ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರ: ಎಚ್.ವಿಶ್ವನಾಥ್
ರಾಜ್ಯದ ಅಭಿವೃದ್ಧಿ ಮತ್ತು ಏಳಿಗೆಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರವಾಗಿದ್ದು ವಿಶ್ವ ಮನ್ನಣೆಗಳಿಸಿರುವ ಬೆಂಗಳೂರು ನಗರವನ್ನು ಸುಂದರವಾಗಿ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಕೆ.ಆರ್. ನಗರ (ಜು.17): ರಾಜ್ಯದ ಅಭಿವೃದ್ಧಿ ಮತ್ತು ಏಳಿಗೆಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರವಾಗಿದ್ದು ವಿಶ್ವ ಮನ್ನಣೆಗಳಿಸಿರುವ ಬೆಂಗಳೂರು ನಗರವನ್ನು ಸುಂದರವಾಗಿ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು. ಪಟ್ಟಣದ ಶ್ರೀರಾಮ ಬಡಾವಣೆಯ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಾಡಹಬ್ಬಗಳ ಸಮಿತಿ ಮತ್ತು ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಪ್ರಭುಗಳು ಬೆಂಗಳೂರು ನಗರ ನಿರ್ಮಾಣ ಮಾಡಿದರೆ, ಕೆಂಗಲ್ ಹನುಮಂತಯ್ಯನವರು ವಿಶ್ವ ವಿಖ್ಯಾತ ವಿಧಾನಸೌಧ ಕಟ್ಟಡ ಕಟ್ಟಿಸಿದ್ದು ಇಂತಹ ಮಹಾನ್ ಸಾಧಕರು ನಮಗೆ ಸದಾ ಮಾದರಿ ಮತ್ತು ದಾರಿ ದೀಪ ಎಂದರು. ಸಾಧಕರನ್ನು ಸಮುದಾಯದವರು ಸದಾ ಸ್ಮರಿಸಬೇಕು. ನಾಡಪ್ರಭು ಕೆಂಪೇಗೌಡರು ಜನರ ಸ್ವತ್ತೆ ಹೊರತು ಜನಾಂಗದ ಸ್ವತ್ತಲ್ಲ. ಹಾಗಾಗಿ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಸರ್ವರೂ ಆಚರಿಸಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯಿಂದ ಮತ್ತೆ ಕೋಮುಗಲಭೆ ಸೃಷ್ಟಿ: ಸಚಿವ ಈಶ್ವರ ಖಂಡ್ರೆ
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರವೂ ಒಕ್ಕಲಿಗ ಸಮಾಜ ರಾಜ್ಯ ಮತ್ತು ದೇಶದ ಅಭಿವೃದ್ಧಿ ವಿಚಾರದಲ್ಲಿ ಮಹತ್ತರ ಕೊಡುಗೆಗಳನ್ನು ನೀಡಿದ್ದು ಅಸಾಮಾನ್ಯ ನಾಯಕರನ್ನು ಹುಟ್ಟುಹಾಕಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ರವಿಶಂಕರ್ ಮಾತನಾಡಿ, ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ವಿಶಿಷ್ಟಹೆಸರು ಬರಲು ನಾಡಪ್ರಭು ಕೆಂಪೇಗೌಡರು ಪ್ರಮುಖ ಕಾರಣವಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ರಾಜ್ಯದ ರಾಜಧಾನಿಯನ್ನು ನಿರ್ಮಾಣ ಮಾಡಿದ ಮಹಾನ್ ಪುರುಷರೆಂದು ಕೊಂಡಾಡಿದರು.
ಸಾಧಕರು ಮತ್ತು ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಒಂದು ವರ್ಗಕ್ಕೆ ಸೀಮಿತವಾಗುವಂತೆ ಮಾಡದೆ ಸರ್ವ ಜನಾಂಗದವರು ಸೇರಿ ಆಚರಿಸಿದರೆ ಆಗ ಜಯಂತಿಗೆ ಅರ್ಥ ಬರುತ್ತದೆ. ಸೂರ್ಯ ಮತ್ತು ಚಂದ್ರರು ಇರುವವರೆಗೂ ಕೆಂಪೇಗೌಡರ ಹೆಸರು ಅಜರಾಮರವಾಗಿ ಇರಲಿದೆ ಎಂದು ನುಡಿದರು.
ಶಿಷ್ಟಾಚಾರ ಪಾಲನೆ: ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಶಿಷ್ಟಾಚಾರ ಪಾಲಿಸಲಾಗಿದ್ದು ಅತಿಥಿಗಳನ್ನು ಆಹ್ವಾನಿಸುವಲ್ಲಿ ನನ್ನದಾಗಲಿ ಅಥವಾ ತಹಸೀಲ್ದಾರ್ ಅವರ ಪಾತ್ರವಾಗಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಿನ್ನೆ ಸಂಜೆವರೆಗೆ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡರು, ಶಿಷ್ಟಾಚಾರ ಉಲ್ಲಂಘನೆ ಮತ್ತು ಸಲ್ಲದ ನೆಪ ಹೇಳಿ ಕಾರ್ಯಕ್ರಮಕ್ಕೆ ಬಾರದಿರುವುದು ಅತ್ಯಂತ ವಿಷಾನಿಯ ಎಂದರು.
ಬೆಂ-ಮೈ ಹೈವೇಯಲ್ಲಿ ನಿಯಮ ಉಲ್ಲಂಘನೆ: ಪೊಲೀಸರಿಂದ 1 ಲಕ್ಷ ದಂಡ ವಸೂಲಿ
ನಿವೃತ್ತ ಪ್ರಾಂಶುಪಾಲ ಕೃಷ್ಣ ಮಾತನಾಡಿದರು. ಸಂಘದ ಹಿರಿಯ ಉಪಾಧ್ಯಕ್ಷ ಎಚ್.ಪಿ.ಪರಶುರಾಂ, ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ತಾಪಂ ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಷ, ಒಕ್ಕಲಿಗ ಸಮಾಜದ ಮುಖಂಡರಾದ ಎಸ್.ಪಿ.ತಮ್ಮಯ್ಯ, ಎಚ್.ಪಿ.ಗೋಪಾಲ, ಎ.ಟಿ.ಗೋಪಾಲ, ಮಿರ್ಲೆ ದೀಪು, ಎಂ.ಜೆ.ರಮೇಶ್, ಉದಯಶಂಕರ್, ಚಿಕ್ಕ ಹನಸೋಗೆ ಸತೀಶ್, ತಹಸೀಲ್ದಾರರಾದ ಎಂ.ಜೆ. ಸಂತೋಷ್ ಕುಮಾರ್, ತಿಮ್ಮಪ್ಪ, ತಾಪಂ ಇಒ ಎಚ್.ಕೆ. ಸತೀಶ್ ಇದ್ದರು.