ಮೈಸೂರು(ಜು.27): ವಿರೋಧ ಪಕ್ಷಗಳಿಗೆ ಬರೀ ವಿರೋಧ ಮಾಡೋದು ಮಾತ್ರ ಗೊತ್ತು. ಅವರು ಅಧಿಕಾರದಲ್ಲಿದ್ದಾಗ ರಾತ್ರಿ ವೇಳೆ ಚಂದ್ರನನ್ನು ಕಾಣುತ್ತಾರೆ. ಆದರೆ, ಅವರು ಅಧಿಕಾರದಲ್ಲಿ ಇಲ್ಲದೇ ಇರುವಾಗ ಅದ್ಯಾಕೊ ರಾತ್ರಿವೇಳೆ ಸೂರ್ಯ ಕಾಣ್ತಿಲ್ಲ’ ಅಂತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವ್ಯಂಗ್ಯವಾಡಿದ್ದಾರೆ.

ಕೊರೋನಾ ಸಂಕಷ್ಟದ ನಡುವೆಯೂ ತವರು ಮರೆಯದ ಸಿಎಂ!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಸರ್ಕಾರದ ಸಾಧನೆ ಅಥವಾ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡೋದು ಗೊತ್ತೇ ಇಲ್ಲ ಎಂದಿದ್ದಾರೆ.

ಅಲ್ಲದೇ ಒಂದು ವರ್ಷದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ ಬಿಜೆಪಿ ಸರ್ಕಾರ. ಆ ಒಂದೆ ಒಂದು ಕೆಲಸವನ್ನೂ ಒಳ್ಳೆಯದು ಎಂದು ಹೇಳಲಿ. ಅದು ಬಿಟ್ಟು ಎಲ್ಲವನ್ನೂ ಟೀಕೆ ಮಾಡೋದು ಸರಿಯಲ್ಲ. ವಿರೋಧ ಪಕ್ಷದ ನಾಯಕರ ನಿಲವುಗಳು ದ್ವಂದದಿಂದ ಕೂಡಿವೆ ಎಂದು ಕಿಡಿಕಾರಿದ್ದಾರೆ.