Asianet Suvarna News Asianet Suvarna News

ಸದನದಲ್ಲಿ ಸಮಸ್ಯೆ ಚರ್ಚಿಸದೇ ಪಂಚರತ್ನ ರಥಯಾತ್ರೆ ಮಾಡುವ ಶಾಸಕರು: ಚಲುವರಾಯಸ್ವಾಮಿ ಟೀಕೆ

- ಸದನದ ಬಗ್ಗೆ ಲಘುವಾದ ಮಾತು ಸರಿಯಲ್ಲ: ಚಲುವರಾಯಸ್ವಾಮಿ
- ಜನರು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ವೇದಿಕೆ
- ಕುಮಾರಸ್ವಾಮಿರವರು ಸದನಕ್ಕೆ ಗೌರವ ಕುಂದಿಸಬಾರದು

MLAs participate in Pancharat Rathna Yatra without discussing the issue in the Session Sat
Author
First Published Dec 21, 2022, 4:49 PM IST

ಮಂಡ್ಯ (ಡಿ.21): ವಿಧಾನಸಭಾ ಅಧಿವೇಶನದ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿದ್ದವರು ಸದನದ ಬಗ್ಗೆ ಗೌರವವಿಟ್ಟುಕೊಂಡು ಮಾತನಾಡಬೇಕು. ಸದನದ ಗೌರವ ಕುಂದಿಸುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಧಿವೇಶನದಲ್ಲಿ ಭಾಗವಹಿಸುವುದಕ್ಕಿಂತ ಚುನಾವಣೆಯೇ ಮುಖ್ಯ ಎಂದುಕೊಂಡವರಿಗೆ ಏನೂ ಹೇಳಲಾಗದು. ಪಂಚರತ್ನ ರಥಯಾತ್ರೆಯನ್ನು ಮುಂದೆಯೂ ಮಾಡಬಹುದು. ಅಧಿವೇಶನಕ್ಕೆ ಮತ್ತೆ ಅವಕಾಶ ಸಿಗುವುದಿಲ್ಲ. ಸದನದಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಜಾರಿಯಾಗುತ್ತಾ ಎಂದು ಕುಳಿತರೆ ಏನೂ ಆಗೋಲ್ಲ. ಜನರು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ವೇದಿಕೆ ಅದು. ಅಲ್ಲಿ ಶಾಸಕರಾದವರಿಗೆ ಹಕ್ಕೋತ್ತಾಯಗಳನ್ನು ಮಂಡಿಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ಸದನವನ್ನೇ ದೂರುವುದಾದರೆ ನಾವೆಲ್ಲಾ ವಿಧಾನಸಭೆಗೆ ಏಕೆ ಆಯ್ಕೆಯಾಗಬೇಕು. ವಿಧಾನಸಭೆಯಾದರೂ ಏಕಿರಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

Mandya: ಕಳೆದ ನಾಲ್ಕೂವರೆ ವರ್ಷದಲ್ಲಿ ಜನಪರ ಕೆಲಸಗಳು ಆಗಿಲ್ಲ: ಶಾಸಕ ಚಲುವರಾಯಸ್ವಾಮಿ

ಸಮಸ್ಯೆ ಚರ್ಚಿಸದೇ ಯಾತ್ರೆ ಮಾಡುತ್ತಿರುವ ಶಾಸಕರು: ರೈತರು ತಿಂಗಳಿಗೂ ಹೆಚ್ಚು ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ, ಹಾಲಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ, ವಸತಿರಹಿತರಿಗೆ ವಸತಿಯನ್ನು ನೀಡಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸದನದಲ್ಲಿ ದನಿ ಎತ್ತಬೇಕಾದ ಶಾಸಕರು ಪಂಚರತ್ನ ರಥಯಾತ್ರೆಯಲ್ಲಿ ನಿರತರಾಗಿದ್ದರೆ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ. ನಮಗಂತೂ ಅಧಿಕಾರವಿಲ್ಲ. ನಾವು ಸರ್ಕಾರಕ್ಕೆ ಮನವಿ ಕೊಡಬಹುದು ಅಷ್ಟೇ. ಶಾಸಕರಾಗಿರುವವರಿಗೆ ಸದನದಲ್ಲಿ ಮಾತನಾಡುವ ಅಧಿಕಾರವಿದೆ. ಜನರು, ರೈತರ ಕಷ್ಟಗಳನ್ನು ಪ್ರಸ್ತಾಪಿಸುವುದಕ್ಕೆ ಅವಕಾಶವಿದ್ದರೂ ಚುನಾವಣೆಯನ್ನೇ ಪ್ರಧಾನ ಆದ್ಯತೆಯನ್ನಿಟ್ಟುಕೊಂಡು ಕರ್ತವ್ಯವನ್ನು ಮರೆತರೆ ಜನರೇ ಅದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.

Mandya ಚುನಾವಣೆ ವೇಳೆ ಕುಮಾರಸ್ವಾಮಿ ಹೆಚ್ಚು ಬುದ್ಧಿವಂತರಾಗ್ತಾರೆ : ಚಲುವರಾಯಸ್ವಾಮಿ ವ್ಯಂಗ್ಯ

ಕಾಂಗ್ರೆಸ್‌ ಶಾಸಕರು ಸದನ ಬಿಟ್ಟು ಬಂದಿಲ್ಲ: ಚುನಾವಣೆಗೆ ಎಲ್ಲರೂ ಸಿದ್ಧರಾಗಲೇಬೇಕಿದೆ. ಹಾಗಂತ ಕಾಂಗ್ರೆಸ್ ಶಾಸಕರು ಸದನವನ್ನು ಬಿಟ್ಟು ಬಂದಿಲ್ಲ. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಶಾಸಕರು ಸದನದಲ್ಲಿ ಜನರ ಸಮಸ್ಯೆಗಳಿಗೆ ಸದನದಲ್ಲಿ ದನಿಯಾಗುತ್ತಿದ್ದಾರೆ. ಕಳೆದ ಬಾರಿ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಸದನದಲ್ಲಿ ದನಿ ಎತ್ತಿದ್ದರಿಂದಲೇ ಮೈಷುಗರ್ ಕಾರ್ಖಾನೆ ಚಾಲನೆಗೆ ಕಾರಣವಾಯಿತು ಎಂದರು.

Follow Us:
Download App:
  • android
  • ios