Asianet Suvarna News Asianet Suvarna News

ರಾಜ್ಯದಲ್ಲಿ ಅಶಾಂತಿಗೆ ಸಿದ್ದರಾಮಯ್ಯ ಕಾರಣ: ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಧರ್ಮ, ಧರ್ಮಗಳ ಒಡೆಯುವ ಕೆಲಸ ಮಾಡಿಕೊಂಡ ಬಂದ ಕಾರಣ ಕಳೆದ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಅನುಭವಿಸಬೇಕಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

MLC Chalavadi Narayanaswamy Outraged Against Siddaramaiah At Kolar gvd
Author
First Published Nov 25, 2022, 1:00 AM IST

ಕೋಲಾರ (ನ.25): ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ಧರ್ಮ, ಧರ್ಮಗಳ ಒಡೆಯುವ ಕೆಲಸ ಮಾಡಿಕೊಂಡ ಬಂದ ಕಾರಣ ಕಳೆದ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲು ಅನುಭವಿಸಬೇಕಾಯಿತು ಎಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ನಗರದ ಜಿಲ್ಲಾ ಯುವಜನ ಒಳಕ್ರೀಡಾಂಗಣದಲ್ಲಿ ಎಂಎಲ್‌ಸಿ ನಾರಾಯಣಸ್ವಾಮಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯರು ಎಂದರೆ ನಾವೆಲ್ಲರೂ ಹಿಂದುಗಳೆ. ಯಾವ ಧರ್ಮದವರೇ ಆಗಲಿ ತಪ್ಪು ಮಾಡಿದವರನ್ನು ಕ್ಷಮಿಸಬಾರದು ಎಂದರು.

ರಾಜ್ಯದಲ್ಲಿ ಅಶಾಂತಿಗೆ ಸಿದ್ದು ಕಾರಣ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾರಾಗೃಹದಲ್ಲಿದ್ದ 1500 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಿದ್ದರು. ಈ ಪೈಕಿ 160 ಮಂದಿ ಕ್ರಿಮಿನಲ್‌ ಕೃತ್ಯಗಳಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದ್ದು, ರಾಜ್ಯದಲ್ಲಿ ಹತ್ಯೆ, ಬಾಂಬ್‌ ಬ್ಲಾಸ್ಟ್‌, ಕೋಮು ಗಲಭೆಗಳ ಮೂಲಕ ಅಶಾಂತಿ ವಾತಾವರಣ ಸೃಷ್ಟಿಗೆ ಕಾರಣವಾಗಿದ್ದಾರೆಂದು ಆರೋಪಿಸಿದರು. ಯಾರೇ ಆದರೂ ಕಾನೂನು ವಿರೋ​ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಸಮಥಿಸಿಕೊಳ್ಳಬಾರದು, ಅಂದು ಸಮಾಜ ಘಾತುಕ ಶಕ್ತಿಗಳನ್ನು ಬಿಡುಗಡೆ ಮಾಡಿದ್ದರಿಂದ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣವಾಗಿದೆ ಎಂದರು.

ರಾಜ್ಯದಲ್ಲಿ ಟಿಪ್ಪು ಯೂನಿವರ್ಸಿಟಿ ಮಾಡ್ತೀವಿ: ಸಿಎಂ ಇಬ್ರಾಹಿಂ ಹೇಳಿಕೆ

ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಸಿದ್ದರಾಮಯ್ಯ ಕೋಲಾರಿದಂದ ಸ್ಪರ್ಧೆ ಮಾಡುವುದಿಲ್ಲ, ಅವರು ಚೆನ್ನೈಗೆ ಹೋದರೂ ಮಂಗಳೂರಿಗೆ ಹೋಗುತ್ತಿರುವುದಾಗಿ ಹೇಳಿತ್ತಾರೆ. ಅವರು ಹೋಗುವ ದಾರಿಯನ್ನು ಮತ್ತೊಬ್ಬರಿಗೆ ತಿಳಿಸುವುದಿಲ್ಲ, ಕೋಲಾರದಲ್ಲಿ ಸ್ಪರ್ಧೆ ಮಾಡಲು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೋಲಾರಕ್ಕೆ ಅವರು ನೀಡಿರುವ ಕೊಡುಗೆಯಾದರೂ ಏನಿದೆ. ಕೆಸಿ ವ್ಯಾಲಿ ಜನಕ ಅವರೇನೂ ಅಲ್ಲ, ಮಳೆ ಬರುತ್ತಿರುವುದರಿಂದ ಕೆರೆಗಳು ತುಂಬಿವೆ. ಇದಕ್ಕೂ ತಾವೇ ಕಾರಣವೆಂದು ಸಿದ್ದರಾಮಯ್ಯ ಹೇಳುತ್ತಾರೆಂದು ವ್ಯಂಗ್ಯವಾಡಿದರು.

ತಾವು ಎಂಎಲ್‌ಸಿ ಆದ ಐದು ತಿಂಗಳಿನಿಂದ ಕೋಲಾರದಲ್ಲಿ ಕಚೇರಿ ತೆರೆಯಬೇಕೆಂದುಕೊಂಡಿದ್ದೆ. ಆ ಕೆಲಸವನ್ನು ಇವತ್ತು ಮಾಡಿದ್ದೇನೆ, ಪ್ರತಿ ವಿಧಾನ ಪರಿಷತ್‌ ಸದಸ್ಯರು ಒಂದು ನೋಡಲ್‌ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನನ್ನದು ಕೊಲಾರ ಜಿಲ್ಲೆಯಾಗಿರುವುದರಿಂದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಜಿಲ್ಲೆಯಲ್ಲಿ 6 ಕ್ಷೇತ್ರಗಳು ಬರುತ್ತವೆ, ಮುಳಬಾಗಿಲನ್ನು ವಿಶೇಷವಾಗಿ ಪರಿಗಣಿಸಿದ್ದೇನೆ, ಹಾಗೆಯೆ ಎಲ್ಲಾ ಕ್ಷೇತ್ರಗಳನ್ನು ನೋಡಿಕೊಳ್ಳುವುದಾಗಿ ತಿಳಿಸಿದರು.

ಪಕ್ಷ ಸಂಘಟನೆಗೆ ಸಹಕಾರಿ: ಸಂಸದ ಎಸ್‌.ಮುನಿಸ್ವಾಮಿ ನೂತನ ಕಚೇರಿ ಉದ್ಘಾಟನೆ ಮಾಡಿ ಇದೇ ಜಿಲ್ಲೆಯವರು ಆಗಿರುವುದರಿಂದ ನಮ್ಮ ಜಿಲ್ಲೆಯನ್ನು ಇವರ ಸೇವೆ ಬಳಸಿಕೊಂಡು ಅಭಿವೃದ್ದಿ ಜೊತೆಗೆ ಪಕ್ಷ ಸಂಘಟನೆ ಮಾಡಬಹುದಾಗಿದೆ ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್‌, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ದರಖಾಸ್ತು ಸಮಿತಿ ಸದಸ್ಯ ಬೈಚಪ್ಪ, ಜಿ.ಪಂ. ಮಾಜಿ ಸದಸ್ಯ ಎಸ್‌.ಬಿ.ಮುನಿವೆಂಕಟಪ್ಪ, ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ರಾಜೇಶ್‌ ಸಿಂಗ್‌, ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮಾಧ್ಯಮ ಪ್ರಮುಖ್‌ ಕೆಂಬೋಡಿ ನಾರಾಯಣಸ್ವಾಮಿ, ಓಹೀಲೇಶ್‌ ಇದ್ದರು.

Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ನೀಡಿದ ಕೊಡುಗೆಯಾದರೂ ಏನು. ಜಿಲ್ಲೆಯ ಕೆರೆಗಳು ತುಂಬಿರುವುದು ಕೆಸಿ ವ್ಯಾಲಿ ನೀರಿನಿಂದ ಅಲ್ಲ, ಮಳೆಯಿಂದಾಗಿ ತುಂಬಿವೆ.
-ಛಲವಾದಿ ನಾರಾಯಣಸ್ವಾಮಿ, ಎಂಎಲ್ಸಿ

Follow Us:
Download App:
  • android
  • ios