MLC Election Result: 'ನಿಖಿಲ್‌ ಕುಮಾರಸ್ವಾಮಿಯನ್ನ ಸೋಲಿಸಿದಂತೆ ನನ್ನನ್ನೂ ಸೋಲಿಸಿದ್ರು'

* ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟ
* ಭದ್ರಕೋಟೆ ಮಂಡ್ಯದಲ್ಲಿ ಜೆಡಿಎಸ್‌ ಮುಖಭಂಗ
* ಮಂಡ್ಯದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ದಿನೇಶ್ ಗೂಳಿಗೌಡ

MLC Election Result 2021 JDS Candidate Appaji Gowda Reacts about Defeats In Mandya rbj

ಮಂಡ್ಯ, (ಡಿ.14): ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ (Karnataka MLC Election) 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ(Election Result) ಪ್ರಕಟವಾಗಿದೆ.

ಕಾಂಗ್ರೆಸ್ (Congress) ಹಾಗೂ ಬಿಜೆಪಿ9BJP) ತಲಾ 11ರಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ(Manday) ಜೆಡಿಎಸ್‌ಗೆ ಬಿಗ್ ಶಾಕ್ ಆಗಿದೆ.

ಹಾಲಿ ವಿಧಾನರಷತ್ ಸದಸ್ಯ ಅಪ್ಪಾಜಿಗೌಡ ಅವರು ಸೋಲುಕಂಡಿದ್ದು, ಕಾಂಗ್ರೆಸ್‌ನ ದಿನೇಶ್‌ ಗೂಳಿಗೌಡ ಗೆಲುವು ಸಾಧಿಸಿದ್ದಾರೆ.  7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯದಲ್ಲಿ, ದಳದ 6 ಶಾಸಕರಿದ್ದರೂ ಗೆಲುವು ಸಿಕ್ಕಿಲ್ಲ.

MLC Election Result: ಹಳೇ ಮೈಸೂರಲ್ಲೇ ನೆಲಕಚ್ಚಿದ ಜೆಡಿಎಸ್, ಭದ್ರಕೋಟೆ ಛಿದ್ರ-ಛಿದ್ರ..!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಪ್ಪಾಜಿಗೌಡ, ನಿಖಿಲ್ ಕುಮಾರಸ್ವಾಮಿ ಅವರನ್ನು ಷಡ್ಯಂತ್ರದಿಂದ ಸೋಲಿಸಿದಂತೆ ನನ್ನನ್ನೂ ಸೋಲಿಸಿದ್ರು. ಜೆಡಿಎಸ್ ಪಕ್ಷವನ್ನ ಸೋಲಿಸಲು ಎಲ್ಲ ಪಕ್ಷದವರೂ ಷಡ್ಯಂತ್ರ ಮಾಡಿದ್ರು. ಕೊನೇ‌ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿಯಾದ್ರು ಎಂದು ಆರೋಪಿಸಿದರು.

ಈ ಸೋಲಿಗೆ ಅತಿಯಾದ ಆತ್ಮವಿಶ್ವಾಸವೂ ಮುಳುವಾಯ್ತು. ಬಿಜೆಪಿಯ ಮತ ಆ ಪಕ್ಷಕ್ಕೆ(ಕಾಂಗ್ರೆಸ್​) ಹೋಗಿದ್ದರಿಂದಲೇ ನಮಗೆ ಹಿನ್ನಡೆಯಾಯ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿದ್ದು ನನ್ನ ಸೋಲಿಗೆ ಕಾರಣ. ಬಿಜೆಪಿಯು ತನ್ನ ಪಾಲಿನ ಮತಗಳನ್ನು ತಾನೇ ಪಡೆದುಕೊಂಡಿದ್ರೆ ನಾವು ಗೆಲ್ಲುತ್ತಿದ್ದೆವು. ನಾನು ಯಾರನ್ನೂ ಹೊಣೆ ಮಾಡಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕುರಿತು ಮಂಡ್ಯದಲ್ಲಿ ಹೋರಾಟ ಮಾಡೇ ಮಾಡ್ತೀವಿ ಎಂದರು.

ದಿನೇಶ್​ ಗೂಳಿಗೌಡ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಹಲವು ನಾಯಕರು ಒಟ್ಟಿಗೆ ಸೇರಿ ಜೆಡಿಎಸ್ ಪಕ್ಷವನ್ನ ಸೋಲಿಸಲೇಬೇಕೆಂದು ನಿರ್ಧರಿಸಿ ಕೊನೇ ಗಳಿಗೆಯಲ್ಲಿ ಸೋಲಿಸಿದ್ರು ಎಂದು ಅಪ್ಪಾಜಿಗೌಡ ಹೇಳಿದರು.

ಸಾಮಾನ್ಯ ಸಿಬ್ಬಂದಿಯಾಗಿದ್ದ ದಿನೇಶ್‌ ಗೂಳಿಗೌಡ
ಕೆಪಿಸಿಸಿ (KPCC)  ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ಕ್ರಮೇಣ ಮಾಧ್ಯಮ ಘಟಕದ ಅಧ್ಯಕ್ಷನ ಹುದ್ದೆವರೆಗೂ ಬೆಳೆದ ದಿನೇಶ್‌ ಗೂಳಿಗೌಡ (Dinesh Gooligowda)ಅವರಿಗೆ ಮಂಡ್ಯ (Mandya) ಕ್ಷೇತ್ರಕ್ಕೆ ಬಿ-ಫಾರ್ಮ್ ಪಡೆದಾಗ ಕಚೇರಿಯ ಸಿಬ್ಬಂದಿಯಲ್ಲಿ ಅಚ್ಚರಿ, ಹರ್ಷದ ಭಾವ ಮಿಳಿತವಾಗಿತ್ತು.  ಎಸ್‌.ಎಂ. ಕೃಷ್ಣ (SM krishna) ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಕಚೇರಿಯ ಸಿಬ್ಬಂದಿಯಾಗಿ ಸೇರಿದ್ದ ದಿನೇಶ್‌ ಗೂಳಿಗೌಡ ಹಂತ-ಹಂತವಾಗಿ ಬೆಳೆದವರು. ಡಾ. ಜಿ. ಪರಮೇಶ್ವರ್‌ (Dr G Parameshwar) ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷರಾಗಿ ದಿನೇಶ್‌ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್‌ (Congres ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ. ಜಿ. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾದ ನಂತರ ಅವರು ಕೆಪಿಸಿಸಿ ಕಚೇರಿ ತ್ಯಜಿಸಿ ಪರಮೇಶ್ವರ್‌ ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು.

ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios