ಸಿದ್ದರಾಮಯ್ಯ ಕೊಡುಗೆಗಳಿಂದ ರಾಜ್ಯದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ: ವಿಶ್ವನಾಥ್‌

ವಿಪಕ್ಷ ನಾಯಕರೂ ಕೂಡ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡುತ್ತಿಲ್ಲ. ಸಾಲ ಮರುಪಾವತಿಗೆ ಪರದಾಡುತ್ತಿರುವ ಸಂದರ್ಭದಲ್ಲಿಯೇ ಮತ್ತೆ ಸಾರಿಗೆ ಇಲಾಖೆಗೆ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ. 18ರಷ್ಟು ಬಡ್ಡಿ ಕಟ್ಟಬೇಕು. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ ಎಂದು ಅವರು ಟೀಕಿಸಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ 

MLC H Vishwanath Talks Over Financial Status of Siddaramaiah's Government grg

ಮೈಸೂರು(ಜ.03):  ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗರಿಸಿ ಬಿದ್ದಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸಿನ ಸ್ಥಿತಿಗತಿ ಕುರಿತು ಜನರ ಮುಂದೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ತಜ್ಞ ಮೋಹನ್ದಾಸ್ ಪೈ ಅವರು ಆರ್ಥಿಕ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿರುವಾಗಲೇ, ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ನಾಲ್ಕು ನಿಗಮಕ್ಕೆ ಎರಡು ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ ನೀಡಿದೆ. ಇದನ್ನು ನೋಡಿದರೆ ಆರ್ಥಿಕ ಸ್ಥಿತಿ ಹದಗೆಟ್ಟು ಕುತ್ತಿಗೆ ಹಿಸುಕಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದರು.

ವಿಧಾನಸೌಧ ದೊಡ್ಡ ಮಾಲ್ ಇದ್ದಂತೆ, ಅಲ್ಲಿ ಕೇಳುವ ಕಿವಿಗಳಿಲ್ಲ: ಎಚ್.ವಿಶ್ವನಾಥ್

ವಿಪಕ್ಷ ನಾಯಕರೂ ಕೂಡ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡುತ್ತಿಲ್ಲ. ಸಾಲ ಮರುಪಾವತಿಗೆ ಪರದಾಡುತ್ತಿರುವ ಸಂದರ್ಭದಲ್ಲಿಯೇ ಮತ್ತೆ ಸಾರಿಗೆ ಇಲಾಖೆಗೆ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ. 18ರಷ್ಟು ಬಡ್ಡಿ ಕಟ್ಟಬೇಕು. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಭಾಷಣ ಬಿಗಿಯುತ್ತಾರೆ. 16ನೇ ಬಜೆಟ್ ಮಂಡಿಸಲು ತಯಾರಾಗುತ್ತಿದ್ದಾರೆ. ಕಳೆದ ವರ್ಷ ಏನು ಬದಲಾವಣೆ ಆಗಿದೆ. ಹೊಸತನದಿಂದ ಆದಾಯ ಸಂಗ್ರಹಿಸಲಾಗಿದೆ ಎಂಬುದು ಇಲ್ಲ. ಹಣಕಾಸು ಚೆನ್ನಾಗಿದ್ದರೆ ಅಥವಾ ಚೆನ್ನಾಗಿಲ್ಲ ಎನ್ನುವುದನ್ನು ಜನರ ಮುಂದೆ ಸತ್ಯಹೇಳಬೇಕೆ ಹೊರತು ಮುಚ್ಚಿಟ್ಟುಕೊಳ್ಳಬಾರದು. ತಕ್ಷಣವೇ ಶ್ವೇತ ಪತ್ರ ಹೊರಡಿಸಿ ಜನರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.

ಅಧಿಕಾರಿಗಳ ಮೇಲೆ ಸಿದ್ದರಾಮಯ್ಯರಿಗೆ ಹಿಡಿತ ಇಲ್ಲ. ರೋಹಿಣಿ ಸಿಂಧೂರಿ ಹಾಗೂ ರೂಪಾ ಬೀದಿ ಜಗಳ ಮಾಡಿಕೊಂಡಿದ್ದರೂ ಅವರ ಮೇಲೆ ಯಾಕೆ ಶಿಸ್ತು ಕ್ರಮಜರುಗಿಸಿಲ್ಲ. ಕೇಂದ್ರ ಸೇವೆಗೆ ಕಳುಹಿಸದೆ ಇಟ್ಟುಕೊಳ್ಳಲಾಗಿದೆ. ಆಡಳಿತದಲ್ಲಿ ಬಿಗಿ ಕ್ರಮಗಳು ಇಲ್ಲದಿರುವುದು ಇದಕ್ಕೆ ಕಾರಣ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ಮಹಜರು ಹೇಗೆ?

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕರಣದಲ್ಲಿ ಸ್ಥಳ ಮಹಜರು ಮಾಡುತ್ತೇನೆಂದು ಪೊಲೀಸರು ಹೇಳುತ್ತಿರುವುದು ನಾಚಿಕೆಗೇಡು. ಈಗಾಗಲೇ ಸಭಾಪತಿಗಳು ಮುಗಿದ ಅಧ್ಯಾಯ ಎಂದಿದ್ದಾರೆ. ಪೊಲೀಸರು ಕುರ್ಚಿ, ಟೇಬಲ್ ನೋಡಿ ಮಹಜರು ಮಾಡುತ್ತಾರೆಯೇ? ಅಧಿವೇಶನದ ಘನತೆ, ಗೌರವ, ಪರಂಪರೆಯನ್ನು ಹಾಳು ಮಾಡಲಾಗಿದೆ. ವಿಧಾನಸೌಧದ ಒಳಗೆ ಮತ್ತು ಕಾರಿಡಾರ್ ನಲ್ಲಿ ಪೊಲೀಸರು ಬರಬಾರದೆಂದು ಮಾರ್ಷಲ್ ಗಳನ್ನು ನೇಮಿಸಲಾಗಿದೆ. ಆದರೂ ಯಾವ ಮಹಜರು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ಸೈಟ್ ಕೊಡದಿದ್ದಕ್ಕೆ ವಿಶ್ವನಾಥ್‌ಗೆ ಸಿಟ್ಟು, ಕಡಿಮೆ ಬೆಲೆಗೆ ಎಕರೆಗಟ್ಟಲೆ ನಿವೇಶನ ಕೇಳಿದ್ದರು: ಸಚಿವ ಬೈರತಿ ಸುರೇಶ್

ನಟ ಶಿವರಾಜಕುಮಾರ್ ಕ್ಯಾನ್ಸರ್ ನಿಂದ ಮುಕ್ತಿ ಹೊಂದಿರುವುದು ಸಂತಸ. ನಾಡಿನ ಜನರ ಹಾರೈಕೆಯಿಂದ ಆರೋಗ್ಯವಾಗಿ ಹಿಂತಿರುಗಬೇಕು. ಮುಂದಿನ ದಿನಗಳಲ್ಲಿ ಎಂದಿನಂತೆ ಚಿತ್ರದಲ್ಲಿ ನಟಿಸಬೇಕು ಎಂದರು.

ರಾಜಕಾರಣಿಗಳು ಕೆಲವೊಮ್ಮೆ ಚಮಚಗಿರಿ ಮಾಡುವುದು ನೋಡಿದ್ದೇವೆ, ಸಹಜ ಕೂಡ. ಅಧಿಕಾರಿಗಳು ಚಮಚಗಿರಿ ಮಾಡಿದರೆ ಕಷ್ಟ. ನಗರ ಪಾಲಿಕೆ ಆಯುಕ್ತರು 30 ವರ್ಷಗಳ ದಾಖಲೆ ನೋಡುವುದಲ್ಲ. ಸಿಐಟಿಬಿ ರಚನೆಯಾಗಿ ನೂರು ವರ್ಷ ಕಳೆದಿವೆ ಎನ್ನುವುದು ಗೊತ್ತಿಲ್ಲವೇ? ಮುಡಾದಲ್ಲಿ ಸದಸ್ಯರಾಗಿರುವ ನೀವು ದಾಖಲೆ ಪಡೆದುಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios