Chikkamagaluru: ಡಿ.ಎನ್.ಜೀವರಾಜ್‌ಗೆ ಸವಾಲು ಹಾಕಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ
ರಾಜ್ಯ ರಾಜಕೀಯದಲ್ಲಿ ಆಣೆ ಪ್ರಮಾಣ ಮುಂದುವರೆದಿದ್ದು, ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧದ ಆಸ್ತಿ ಖರೀದಿ ಅವ್ಯವಹಾರ ಆರೋಪ ಪ್ರಕರಣ ಇದೀಗ ಆಣೆ ಪ್ರಮಾಣದವರೆಗೆ ಸಾಗಿದೆ. ಡಿ.ಎನ್ ಜೀವರಾಜ್ ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸವಾಲು ಹಾಕಿದ್ದಾರೆ.
ಚಿಕ್ಕಮಗಳೂರು (ಡಿ.04): ರಾಜ್ಯ ರಾಜಕೀಯದಲ್ಲಿ ಆಣೆ ಪ್ರಮಾಣ ಮುಂದುವರೆದಿದ್ದು, ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧದ ಆಸ್ತಿ ಖರೀದಿ ಅವ್ಯವಹಾರ ಆರೋಪ ಪ್ರಕರಣ ಇದೀಗ ಆಣೆ ಪ್ರಮಾಣದವರೆಗೆ ಸಾಗಿದೆ. ಡಿ.ಎನ್ ಜೀವರಾಜ್ ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸವಾಲು ಹಾಕಿದ್ದಾರೆ. ಟಿ.ಡಿ ರಾಜೇಗೌಡ ಅವರು ದಿ. ಸಿದ್ದಾರ್ಥ್ ಕುಟುಂಬದ ಬಳಿ 211 ಎಕರೆ ಕಾಫಿ ತೋಟ ಖರೀದಿಸಿದ್ದಾರೆ. ಆದರೆ ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆಂದು ಜೀವರಾಜ್ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಾಜೇಗೌಡ, ‘ನಾನು ಕಾನೂನು ಪ್ರಕಾರವೇ ಆಸ್ತಿ ಖರೀದಿ ಮಾಡಿದ್ದೇನೆ.
ಆ ತೋಟ ಕೇವಲ 14 ರಿಂದ 15 ಕೋಟಿ ಬೆಲೆಬಾಳುತ್ತದೆ. ಆದರೆ 270 ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದರೆಂದು ಆರೋಪಿಸುತ್ತಿದ್ದಾರೆ. 15 ಕೋಟಿ 270 ಕೋಟಿಗೂ ವ್ಯತ್ಯಾಸ ಗೊತ್ತಿಲ್ವಾ, ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು. ಇದನ್ನು ನಾನು ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿಯುತ್ತೇನೆ. ನಾನು ಅನ್ಯಾಯ ಮಾಡಿದ್ದರೆ ನನಗೆ ತೊಂದರೆಯಾಗಲಿ. ಇಲ್ಲದಿದ್ದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರೇ ನೋಡಿಕೊಳ್ಳಲಿ. ತಾಕತ್ತಿದ್ದರೆ ಶೃಂಗೇರಿ ಶಾರದಾಂಬೆ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ಬನ್ನಿ. ನೀವೇ ನಿಗದಿ ಮಾಡಿದ ದಿನಾಂಕ, ಸಮಯದಂದು ನಾನು ಬರಲು ಸಿದ್ದನಿದ್ದೇನೆ. ನಾನು ಪ್ರಮಾಣ ಮಾಡುತ್ತೇನೆ ನೀವು ಕೂಡ ಪ್ರಮಾಣ ಮಾಡಿ ಎಂದು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಸವಾಲೆಸೆದರು.
ಸಿದ್ರಾಮುಲ್ಲಾಖಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ
ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು: ಎನ್.ಆರ್.ಪುರದ ಶಭಾನಾ ರಂಜಾನ್ ಟ್ರಸ್ಟ್ ಹೆಸರಿನಲ್ಲಿ ಅಕ್ರಮ ಆಸ್ತಿ ಖರೀದಿಸಲಾಗಿದೆ ಎಂದು ಆರೋಪಿಸಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸೇರಿದಂತೆ ಐವರ ವಿರುದ್ಧ ಬಿಜೆಪಿ ಮುಖಂಡ, ಕೊಪ್ಪ ಪಟ್ಟಣದ ಹೊಸೂರು ದಿನೇಶ್ ಎಂಬುವರು ಬುಧವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಟಿ.ಡಿ.ರಾಜೇಗೌಡರು 2018ರಲ್ಲಿ ಶಾಸಕರಾಗಿದ್ದು, ಆ ವೇಳೆ ಅವರ ವಾರ್ಷಿಕ ಆದಾಯ .34 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಈಗ 2022ರಲ್ಲಿ ಕೃಷಿ ಮತ್ತು ಅವರ ವೈಯಕ್ತಿಕ ಆದಾಯ ಸೇರಿ .40 ಲಕ್ಷಗಳಾಗಿವೆ. ಹೀಗಿದ್ದರೂ, .123 ಕೋಟಿ ರು.ಸಾಲ ತೀರಿಸಿ ಶಭಾನಾ ರಂಜಾನ್ ಎನ್ನುವ ಟ್ರಸ್ಟ್ ಹೆಸರಿನಲ್ಲಿ 266 ಎಕರೆ ಜಮೀನನ್ನು ಖರೀದಿ ಮಾಡಿದ್ದಾರೆ.
Chikkamagaluru: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ
ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕಾಗಲಿ, ಚುನಾವಣಾ ಆಯೋಗಕ್ಕಾಗಲಿ ಮಾಹಿತಿಯನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅವರು ಖರೀದಿಸಿದ ಆಸ್ತಿ ಮೇಲೆ ವಿವಿಧ ಬ್ಯಾಂಕ್‌ಗಳಲ್ಲಿ ಸಾಲವಿತ್ತು. ಇದೀಗ ಶಾಸಕರ ಪತ್ನಿ ಡಿ.ಕೆ.ಪುಷ್ಪ, ಮಕ್ಕಳಾದ ರಾಜ್‌ದೇವ್ ಹಾಗೂ ಅರ್ಪಿತಾ ಯುವರಾಜ್ ಅವರು ತಲಾ ಶೇ.33ರಷ್ಟುಷೇರನ್ನು ಹಂಚಿಕೊಂಡು .123 ಕೋಟಿ ರು.ಸಾಲವನ್ನು ತೀರಿಸಿರುವುದಾಗಿ ಎನ್.ಆರ್.ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಧಾರ ಖುಲಾಸೆ ಮಾಡಿಸಿದ್ದಾರೆ. ಈ ಹಣದ ಮೂಲದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ನಗರದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕಚೇರಿಗೆ ಖುದ್ದು ಹಾಜರಾಗಿ ದಾಖಲೆಗಳ ಸಹಿತ ಶಾಸಕ ಟಿ.ಡಿ.ರಾಜೇಗೌಡ, ಅವರ ಪತ್ನಿ ಪುಷ್ಪಾ, ಮಕ್ಕಳಾದ ರಾಜ್‌ದೇವ್, ಅರ್ಪಿತಾ ಹಾಗೂ ಯುವರಾಜ್ ವಿರುದ್ಧ ದೂರು ಸಲ್ಲಿಸಿದರು.