ಹಾಸನಾಂಬೆ ದೇವಿ ದರ್ಶನ ಪಡೆದ ಎಂಎಲ್‌ಸಿ ಸೂರಜ್ ರೇವಣ್ಣ, ಹೇಳಿದ್ದೇನು?
ನಮ್ಮ ಜಿಲ್ಲೆ, ರಾಜ್ಯದ ಜನರು ಸುಭೀಕ್ಷವಾಗಿರಲಿ, ವಿಶೇಷವಾಗಿ ರೈತರು ದೇವಿಯ ಕೃಪೆಯಿಂದ ಸಂತೋಷವಾಗಿರಲು ಪ್ರಾರ್ಥಿಸಿದ್ದೇನೆ ಎಂದು ಎಂಎಲ್‌ಸಿ ಸೂರಜ್ ರೇವಣ್ಣ ತಿಳಿಸಿದರು.
ಹಾಸನ (ಅ.25): ನಮ್ಮ ಜಿಲ್ಲೆ, ರಾಜ್ಯದ ಜನರು ಸುಭೀಕ್ಷವಾಗಿರಲಿ, ವಿಶೇಷವಾಗಿ ರೈತರು ದೇವಿಯ ಕೃಪೆಯಿಂದ ಸಂತೋಷವಾಗಿರಲು ಪ್ರಾರ್ಥಿಸಿದ್ದೇನೆ ಎಂದು ಎಂಎಲ್‌ಸಿ ಸೂರಜ್ ರೇವಣ್ಣ ತಿಳಿಸಿದರು.
ಇಂದು ಹಾಸನ ಜಿಲ್ಲೆಯ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗೆ ಯಾವುದೇ ರೀತಿಯ ಸಮಸ್ಯೆ ಬಾರದೆ, ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಪ್ರತಿ ವರ್ಷವೂ ದರ್ಶನ ಪಡೆಯಲು ಬರುತ್ತೇವೆ. ಇದೇ ರೀತಿ ಬರುವ ಅವಕಾಶ ಕೊಡು ಎಂದು ಬೇಡಿದ್ದೇನೆ ಎಂದರು.
ಸಿಪಿವೈ ರೀತಿ ಸೆಳೆಯಲು ಕಾಂಗ್ರೆಸ್ ಕರೆದರೂ ದಿವಾಕರ್ ಕಿವಿಗೊಡಲಿಲ್ಲ; ಜನಾರ್ದನ ರೆಡ್ಡಿ
ನಿಖಿಲ್ ಕುಮಾರಸ್ವಾಮಿ ಗೆಲ್ತಾರೆ:
ಚನ್ನಪಟ್ಟಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರಜ್ ರೇವಣ್ಣ ಅವರು, ಸ್ವಾಭಾವಿಕವಾಗಿ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಅತ್ಯಂತ ಹೆಚ್ಚು ಮತಗಳಿಂದ ಜಯಭೇರಿ ಗಳಿಸಲಿ ಎಂದು ವಿಶೇಷವಾಗಿ ತಾಯಿ ಹಾಸನಾಂಬೆ ದೇವಿ ಬಳಿ ಬೇಡಿದ್ದೇನೆ. ಮುಂದಿನ ವಾರ ಚನ್ನಪಟ್ಟಣಕ್ಕೆ ನಾನೂ ಪ್ರಚಾರಕ್ಕೆ ಹೋಗುತ್ತೇನೆ. ಎನ್‌ಡಿಎ ಅಭ್ಯರ್ಥಿ ಎಂದ ಮೇಲೆ ಜೆಡಿಎಸ್ ಬಿಜೆಪಿ ಎಂಬ ಮಾತೇ ಬರೊಲ್ಲ. ಎರಡೂ ಒಂದೇ ತಾನೇ ಎಂದರು.
ನಿಖಿಲ್ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿಯವರು ಸಕ್ರಿಯವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹುಮ್ಮಸಿನಿಂದ ಈ ಬಾರಿ ಗೆಲುವು ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.