ಯುದ್ಧಕ್ಕೆ ಮುನ್ನ ಶಸ್ತ್ರ ತ್ಯಾಗ ಮಾಡಿತಾ ಜೆಡಿಎಸ್? ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ!
ನಮ್ಮ ಜನ ಪಾಪ ನೋಡೋಕೆ ಬಂದಿದ್ದರು. ಅವರನ್ನ ನಾನು ಭೇಟಿ ಮಾಡಿದ್ದೇನೆ. ಅವರಿಗೆಲ್ಲ 'ನಾನೇ ಕ್ಯಾಂಡಿಡೇಟ್' ಅಂತ ಕೆಲಸ ಮಾಡಲು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಚನ್ನಪಟ್ಟಣ (ಅ.19): ನಮ್ಮ ಜನ ಪಾಪ ನೋಡೋಕೆ ಬಂದಿದ್ದರು. ಅವರನ್ನ ನಾನು ಭೇಟಿ ಮಾಡಿದ್ದೇನೆ. ಅವರಿಗೆಲ್ಲ 'ನಾನೇ ಕ್ಯಾಂಡಿಡೇಟ್' ಅಂತ ಕೆಲಸ ಮಾಡಲು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಇಂದು ಮೊದಲ ಹಂತದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಅಪೋಸಿಶನ್ ಪಾರ್ಟಿ ಅವರದು ಏನು ಅಂತಾ ಗೊತ್ತಾಯ್ತಲ್ಲ, ಅಷ್ಟು ವೀಕ್ ಆಗ್ತಾರೆ ಅಂತ ನಾನು ತಿಳಿದುಕೊಂಡಿರಲಿಲ್ಲ ನೋಡೋಣ. ರಾತ್ರಿ ಎಲ್ಲ ಸಭೆಗಳು ನಡೆದಿದೆ. ಜೆಡಿಎಸ್‌ನವರ ಸೀಟು ಬಿಟ್ಟು ಕೊಡ್ತಾರೆ ಅಂತಾ ಯಾರೋ ಫೋನ್ ಮಾಡಿದ್ರು. ಏನೋ ಬಿಟ್ಟು ಕೊಡ್ತಾ ಇದ್ದಾರೆ ಕ್ಷೇತ್ರ ನಾ ಅಂತ ಮಾಹಿತಿ ಬಂತು. ಜೆಡಿಎಸ್ ಅವರು ಇಷ್ಟು ವೀಕ್ ಅಂತಾ ನಾನು ಅಂದುಕೊಂಡಿರಲಿಲ್ಲ. ನಮ್ಮೊಂದಿಗೆ ಫೈಟ್ ಮಾಡ್ತಾರೆ ಅಂತ ಅನ್ಕೊಂಡಿದ್ದೆ ಆದರೆ ಬಿಟ್ಟುಕೊಡುತ್ತಾರೆ ಅಂತ ಈಗ ಮಾಹಿತಿ ಬಂತು ನನಗೆ. ನಮ್ಮ ಕಾರ್ಯಕರ್ತರ, ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಯಾರೇ ಅಭ್ಯರ್ಥಿಯಾದರೂ ಡಿಕೆ ಶಿವಕುಮಾರ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದೇನೆ ಎಂದರು.
ಆರೋಪ ಬಂದಾಗ ಖರ್ಗೆ, ಸಿಎಂ ಸೈಟ್ ವಾಪಸ್ ಕೊಟ್ರು, ನಮ್ಮ ಮಾದರಿ ಬಿಜೆಪಿ ಅನುಸರಿಸಲಿ: ಐವನ್ ಡಿಸೋಜಾ
ನಮ್ಮ ಕಾರ್ಯಕರ್ತರ ಜೊತೆಗೆ ನಾನು ಮಾತನಾಡಿದ್ದೇನೆ. ಜೆಡಿಎಸ್ ಕ್ಷೇತ್ರ ಬಿಟ್ಟು ಕೊಡ್ತಿದ್ದಾರೆ ಅಂತೆ ಈ ರೀತಿಯಾದ ಸುದ್ದಿ ಕೇಳಿದೆ. ನಾನು ಕ್ಷೇತ್ರಕ್ಕೆ ಹೋಗಲೇಬೇಕು. ಸೇವೆ ಮಾಡುವ ಸಲುವಾಗಿ ಹೋಗ್ತಿದ್ದೆ. ಆದರೆ ಕ್ಷೇತ್ರದಲ್ಲಿ ಜೆಡಿಎಸ್ ಇಷ್ಟು ವೀಕ್ ಇದ್ದಾರೆ ಅಂತಾ ನನಗೆ ಗೊತ್ತಿರಲಿಲ್ಲ ಎಂದರು. 'ಯುದ್ಧಕ್ಕೆ ಮುನ್ನ ಶಸ್ತ್ರ ತ್ಯಾಗ ಮಾಡಿತಾ ಜೆಡಿಎಸ್?' ಎಂಬ ಪ್ರಶ್ನೆಗೆ ಇದನ್ನ ನೀವು ಅವರನ್ನೇ ಕೇಳಬೇಕು ಎಂದರು.
ರಾಜ್ಯ ರಾಜಕಾರಣದಲ್ಲಿ ಹಲವು ಸಾಧ್ಯತೆಗಳು ಇರುತ್ತವೆ. ಯಾರು ಬೇಕಾದರೂ ಕ್ಯಾಂಡಿಡೇಟ್ ಆಗಬಹುದು. ಕಾರ್ಯಕರ್ತರನ್ನು ನಿಲ್ಲಿಸಿದ್ರು ಕೂಡ ತಯಾರಿರಬೇಕು ಅಂತ ಹೇಳಿದ್ದೇವೆ. ಡಿಕೆ ಸುರೇಶ್ ಅವರ ಹೆಸರು ಕೂಡ ಹೇಳಿದ್ದಾರೆ. ಅವರಿಗೂ ಜವಾಬ್ದಾರಿ ಇದೆ ಅಲ್ವಾ? ಯಾರಿಗೂ ನಾವು ಮನವೊಲಿಸುವುದಿಲ್ಲ ನಾವು ಇಂಥವರು ಕ್ಯಾಂಡಿಡೇಟ್ ಅಂತ ಹೇಳ್ತೇವೆ. ಸುರೇಶ್ ಹೇಳಲಿ ನಾನು ಹೇಳಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಸುರೇಶ್ ಅವರು ಚುನಾವಣೆ ನಿಲ್ಲುವ ಮನಸ್ಥಿತಿಯಲ್ಲಿದ್ದಾರೆ ಎಂಬ ಪ್ರಶ್ನೆಗೆ 'ಇಲ್ಲ ಅವರದ್ದು ಏನೋ ಲೆಕ್ಕಾಚಾರ ಇರುತ್ತೆ ಎಂದರು.
ಶೋಭಾ ಕರಂದ್ಲಾಜೆ ರಾಜಕಾರಣದಲ್ಲಿ ಬೆಂಕಿ ಹಚ್ಚೋದು ಬಿಟ್ಟು ಬೇರೇನೂ ಮಾಡಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ
ಚನ್ನಪಟ್ಟಣ ಸಭೆಯಲ್ಲಿ ಡಿಕೆ ಸುರೇಶ್ ಕ್ಯಾಂಡಿಡೇಟ್ ಮಾಡಿ ಎಂಬ ಒತ್ತಾಯ ಕೇಳಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ ಅವರು, ಬಹುತೇಕ ಕಾರ್ಯಕರ್ತರು ಡಿಕೆ ಸುರೇಶ್ ಅಭ್ಯರ್ಥಿ ಮಾಡುವಂತೆ ಮನವಿ ಮಾಡಿದ್ದಾರೆ. ಡಿಕೆ ಸುರೇಶ್ ಮಾತ್ರ ಸಮರ್ಥ ಅಭ್ಯರ್ಥಿ ಎಂದಿರುವ ಕಾರ್ಯಕರ್ತರು. ಅವರ ಸ್ಪರ್ಧೆಗೆ ಸಭೆಯಲ್ಲಿ ಒತ್ತಡ ಹೆಚ್ಚಾಗಿದೆ. ಆದರೆ ಒಂದು ಮಾತು, ನಮ್ಮ ಶತ್ರು ಕಾಂಗ್ರೆಸ್ ಅಭ್ಯರ್ಥಿ ಆದರೂ ನೀವೆಲ್ಲ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಡಿಕೆ ಶಿವಕುಮಾರ ಕ್ಯಾಂಡಿಡೇಟ್ ಎಂದು ಭಾವಿಸಿ ಕೆಲಸ ಮಾಡಬೇಕು. ಸಾಮಾನ್ಯ ಕಾರ್ಯಕರ್ತರ ಸ್ಪರ್ಧೆ ಮಾಡಿದ್ರೂ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ಕೆಲದ ಮಾಡುವಂತೆ ಕಿವಿಮಾತು ಹೇಳಿದರು.