*   ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ*  ಸಿದ್ದು ಸರ್ಕಾರ ನೀಡಿದ್ದ ಅನುದಾನ ಹಂಚಿಕೆಯಲ್ಲೂ ತಾರತಮ್ಯ*  ಬಿಬಿಎಂಪಿ ಚುನಾವಣೆಗಾಗಿ ಸಿಎಂ ಸಿಟಿ ರೌಂಡ್ಸ್‌

ಬೆಂಗಳೂರು(ಜೂ.16): ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿ ಒಂಬತ್ತು ತಿಂಗಳಾಗುತ್ತಿದ್ದರೂ ಇಷ್ಟುದಿನ ನಗರ ಪ್ರದಕ್ಷಿಣೆ ಮಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ಆಯ್ದ ಕ್ಷೇತ್ರಗಳ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುನಿರತ್ನ, ಉದಯ್‌ಗರುಡಾಚಾರ್‌, ವಿ.ಸೋಮಣ್ಣ ಸೇರಿದಂತೆ ಕೇವಲ ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂದರೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಎಂದು ತಿಳಿದಿದ್ದಾರೆ. ನಗರದಲ್ಲಿ 28 ಕ್ಷೇತ್ರಗಳು ಅಭಿವೃದ್ಧಿಯಾದರೆ ಮಾತ್ರ ನಗರದ ಅಭಿವೃದ್ಧಿ ಎಂಬುದನ್ನು ಮರೆತಿದ್ದಾರೆ. ಹೀಗಾಗಿಯೇ ಅನುದಾನವನ್ನು ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Karnataka Politics: ಕರ್ನಾ​ಟ​ಕ​ದಲ್ಲಿ ಇರು​ವುದು ಮಾಫಿಯಾ ಸರ್ಕಾರ: ರಾಮಲಿಂಗಾ ರೆಡ್ಡಿ

ಮಾಧ್ಯಮಗಳ ಎದುರು ಮಾತ್ರ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಈಗ ಇವರು ಉದ್ಘಾಟಿಸುತ್ತಿರುವ ಯೋಜನೆಗಳೆಲ್ಲಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ನೀಡಿದ ಯೋಜನೆಗಳು. ಈ ಸರ್ಕಾರ 2019-20ರಲ್ಲಿ 198 ವಾರ್ಡ್‌ಗಳಿಗೆ ನಯಾಪೈಸೆ ಅನುದಾನ ನೀಡಿಲ್ಲ. 2020-21ರಲ್ಲೂ ಹಣ ನೀಡಿಲ್ಲ. ಇತ್ತೀಚೆಗೆ ಲಕ್ಷ ನೀಡಿದ್ದು, ಅದರಲ್ಲಿ .20 ಲಕ್ಷ ರಸ್ತೆ ಗುಂಡಿ ಮುಚ್ಚಲು, .20 ಲಕ್ಷ ಹೂಳೆತ್ತಲು, .20 ಲಕ್ಷ ಕೊಳವೆ ಬಾವಿ ನಿರ್ವಹಣೆಗೆ ನೀಡಿದ್ದಾರೆ. 2022-23ನೇ ಸಾಲಿನ ಬಜೆಟ್‌ನಲ್ಲಿ ಹಳೆಯ ಪ್ರದೇಶಗಳಿಗೆ .4 ಕೋಟಿ, ಹೊಸ ವಾರ್ಡ್‌ಗಳಿಗೆ .6 ಕೋಟಿ ನೀಡಿದ್ದಾರೆ. ಅದು ಇನ್ನೂ ಕನ್ನಡಿಯೊಳಗಿನ ಗಂಟಾಗಿದೆ ಎಂದು ಟೀಕಿಸಿದರು.

ನಮ್ಮ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀಡಿರುವ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಿದ್ದಾರೆ. ಕಾಂಗ್ರೆಸ್‌ನ 12 ಮಂದಿ ಶಾಸಕರಿಗೆ .2,135 ಕೋಟಿ ಅನುದಾನದ ನೀಡಿದರೆ ಬಿಜೆಪಿಯ 15 ಮಂದಿ ಶಾಸಕರ ಕ್ಷೇತ್ರಗಳಿಗೆ ಬರೋಬ್ಬರಿ .9,890 ಕೋಟಿ ನೀಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಎಂಟು ಮಂದಿ ಸಚಿವರಿದ್ದರೂ ನಗರದಲ್ಲಿ ಲಕ್ಷಗಟ್ಟಲೇ ರಸ್ತೆ ಗುಂಡಿಗಳಿವೆ. ಹೈಕೋರ್ಚ್‌ ಛಾಟಿ ಬೀಸುತ್ತಿದ್ದರೂ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಂಡಿರಲಿಲ್ಲ. ಇದೀಗ ಚುನಾವಣೆ ಹತ್ತಿರವಾಯಿತು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ನಗರ ಸುತ್ತುತ್ತಿದ್ದಾರೆ ಎಂದರು.

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ ಮಾಲೀಕರಿಗೆ ನೋಟಿಸ್‌ ಬೇಡ: ರೆಡ್ಡಿ

‘ಹಿಟ್ಲರ್‌ಗಿಂತ ಮೋದಿ ದೊಡ್ಡ ಸರ್ವಾಧಿಕಾರಿ’

ಇಡಿ ಹೆಸರಿನಲ್ಲಿ ರಾಹುಲ್‌ ಗಾಂಧಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳಿಗೆ ಕಿರುಕುಳ ನೀಡಲು ಮುಂದಾಗಿದೆ. ಇದರ ವಿರುದ್ಧ ಪ್ರತಿಭಟಿಸುವುದನ್ನೂ ಸಹಿಸುತ್ತಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಹಿಟ್ಲರ್‌ಗಿಂತ ದೊಡ್ಡ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಪಕ್ಷಗಳ ಆತ್ಮಸ್ಥೈರ್ಯ ಕುಗ್ಗಿಸಲು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ದೇಶಾದ್ಯಂತ ಪ್ರತಿಪಕ್ಷಗಳಖ ಪ್ರಮುಖ ನಾಯಕರ ಮೇಲೆ 1,569 ಪ್ರಕರಣ ದಾಖಲಿಸಿದ್ದಾರೆ. ಇವರ ಧೋರಣೆಗೆ ಜನರೇ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.