MLC Election: ಮತದಾರರಿಗೆ ಕೂರಲು ಸ್ವತಃ ಬೆಂಚ್ ಹಾಕಿದ್ರು ಬೆಳಗಾವಿ ಡಿಸಿ

• ಬೆಳಗಾವಿಯಲ್ಲಿ ವಾಯುವ್ಯ ಪರಿಷತ್ ಕ್ಷೇತ್ರಕ್ಕೆ ದಾಖಲೆ ಮತದಾನ
• ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸರಳತೆ ಮೆರೆದ ಡಿಸಿ ನಿತೇಶ್ ಪಾಟೀಲ್
• ಆರ್‌ಸಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಎಂಟ್ರಿ.. ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಕ್ಸಿಟ್..!

MLC Election Belagavi DC Nitesh Patil Visit To Poll Booth gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜೂ.14): ವಾಯುವ್ಯ ಶಿಕ್ಷಕರ, ಪದವೀಧರ ಕ್ಷೇತ್ರಕ್ಕೆ ದಾಖಲೆಯ ಮತದಾನ ಆಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆ ವ್ಯಾಪ್ತಿ ಹೊಂದಿರುವ ವಾಯುವ್ಯ ಪರಿಷತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇರೋದು ಬೆಳಗಾವಿಯಲ್ಲೇ. ಬೆಳಗಾವಿಯಲ್ಲಿ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಶೇಕಡ 86.72ರಷ್ಟು ಮತದಾನ ಆಗಿದೆ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಶೇ 67.80ರಷ್ಟು ಮತದಾನ ಆಗಿದೆ. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾವಣೆ ಮಾಡಿದರು.

ಮತದಾನ ಸಮಯ ವೇಳೆ ವಿವಿಧ ಮತಗಟ್ಟೆಗಳಿಗೆ ತೆರಳಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಪರಿಶೀಲನೆ ನಡೆಸುತ್ತಿದ್ದರು. ಮಧ್ಯಾಹ್ನ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಗೆ ಆಗಮಿಸಿದ ವೇಳೆ ಮತದಾರರು ಸಾಲುಗಟ್ಟಿ ಬಿಸಿಲಿನಲ್ಲಿ ನಿಂತಿದ್ದರು. ಇದನ್ನು ಗಮನಿಸಿದ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ತಾವೇ ಸ್ವತಃ ಶಾಲಾ ಕೊಠಡಿಯೊಳಗೆ ತೆರಳಿ ಬೆಂಚ್ ತಂದು ಮರದ ನೆರಳಲ್ಲಿ ಹಾಕಿದ್ರು. ಈ ವೇಳೆ ಸರದಿ ಸಾಲಿನಲ್ಲಿ ನಿಂತ ಮತದಾರರು ಅಚ್ಚರಿಗೊಂಡರು. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ರ ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರು, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರನ್ನು ಆರಿಸುವುದರ ಹಿನ್ನೆಲೆ ಏನು?

ಪ್ರಾದೇಶಿಕ ಆಯುಕ್ತರು ಭೇಟಿ ನೀಡ್ತಿದ್ದಂತೆ ಕಾಲ್ಕಿತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು: ಇನ್ನು ಬೆಳಗಾವಿ ಪ್ರಾದೇಶಿಕ ಆಯಕ್ತರಾದ ಆದಿತ್ಯ ಅಮ್ಲಾನ್ ಬಿಸ್ವಾಸ್ ಸಹ ಇದೇ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಸರ್ಕಾರಿ ಶಾಲೆಯ ಗೇಟ್ ಬಳಿಯೇ ಟೇಬಲ್ ಹಾಕಿಕೊಂಡು ಕುಳಿತಿದ್ದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಸ್ಕೇಪ್ ಆದ್ರು. ಶಾಲಾ ಆವರಣದ ಎದುರು ಟೇಬಲ್ ಹಾಕಿ ಕುಳಿತಿದ್ದ ವಿವಿಧ ರಾಜಕೀಯ ಪಕ್ಷಗಳ ಏಜೆಂಟರಿಗೆ ಅನುಮತಿ ಇಲ್ಲದೇ ಇಲ್ಲೇಕೆ ಕುಳಿತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಂತೆ ತಕ್ಷಣವೇ ಓಡಿ ಹೋಗಿದ್ದು ಕಂಡು ಬಂತು.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಶಾಸಕ: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು ಬಿಜೆಪಿ ಶಾಸಕ ಅನಿಲ್ ಬೆನಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬೆಳಗಾವಿ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮತಕೇಂದ್ರದೊಳಗೆ ತೆರಳಿದರು.

MLC Election: ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡ ವಿಜಯಪುರ ಜಿಲ್ಲಾಡಳಿತ!

ಮತ ಕೇಂದ್ರದ ಒಳಗೆ ತೆರಳುವ ವೇಳೆ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಮೊಬೈಲ್ ತಗೆದುಕೊಂಡು ಹೋಗಬಾರದೆಂಬ ನಿಯಮ ಇದೆ. ಆದ್ರೆ ಶಾಸಕ ಅನಿಲ್ ಬೆನಕೆ ಮಾಸ್ಕ್ ಧರಿಸದೇ ಮೊಬೈಲ್‌ನೊಂದಿಗೆ ಮತಗಟ್ಟೆಗೆ ತೆರಳಿ ಮಾತುಕತೆ ‌ನಡೆಸಿದ್ದು ಸಹ ಕಂಡ ಬಂತು. ಮತದಾರರಿಗೆ ಇರುವ ನಿಯಮ ಜನಪ್ರತಿನಿಧಿಗಳಿಗೆ ಅನ್ವಯಿಸಲ್ವಾ ಅಂತಾ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ.

Latest Videos
Follow Us:
Download App:
  • android
  • ios