Chikkamagaluru News: ಶಾಸಕರ ಕಾರ್ಯಚಟುವಟಿಕೆಗಳಲ್ಲಿ ಮೂಗು ತೂರಿಸಿಲ್ಲ; ಡಿ.ಎನ್.ಜೀವರಾಜ್
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನಾನು ಶಾಸಕರ ದಿನನಿತ್ಯ ಚಟುವಟಿಕೆ ಅಥವಾ ಅವರ ಅನುದಾನದ ಬಗ್ಗೆ ಮೂಗು ತೂರಿಸಿಲ್ಲ. ಆದರೂ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುರುವುದು ವಿಶಾದನೀಯ. ಕ್ಷೇತ್ರದಲ್ಲಿ ಶಾಸಕರ ಹಕ್ಕುಚ್ಯುತಿ ಆಗಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸಮಜಾಯಿಷಿ ನೀಡಿದರು.
ಬಾಳೆಹೊನ್ನೂರು (ಡಿ.30) : ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನಾನು ಶಾಸಕರ ದಿನನಿತ್ಯ ಚಟುವಟಿಕೆ ಅಥವಾ ಅವರ ಅನುದಾನದ ಬಗ್ಗೆ ಮೂಗು ತೂರಿಸಿಲ್ಲ. ಆದರೂ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುರುವುದು ವಿಶಾದನೀಯ. ಕ್ಷೇತ್ರದಲ್ಲಿ ಶಾಸಕರ ಹಕ್ಕುಚ್ಯುತಿ ಆಗಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸಮಜಾಯಿಷಿ ನೀಡಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು, ಪರಾಜಿತ ಅಭ್ಯರ್ಥಿಯಾಗಿ ಶಾಸಕರ ಅನುದಾನಕ್ಕೆ ಎಂದೂ ಸಹ ಕೈಹಾಕಿಲ್ಲ. ಲೋಕೋಪಯೋಗಿ ಇಲಾಖೆ, ಅತಿವೃಷ್ಠಿಯಲ್ಲಿ ಬಿಡುಗಡೆ ಮಾಡಿರುವ ಹಣವನ್ನು ಕೇಳಿಲ್ಲ. ಅವುಗಳೆಲ್ಲವನ್ನೂ ಶಾಸಕ ರಾಜೇಗೌಡರೆ ಕ್ಷೇತ್ರಕ್ಕೆ ನೀಡಿದ್ದು, ಅದರಲ್ಲಿ ಯಾವುದೇ ಹಕ್ಕುಚ್ಯುತಿಯಾಗಿಲ್ಲ. ಕ್ಷೇತ್ರಕ್ಕೆ ಸಿಎಂ ಹಣ ನೀಡಿದ್ದರೆ ಅದು ಮುಖ್ಯಮಂತ್ರಿ ವಿವೇಚನಾ ಕೋಟಾದ ವಿಶೇಷ ಅನುದಾನವಾಗಿದೆ. ಶಾಸಕರ ಅನುದಾನವನ್ನು ಎಲ್ಲೂ ಸಹ ಕೇಳಿಲ್ಲ ಎಂದು ಹೇಳಿದರು.
Chikkamagaluru: ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ
ಶಾಸಕರ ಸಾಮಾನ್ಯ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದರೆ ಅದನ್ನು ಪ್ರಶ್ನೆ ಮಾಡುವ ಎಲ್ಲ ಅಧಿಕಾರ ಶಾಸಕರಿಗಿದೆ. ಕ್ಷೇತ್ರಕ್ಕೆ ವಿಶೇಷ ಅನುದಾನವನ್ನು ತರಲು ಸನ್ನಿವೇಶ ನಿರ್ಮಾಣವಾಗಲು ರಾಜೇಗೌಡ ಅವರೇ ಕಾರಣ. ಅವರು ಶಾಸಕರಾಗುವ ಮೊದಲು ಕೊಪ್ಪದ ಗಾಯತ್ರಿ ಮಂದಿರಕ್ಕೆ .1 ಕೋಟಿ ಅನುದಾನ ಕೊಡಿಸಿದ್ದೇನೆ ಎಂದು ಪ್ರಚಾರ ಗಿಟ್ಟಿಸಿದ್ದರು. ಆ ಹಣವನ್ನು ನಂಬಿ ಗಾಯತ್ರಿ ಮಂದಿರದವರು ವಿವಿಧೆಡೆ ಸಾಲ ಮಾಡಿಕೊಂಡಿದ್ದರು. ಆದರೆ ಹಣ ಬಂದಿರಲಿಲ್ಲ. ಈ ಹಿನ್ನೆಲೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಬಳಿ ನಾನು ಮನವಿ ಸಲ್ಲಿಸಿದಾಗ ಅನುದಾನ ಮಂಜೂರು ಮಾಡಿದ್ದರು.
ನಂತರ ಕ್ಷೇತ್ರದ ವಿವಿಧ ಸಮುದಾಯಗಳ ಭವನ, ದೇವಾಲಯಗಳಿಗೆ ಒಟ್ಟು ರೂ.20 ಕೋಟಿ ವಿಶೇಷ ಅನುದಾನವನ್ನು ಬಿಎಸ್‌ವೈ ಹಾಗೂ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ. ಇದು ಹಕ್ಕುಚ್ಯುತಿಯಲ್ಲಿ ಬರುವುದಿಲ್ಲ. ಈ ಹಣವನ್ನು ಮುಖ್ಯಮಂತ್ರಿಗಳು ಹಣಕಾಸು ಸಚಿವರಾಗಿಯೂ ನೀಡಿದ್ದಾರೆ. ಇದು ಅವರ ವಿವೇಚನೆಗೆ ಬಿಟ್ಟದ್ದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಇದು ಹಕ್ಕುಚ್ಯುತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಕ್ಷೇತ್ರಕ್ಕೆ ಸಿಎಂ ನೀಡಿರುವ ವಿಶೇಷ ಅನುದಾನವನ್ನು ವಾಪಸ್ ಪಡೆಯುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರಾದ ರಮೇಶ್‌ಕುಮಾರ್, ರಾಜೇಗೌಡ ಚರ್ಚೆಯಲ್ಲಿ ಕೋರಿದ್ದಾರೆ. ನಿಮಗೆ ಸಾಧ್ಯವಿದ್ದರೆ ಅನುದಾನ ವಾಪಸ್ ತೆಗೆಸಿಕೊಳ್ಳಿ ಎಂದು ಸವಾಲು ಎಸೆದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಜಿಲ್ಲಾ ಬಿಜೆಪಿ ಉಸ್ತುವಾರಿ ಚನ್ನಬಸಪ್ಪ, ಮುಖಂಡರಾದ ಭಾಸ್ಕರ್ ವೆನಿಲ್ಲಾ, ಮಹಾಬಲರಾವ್, ಟಿ.ಎಂ.ಉಮೇಶ್, ರಾಮಕೃಷ್ಣ ಅಂಬ್ಲೂರು, ಅರುಣ್‌ಕುಮಾರ್, ರಘು ಉಜ್ಜಿನಿ, ಟಿ.ಎಂ.ನಾಗೇಶ್, ಪ್ರಭಾಕರ್ ಪ್ರಣಸ್ವಿ, ಕೆ.ಕೆ.ವೆಂಕಟೇಶ್, ಬಿ.ಜಗದೀಶ್ಚಂದ್ರ ಮತ್ತಿತರರು ಇದ್ದರು.
ರಾಜ್ಯದಲ್ಲಿ ಒತ್ತುವರಿ ಮಾಡಿ ಕಾಫಿ ತೋಟವನ್ನು ಮಾಡಿಕೊಂಡಿರುವುದನ್ನು ಲೀಸ್‌ಗೆ ನೀಡಲು ಕೈಗೊಂಡಿರುವ ರಾಜ್ಯಸರ್ಕಾರದ ನಿರ್ಧಾರ ದಿಟ್ಟವಾಗಿದæ. ವಿಧಾನ ಪರಿಷತ್ತು, ವಿಧಾನಸಭೆ ಎರಡೂ ಕಡೆಗಳಲ್ಲೂ ಈ ವಿಧೇಯಕ ಪಾಸ್ ಆಗಿದೆ. 25 ಎಕರೆವರೆಗಿನ ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದ ಒತ್ತುವರಿ ಕಾಫಿ ಜಮೀನು ಜಾಗವನ್ನು 30 ವರ್ಷಗಳ ಕಾಲ ಲೀಸ್‌ಗೆ ನೀಡಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರ ನಿರ್ಧಾರ ರೈತರ ಪರವಾದದ್ದು
- ಜೀವರಾಜ್. ಸಿಎಂ ರಾಜಕೀಯ ಕಾರ್ಯದರ್ಶಿ
‘ರಾಜೇಗೌಡರಿಗೆ ಕಿರುಕುಳ ನೀಡಲೆಂದೇ ಜೀವರಾಜ್‌ಗೆ ಹುದ್ದೆ ಸೃಷ್ಟಿ’ : ಮಹಮ್ಮದ್ ಹನೀಫ್
ಬಾಳೆಹೊನ್ನೂರು: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕ್ಷೇತ್ರದಲ್ಲಿ ಕಿರುಕುಳ ನೀಡಲೆಂದೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ, ಮಾಜಿ ಶಾಸಕ ಜೀವರಾಜ್ ಅವರಿಗೆ ನೀಡಲಾಗಿದೆ ಎಂದು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಆರೋಪಿಸಿದ್ದಾರೆ. ವಿರೋಧ ಪಕ್ಷದ ಶಾಸಕರಿಗೆ ಸರ್ಕಾರ ಅನುದಾನ ಕೊಡುವಲ್ಲಿ ತಾರತಮ್ಯ ಎಸಗುತ್ತಿದೆ. ಶಾಸಕರಿಗೆ ಸರಿಯಾಗಿ ಅನುದಾನ ನೀಡದೇ ಚುನಾವಣೆಯಲ್ಲಿ ಪರಾಜಿತರಾದವರಿಗೆ ಮುಖ್ಯಮಂತ್ರಿ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ಅವರು ಮೂಲಕ ಅನುದಾನ ನೀಡಿ, ಕಿರುಕುಳ ನೀಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಸಕ ರಾಜೇಗೌಡರ 120 ಕೋಟಿ ಹಣದ ಮೂಲ ಏನು?: ಡಿ.ಎನ್.ಜೀವರಾಜ್
ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಷ್ಟಾಚಾರದ ಪ್ರಕಾರ ಶಾಸಕರಿಗೆ ಆದ್ಯತೆ ನೀಡದೇ ಸರ್ಕಾರ ಇದೆ ಎಂಬ ಕಾರಣಕ್ಕೆ ಸೋತ ಅಭ್ಯರ್ಥಿಗೆ ಮಣೆ ಹಾಕುತ್ತಿರುವುದು ಸರಿಯಲ್ಲ. ಕ್ಷೇತ್ರಕ್ಕೆ ಮಂಜೂರಾದ ಅನುದಾನಗಳನ್ನು ವಾಪಸ್ ಪಡೆಯಲು ಶಾಸಕ ರಾಜೇಗೌಡ ಎಲ್ಲೂ ಸಹ ಹೇಳಿಲ್ಲ. ಶಾಸಕರ ಅನುದಾನ ಪಟ್ಟಿಯಲ್ಲಿ ಮಾಜಿ ಶಾಸಕರ ಹೆಸರು ನಮೂದಾಗಿರುವುದು ಎಷ್ಟರಮಟ್ಟಿಗೆ ಸರಿ? ಕಾರ್ಯಕ್ರಮದಲ್ಲಿ ರಾಜೇಗೌಡರು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದಾಗ ಕ್ಷೇತ್ರಕ್ಕೆ .18 ಕೋಟಿಯನ್ನು ಮಂಜೂರು ಮಾಡಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಬಿದ್ದ ಕೂಡಲೇ ಮಾಜಿ ಶಾಸಕರು ಆ ಎಲ್ಲ ಅನುದಾನಗಳನ್ನು ತಡೆಹಿಡಿಸಿದರು. ಅನಂತರ ಆ ಅನುದಾನ ಶಿಕಾರಿಪುರ ಕ್ಷೇತ್ರಕ್ಕೆ ಹೋಯಿತು. ಕ್ಷೇತ್ರದ ಬಗ್ಗೆ ಕಾಳಜಿ ಇದ್ದವರು ಇಂತಹ ಜನವಿರೋಧಿ ಕಾರ್ಯಗಳನ್ನು ಮಾಡುವುದು ಸಮಂಜಸವೇ ಎಂದು ಪ್ರಶ್ನಿಸಿದ್ದಾರೆ.