೆವು. ಅವನಿಗೆ ಏನು ಅನ್ಯಾಯವಾಗಿತ್ತು. ನಮ್ಮ ಸರ್ಕಾರ ಬಿಟ್ಟು ಹೋದ. ನಂತರ ಬಂದ ಬಿಜೆಪಿ ಸರ್ಕಾರ ಎಮ್‌ಎಲ್‌ಸಿ ಸ್ಥಾನ ನೀಡಿತೆ ಹೊರತೂ ಮಂತ್ರಿ ಮಾಡಲಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಶಾಸಕ ಲೂಟಿ ಹೊಡೆದಿದ್ದಾನೆ. ಅದನ್ನು ನಿಮಗೆ ಕೊಡಲು ಬರುತ್ತಿದ್ದಾನೆ. ಅವರ ಹಣ ನಿಮಗೆ ಎಷ್ಟು ದಿನ ಬರುತ್ತದೆ ಎಂದು ಅರ್ಥಮಾಡಿಕೊಳ್ಳಿ. ಅಮಿಷಗಳಿಗೆ ನೀಡಿ ಮತ ಪಡೆದು ಮತ್ತೆ ನಿಮ್ಮ ಕಂದಾಯ ಹಣ ಕೊಳ್ಳೆ ಹೊಡೆಯುತ್ತಾರೆ. ಆದ್ದರಿಂದ ಜಾತ್ಯತೀತ ಪಕ್ಷ ಬೆಂಬಲಿಸಿ ಎಂದು ಎಚ್‌ಡಿಕೆ ಮನವಿ ಮಾಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ(CM Ibrahim) ಮಾತನಾಡಿ, ಬಿಜೆಪಿಯಲ್ಲಿ ಸೀಟಿನ ಸಂಬಂಧ ಹೊಡೆದಾಡುತ್ತಿದ್ದಾರೆ, ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸೀಟು ಹಂಚಿಕೆ ಮಾಡಿದ್ದಾರೆ. ಈಗಾಗಲೇ 6 ಶಾಸಕರು ರಾಜೀನಾಮೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಸೋನಿಯಾ ಚಿಂತೆ, ಬೊಮ್ಮಾಯಿಗೆ ಮೋದಿ ಚಿಂತೆ, ಆದರೇ ಕುಮಾರಸ್ವಾಮಿಗೆ ರೈತರ ಚಿಂತೆ. ಈ ನಿಟ್ಟಿನಲ್ಲಿ ರೈತ ಮಕ್ಕಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ದೆಹಲಿ ಫೈನಲ್‌ ಆಗುತ್ತೆ. ನಮ್ಮ ಪಕ್ಷದ ಟಿಕೆಟ್‌ ಬೆಂಗಳೂರಿನಲ್ಲಿ ಆಗುತ್ತೆ. ನಾಡು-ನುಡಿ ಬಗ್ಗೆ ಚಿಂತಿಸುವ ಪಕ್ಷ ಜೆಡಿಎಸ್‌. 40% ರಾಜ್ಯದ ಹಣ ತಿಂದರು. 12 ಮಂತ್ರಿಗಳ ಸಿಡಿ ಪ್ರಕರಣ, ಅನ್ಯ ಹೆಣ್ಣುಮಕ್ಕಳ ಬಾಳನ್ನು ಹಾಳು ಮಾಡಿ ಕೋರ್ಚ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ನಿಮ್ಮ ಮನೆ ಮಗ ಮಂಜುನಾಥ ಗೌಡಶಿವಣ್ಣನವರ ಅವರಿಗೆ ನಿಮ್ಮ ಮತ ನೀಡಿ ಎಂದರು.

ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಪಾದಯಾತ್ರೆ ಮೂಲಕ ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕೆ ಭರವಸೆ ನೀಡಿದ್ದೇನೆ. ಒಮ್ಮೆ ಅವಕಾಶ ಮಾಡಿಕೊಟ್ಟರೆ ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತೇನೆ ಎಂದರು.

ಅಂದು ಭವಾನಿ ರೇವಣ್ಣಗಾಗಿ ಇಂದು ವೈಎಸ್‌ವಿ ದತ್ತಾಗಾಗಿ, ದಳಪತಿಗಳ ನಡುವೆ ಕಿಚ್ಚು!

ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ಶಮುಶುಲ್ಲಾಖಾನ್‌, ಶಶಿಕಲಾ ಗೌಡಶಿವಣ್ಣನವರ, ಮಾಧ್ಯಮ ವಕ್ತಾರ ಮಹೇಶಗೌಡ, ಮಲ್ಲಿಕಾರ್ಜುನ ಹಲಗೇರಿ, ಮಹೇಶ ಹೊನ್ನಪ್ಪಜ್ಜೇರ, ಮಲ್ಲಿಕಾರ್ಜುನ ತೆಗ್ಗಿನ ಇದ್ದರು. ಇದಕ್ಕೂ ಪೂರ್ವದಲ್ಲಿ ನಗರಕ್ಕೆ ಆಗಮಿಸಿದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆ ತಂದರು.

Latest Videos
Follow Us:
Download App:
  • android
  • ios