ಮೋದಿ, ಶಾ, ಯೋಗಿ ಆದಿತ್ಯನಾಥ್, ಸ್ಟಾರ್ ಪ್ರಚಾರಕರ ಪಟ್ಟಿ ಘೋಷಿಸಿದ ಬಿಜೆಪಿ!
ಪಂಚ ರಾಜ್ಯಗಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದೆ. ಇತ್ತ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಘೋಷಿಸಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 40 ನಾಯಕರ ಪಟ್ಟಿ ಬಿಡುಗಡೆ ಮಾಡಿದೆ.

ನವದೆಹಲಿ(ಅ.19) ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಇದೀಗ ಬಿಜೆಪಿ ಚತ್ತೀಸಘಡ ಚುನಾವಣೆಗೆ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದೆ. 40 ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಮುಖರಾಗಿದ್ದಾರೆ. ಚತ್ತೀಸಘಡದಲ್ಲಿ ಎರಡು ಹಂತದಲ್ಲಿ ಚುನಾವಣೆಯಲ್ಲಿ ನಡೆಯಲಿದೆ. ನವೆಂಬರ್ 7 ಹಾಗೂ ನವೆಂಬರ್ 17 ರಂದು ಚತ್ತೀಸಘಡ ಚುನಾವಣೆ ನಡೆಯಲಿದೆ.
ಬಹುತೇಕ ಕೇಂದ್ರ ಸಚಿವರು ಚತ್ತಿಸಘಡ ಚುನಾವಣೆಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.ಆದರೆ ಕರ್ನಾಟಕದ ಯಾವೊಬ್ಬ ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಸ್ಮತಿ ಇರಾನಿ, ಮನ್ಸೂಕ್ ಮಾಂಡವಿಯಾ, ಅನುರಾಗ್ ಠಾಕೂರ್, ಜ್ಯೋತಿರಾಧಿತ್ಯ ಸಿಂಧಿಯಾ, ನಿತಿನ್ ಗಡ್ಕರಿ, ಒಂಪ್ರಕಾಶ್ ಮಾಥೂರ್, ಶಿವರಾಜ್ ಸಿಂಗ್ ಚೌಹ್ವಾಣ್, ಅರ್ಜುನ್ ಮುಂಡಾ ಸೇರಿದಂತೆ ಪ್ರಮುಖರು ಚತ್ತೀಸಘಡದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಸಿಎಂ ಸ್ಥಾನ ತ್ಯಜಿಸಲು ಸಿದ್ಧ ಆದರೆ ಕುರ್ಚಿ ನನ್ನನ್ನು ಬಿಡುತಿಲ್ಲ, ಪೈಲೆಟ್ ಬಣಕ್ಕೆ ಗೆಹ್ಲೋಟ್ ಠಕ್ಕರ್!
ಛತ್ತೀಸಘಡ ಪ್ರಮುಖವಾಗಿ ನಕ್ಸಲ್ ಪೀಡಿತ ರಾಜ್ಯವಾಗಿದೆ. ನಕ್ಸಲ್ ಮುಕ್ತ ರಾಜ್ಯವನ್ನಾಗಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಅಮಿತ್ ಶಾ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಕೆಳೆದ 9 ವರ್ಷದಲ್ಲಿ ಶೇಕಡಾ 52 ರಷ್ಟು ನಕ್ಸಲ್ ಚಟುವಟಿಕೆ ತಗ್ಗಿದೆ ಎಂದು ಅಮಿತ್ ಶಾ ಅಂಕಿ ಅಂಶ ತೆರೆದಿಟ್ಟಿದ್ದರು. ಚತ್ತೀಸಘಡದಲ್ಲಿ ಅಧಿಕಾರದಲ್ಲಿರುವ ಭೂಪೇಶ್ ಬಾಘೇಲ್ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಆಗಿದೆ ಎಂದು ಅಮಿತ್ ಶಾ ಆರೋಪಿಸಿದ್ದರು.
90 ಸ್ಥಾನಬಲ ಹೊಂದಿರುವ ಛತ್ತೀಸ್‌ಗಢ ವಿಧಾನಸಭೆಗೆ ನ.7ರಂದು ಮೊದಲ ಹಂತದಲ್ಲಿ ಮತ್ತು ನ.17ರಂದು ಎರಡನೇ ಹಂತದಲ್ಲಿ 70 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ ರಾಷ್ಟ್ರೀಯ ಸಮಿತಿ ಮತ್ತು ಮಿಜೋರಂನಲ್ಲಿ ಎನ್‌ಡಿಎ ಮಿತ್ರಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.
ವಿದ್ಯಾರ್ಥಿನಿಯರಿಗೆ ಸ್ಕೂಟರ್, SCSTಗೆ 12 ಲಕ್ಷ: ಮತ್ತಷ್ಟು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ಚತ್ತೀಸಘಡದಲ್ಲಿ ಕಾಂಗ್ರೆಸ್ ಹಾಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್‌ಗೆ ಅವರ ಪಾಟನ್ ಕ್ಷೇತ್ರ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಅವರಿಗೆ ಅಂಬಿಕಾಪುರ ಕ್ಷೇತ್ರ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾಲಿ ಸಂಸದ ದೀಪಕ್ ಬೈಜ್ ಅವರಿಗೆ ಚಿತ್ರಕೂಟದ ಟಿಕೆಟ್ ನೀಡಲಾಗಿದೆ.