Asianet Suvarna News Asianet Suvarna News

ಟಿಪ್ಪು ಸುಲ್ತಾನ್‌ ಈ ನೆಲದ ಮಗ, ವೀರ ಹೋರಾಟಗಾರ: ಬಿಜೆಪಿ ನಾಯಕ

ಯಡಿಯೂರಪ್ಪ ನಾಲಿಗೆ ಮೇಲೆ ನಿಂತ ನಾಯಕ| ಮಂತ್ರಿಗಿರಿ ನೀಡುವಂತೆ ಸಿಎಂ ಬಿಎಸ್‌ವೈ ಮೇಲೆ ಪರೋಕ್ಷವಾಗಿ ಒತ್ತಡ ಹಾಕಿದ ಹೆಚ್. ವಿಶ್ವನಾಥ್| ಭಾರತ ದೇಶದ ರಾಷ್ಟ್ರೀಯ ಪಕ್ಷದ ನಾಯಕನಾಗುವ ಸಾಮರ್ಥ್ಯ ರಾಹುಲ್‌ಗೆ ಇಲ್ಲ| 

MLC H Vishwanath Talks Over Tipu Sultan
Author
Bengaluru, First Published Aug 26, 2020, 1:29 PM IST

ಬೆಂಗಳೂರು(ಆ.26): ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳೋದಿಲ್ಲ, ಅವರೇ ತಿಳಿದು ಮಾಡಬೇಕು. ಈ ಸರ್ಕಾರ ಬರೋದಕ್ಕೆ ನಾನು ಒಬ್ಬ ಕಾರಣನಾಗಿದ್ದೇನೆ. ನಾನು ಸಚಿವನಾಗಿ ಏನೋ ಮಾಡಿ ಬಿಡುತ್ತೇನೆ ಎಂದಲ್ಲ, ನಾನು ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದೇನೆ. 1978 ರಲ್ಲಿ ರಾಜಕೀಯಕ್ಕೆ ಬಂದಿದ್ದೇನೆ, ಮಲ್ಲಿಕಾರ್ಜುನ್‌ ಅವರು ಖರ್ಗೆಯವರು 72 ರಲ್ಲಿ ಬಂದವರಾಗಿದ್ದಾರೆ. ನಮ್ಮಂತವರ ಅನುಭವ ಪಡೆಯಿರಿ ಎಂದು ಹೇಳ್ತಾ ಇದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಹೇಳಿದ್ದಾರೆ. 

"

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಸಿಎಂ ಯಡಿಯೂರಪ್ಪರ ಮನೆಗೆ ಹೋಗಿ ಮಂತ್ರಿ ಮಾಡಿ ಎಂದು ಕೇಳುವುದಿಲ್ಲ, ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ ಅವರಾಗಿದ್ದಾರೆ ಎಂದು ಹೇಳುವ ಮೂಲಕ ಮಂತ್ರಿಗಿರಿ ನೀಡುವಂತೆ ಸಿಎಂ ಬಿಎಸ್‌ವೈ ಮೇಲೆ ಪರೋಕ್ಷವಾಗಿ ಒತ್ತಡ ಹಾಕಿದ್ದಾರೆ. 

ಎಂಟಿಬಿ, ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡದಂತೆ ಅರ್ಜಿ

ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಹೋರಾಟದ ಬಗ್ಗೆ ಮಾತನಾಡುವ ವೇಳೆ ಟಿಪ್ಪು ಸುಲ್ತಾನ್‌ನನ್ನ ವಿಶ್ವನಾಥ್ ಹೊಗಳಿದ್ದಾರೆ. ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್ ಆಗಿದ್ದಾನೆ. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದು ತಿಳಿಸಿದ್ದಾರೆ.

ನಿಮ್ಮ ಪಕ್ಷದವರು ಟಿಪ್ಪು ವಿರೋಧಿಗಳು ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್‌ ಅವರು, ಹಾಗೆಲ್ಲಾ ಹೇಳಬಾರದು, ಟಿಪ್ಪು ಈ ನೆಲದ ಮಗನಾಗಿದ್ದಾನೆ. ವೀರ ಹೋರಾಟಗಾರನಾಗಿದ್ದಾನೆ. ಪಠ್ಯದಲ್ಲಿ ಟಿಪ್ಪು ಪಾಠ ಕೈ ಬಿಟ್ಟಿಲ್ಲ, ಐದನೇ ತರಗತಿಯಿಂದ ಏಳನೇ ತರಗತಿಗೆ ಹಾಕಿದ್ದಾರೆ. ಗಾಂಧೀಜಿ ಇಂದ ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು. ಆಗ್ಲೇ ರಕ್ತ ಒಂತರಾ ಆಗೋದು ಹೆಚ್. ವಿಶ್ವನಾಥ್ ಹೇಳಿದ್ದಾರೆ. 

ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕಾಂಗ್ರಸ್ ನಲ್ಲಿದ್ದಾಗಲೇ ಈ ಬಗ್ಗೆ ಮಾತನಾಡಿದ್ದೆ ರಾಹುಲ್ ಗಾಂಧಿ ಬದಲಾಗಿ ಪ್ರಿಯಾಂಕ ಗಾಂಧಿಗೆ ನಾಯಕತ್ವ ನೀಡುವಂತೆ ಸಲಹೆ ನೀಡಿದ್ದೆ, ಅತ್ಯಂತ ದೊಡ್ಡ ಗಣತಂತ್ರ ರಾಷ್ಟ್ರ ಭಾರತವಾಗಿದೆ. ಈ ದೇಶದ ರಾಷ್ಟ್ರೀಯ ಪಕ್ಷದ ನಾಯಕನಾಗುವ ಸಾಮರ್ಥ್ಯ ರಾಹುಲ್‌ಗೆ ಇಲ್ಲ. ಪ್ರಿಯಾಂಕ ಗಾಂಧಿಗೆ ಕೊಡುವುದು ಒಳಿತು ಎಂದು ಹೇಳಿದ್ದಾರೆ. 

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು

"

Follow Us:
Download App:
  • android
  • ios