Asianet Suvarna News Asianet Suvarna News

Pancharatna Rathayatra: ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಿರಿ: ಎಚ್ಡಿಕೆ ವಾಗ್ದಾಳಿ

ರೈತರ ಬಗ್ಗೆ ಕಾಳಜಿ ಇಲ್ಲದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕರ್ನಾಟಕದಿಂದ ಕಿತ್ತು ಹೊರಗೆ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದ್ದಾರೆ. ಅವರು ಮಂಗಳವಾರ ತಾಲೂಕಿನ ರೋಜರನಹಳ್ಳಿ ಕ್ರಾಸ್‌ನಲ್ಲಿ ಪಂಚರತ್ನ ಯೋಜನೆಯ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

JDS Leader HD Kumaraswamy Slams On BJP And Congress At Kolar gvd
Author
First Published Nov 23, 2022, 11:25 AM IST

ಶ್ರೀನಿವಾಸಪುರ (ನ.23): ರೈತರ ಬಗ್ಗೆ ಕಾಳಜಿ ಇಲ್ಲದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕರ್ನಾಟಕದಿಂದ ಕಿತ್ತು ಹೊರಗೆ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗುಡುಗಿದ್ದಾರೆ. ಅವರು ಮಂಗಳವಾರ ತಾಲೂಕಿನ ರೋಜರನಹಳ್ಳಿ ಕ್ರಾಸ್‌ನಲ್ಲಿ ಪಂಚರತ್ನ ಯೋಜನೆಯ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ರೈತಾಪಿ ಜನ ಸ್ವಾಭಿಮಾನದಿಂದ ಬದುಕಲು ನನ್ನ ಹೋರಾಟಕ್ಕೆ ಬೆಂಬಲ ನೀಡಿ ಒಂದು ಬಾರಿಗೆ ಸಂಪೂರ್ಣವಾದ ಅಧಿ​ಕಾರ ಜಾತ್ಯತೀತ ಜನತಾದಳಕ್ಕೆ ನೀಡಿ ಎಂದು ಮನವಿ ಮಾಡಿದರು.

ತೆಲಂಗಾಣದಲ್ಲಿ ಅಲ್ಲಿನ ಕೆಸಿಆರ್‌ ಸರ್ಕಾರ ರೈತಬಂಧು ಯೋಜನೆಯನ್ನು ಜಾರಿಗೆ ತಂದು ರೈತರನ್ನು ಹುರಿದುಂಬಿಸಿ ಪ್ರತಿವರ್ಷ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ನಾನು ಅ​ಧಿಕಾರಕ್ಕೆ ಬಂದರೆ ಕರ್ನಾಟಕದಲ್ಲೂ ಕೃಷಿಯನ್ನು ಉಳಿಸಲು ಕಾರ್ಯಕ್ರಮ ರೂಪಿಸಿ ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತೇನೆ ಎಂದರು. ಕೋಲಾರದ ರೈತರಿಗೆ ಎತ್ತಿನ ಹೊಳೆ ನೀರು ಹರಿಸುತ್ತೇನೆ ಎಂದವರು ಬೆಂಗಳೂರಿನ ಕೊಳಚೆ ನೀರು ತಂದು ಹರಿಸುತ್ತಿದ್ದಾರೆ. ಇಲ್ಲಿನ ಬೆಳೆಗಳು ಹಾಳಾಗುತ್ತಿದೆ ಬಂದಂತಹ ಬೆಳೆಗೆ ದರ ಸಿಗುತ್ತಿಲ್ಲ ಎಂದು ಪರೋಕ್ಷವಾಗಿ ಶಾಸಕ ರಮೇಶಕುಮಾರ್‌ ಹೆಸರು ಪ್ರಸ್ತಾಪಿಸದೆ ಮಾಜಿ ಸಿಎಂ ಆರೋಪಿಸಿದರು.

ನಾಗಮಂಗಲ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಚಲುವರಾಯಸ್ವಾಮಿ

ಇಲ್ಲಿನ ಮಹಾನುಭಾವ ವಿಧಾನಸಭೆಯಲ್ಲಿ ಗಂಟಗಟ್ಟಲೆ ಉದ್ದುದ್ದವಾಗಿ ಭಾಷಣ ಮಾಡುತ್ತಾರೆ. ಇಲ್ಲಿನ ಬಂಗವಾದಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಸಮಸ್ಯೆ ಬಗೆಹರಿಸದ ಕಾರಣ ಅಲ್ಲಿನ ಮಕ್ಕಳು ನೆರಳಲ್ಲಿ ಕೂತು ಪಾಠ ಕಲಿಯುತ್ತಿದ್ದು ಆ ಶಾಲೆಯ ಮಕ್ಕಳು ನನ್ನಲ್ಲಿ ಬಂದು ಮನವಿ ಸಲ್ಲಿಸುತ್ತಾರೆ ಎಂದು ಟೀಕಿಸಿದರು.

ಕ್ರಿಮಿನಲ್‌ ಹಿನ್ನಲೆ ಇಲ್ಲದ ಪ್ರಾಮಾಣಿಕನನ್ನು ಗೆಲ್ಲಿಸಿ: ಅ​ಧಿಕಾರಕ್ಕೆ ಬಂದ ಕೆಲವೆ ಗಂಟೆಗಳ ಅವ​ಧಿಯಲ್ಲಿ ಸ್ತಿ್ರೕ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದ ಅವರು ಶ್ರೀನಿವಾಸಪುರದ ಮಾಜಿ ಶಾಸಕ ವೆಂಕಟಶಿವಾರೆಡ್ದಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಅವರನ್ನು ನನ್ನ ಸರ್ಕಾರದಲ್ಲಿ ಮಂತ್ರಿಮಾಡುವ ಜವಾಬ್ದಾರಿ ನನ್ನದು ಎಂದ ಅವರು ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನಲೆ ಇಲ್ಲ ಅಂತಹ ಪ್ರಾಮಾಣಿಕ ವ್ಯಕ್ತಿಯನ್ನು ಅ​ಧಿಕಾರಕ್ಕೆ ತನ್ನಿ ಎಂದರು. ಮಾವಿನ ಬೆಳೆ ನಷ್ಟಪರಿಹಾರ ಹಾಗೂ ಬೆಳೆ ವಿಮೆ ಕೇಳಲು ಹೋದ ರೈತರ ಮೇಲೆ ಕೇಸ್‌ ಹಾಕಿಸುವ ಬಗ್ಗೆ ಬೆದರಿಸುವ ಕೋಲಾರ ಜಿಲ್ಲಾ​ಧಿಕಾರಿ ಧೋರಣೆಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಧ್ವಜಾರೋಹಣ: ಸುಗಟೂರಿನಿಂದ ರೊಜರ್ನಹಳ್ಳಿ ಕ್ರಾಸ್‌ಗೆ ಬರುವಾಗ ದಾರಿ ಮಧ್ಯೆ ಮಾಸ್ತೇನಹಳ್ಳಿ ಗ್ರಾಮದಲ್ಲಿ ಯುವಕರು ಆಯೋಜಿಸಿದ್ದ ಗ್ರಾಮದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾವುಟದ ಧ್ವಜಾರೋಹಣವನ್ನು ಕುಮಾರಸ್ವಾಮಿ ನೆರವೇರಿಸಿದರು. ರೋಜರನಹಳ್ಳಿ ಕ್ರಾಸ್‌ನಲ್ಲಿ ಜೆಡಿಎಸ್‌ ಕಾರ್ಯಕರ್ತರು ಭಾರಿ ಗಾತ್ರದ ಸೇಬು ಹಾಗೂ ಕಿತ್ತಳೆ ಹಣ್ಣಿನ ಹಾರ ಹಾಕಿದರು.

ಜೆಡಿಎಸ್‌ನಿಂದ ಒಕ್ಕಲಿಗರ ಉಳಿವು: ಶಾಸಕ ಡಿ.ಸಿ.ತಮ್ಮಣ್ಣ

ಕಾರ್ಯಕ್ರಮದಲ್ಲಿ ನಿಖಿಲ್‌ ಕುಮಾರಸ್ವಾಮಿ, ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿಚೌಡರೆಡ್ಡಿ,ಮಾಜಿ ಶಾಸಕ ವೆಂಕಟಶಿವಾರೆಡ್ದಿ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ ಮಾಜಿ ಸದಸ್ಯ ಇಂದಿರಾಭವನ್‌ ರಾಜಣ್ಣ ಮಾಲೂರು ರಾಮೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ್‌, ಸಹಕಾರಿ ಯೂನಿಯನ್‌ ನಿರ್ದೇಶಕ ರಾಮಚಂದ್ರೇಗೌಡ, ಜಿಡಿಎಸ್‌ ರಾಜ್ಯ ಉಪಾಧ್ಯಕ್ಷ ಭಿಮಗುಂಟಪಲ್ಲಿಶಿವಾರೆಡ್ಡಿ, ಯುವ ಮುಖಂಡರಾದ ತೆರ್ನಹಳ್ಳಿ ಮಂಜುನಾಥ್‌,ವಳಗೇರನಹಳ್ಳಿ ಶಿವಾರೆಡ್ದಿ,ದಳಸನೂರು ಮಂಜು ಮುಂತಾದವರು ಇದ್ದರು.

Follow Us:
Download App:
  • android
  • ios