ಶಾಸಕ ತನ್ವೀರ್‌ ಸೇಠ್‌ ರಾಜಕೀಯ ನಿವೃತ್ತಿ: ಇಬ್ಬರು ಅಭಿಮಾನಿಗಳಿಂದ ಆತ್ಮಹತ್ಯೆಗೆ ಯತ್ನ

ಶಾಸಕ ತನ್ವೀರ್‌ ಸೇಠ್‌ ಅನಾರೋಗ್ಯದ ನೆಪವೊಡ್ಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

MLA Tanveer Seth election politics retirement Two fans attempted suicide sat

ಮೈಸೂರು (ಫೆ.28): ರಾಜ್ಯ ವಿಧಾನಸಭಾ ಚುನಾವನೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಶಾಸಕ ತನ್ವೀರ್‌ ಸೇಠ್‌ ಅನಾರೋಗ್ಯದ ನೆಪವೊಡ್ಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ತನ್ವೀರ್‌ ಸೇಠ್‌ ಅವರ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಶಾಸಕ ತನ್ವೀರ್‌ಸೇಠ್ ಅವರು ಚುನಾವಣೆ ಹೊಸ್ತಿಲಲ್ಲಿ‌ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. ನಾನು ಚುನಾವಣೆಗೆ ನಿಲ್ಲೋಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂಣದೀಪ್ ಸಿಂಗ್ ಸುರ್ಜೇವಾಲಗೆ ಪತ್ರ ಬರೆದಿದ್ದಾರೆ. ಡಿಸೆಂಬರ್‌ನಲ್ಲೇ ಪತ್ರ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅನಾರೋಗ್ಯದ ಕಾರಣ ನೀಡಿ ಚುನಾವಣಾ ರಾಜಕೀಯದಿಂದ ನಿವೃತ್ತಿಗೆ ಮುಮದಾಗಿದ್ದಾರೆ. ಈ ಪತ್ರದ ಬಗ್ಗೆ ಯಾರಿಗೂ ತಿಳಿಯದಂತೆ ಸೂಚನೆ ನೀಡದ್ದರಿಂದ ಶಾಸಕರು ಗೌಪ್ಯವಾಗಿಟ್ಟಿದ್ದರು. 

ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರಾ?: ಸಿದ್ದು ವಿರುದ್ಧ ಹರಿಹಾಯ್ದ ಸಿಎಂ ಬೊಮ್ಮಾಯಿ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ: ಇಂದು ಬೆಳಗ್ಗೆ ತನ್ವೀರ್‌ ಸೇಠ್‌ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಶಾಸಕರ ಮನೆಯ ಬಳಿ ಆಗಮಿಸಿದ ನೂರಾರು ಬೆಂಬಲಿಗರು ಸ್ಪರ್ಧೆ ಮಾಡುವಂತೆ ಆಗ್ರಹಿಸಿದ್ದಾರೆ. ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ. ಈ ವೇಳೆ ಒಬ್ಬ ಅಭಿಮಾನಿ ಮೇ ಮೇಲೆ ಸೀಮೆಎಣ್ಣೆ ಸುರಿದುಕೊಮಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು,  ಪೊಲೀಸರು ಹಾಗೂ ಇತರೆ ಕಾರ್ಯಕರ್ತರು ಅವರ ಮೇಲೆ ನೀರು ಅದ್ದಿದ ಬಟ್ಟೆಗಳನ್ನು ಸುತ್ತಿ ರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಸೂಲ್‌ ಎಂದು ಗುರುತಿಸಲಾಗಿದೆ. ಇನ್ನು ಅಂಗವಿಕಲ ಅಭಿಮಾನಿಯೊಬ್ಬ ತನ್ವೀರ್ ಸೇಠ್‌ಗೆ ಹೂವಿನ ಹಾರ ಹಾಕಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾನೆ. ನೂರಾರು ಬೆಂಬಲಿಗರು ಚುನಾವಣೆ ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ತನ್ವೀರ್ ಕಾಲಿಗೆ ಬಿದ್ದು ಮನವಿ ಮಾಡುತ್ತಿದ್ದಾರೆ.

ಕಟ್ಟಡದ ಮೇಲಿಂದ ಬೀಳಲು ಯತ್ನ: ತನ್ವೀರ್ ಮನೆ ಮೇಲೆ ಹತ್ತಿ ಅಲ್ಲಿಂದ ಬೀಳಲು ಯತ್ನಿಸಿದ ಬೆಂಬಲಿಗ. ಅಜಿತ್ ಸೇಠ್ ಬ್ಲಾಕ್ ಅಧ್ಯಕ್ಷ ಸೈಯದ್ ಇಕ್ಬಾಲ್ ‌ನಿಂದ ಆತ್ಮಹತ್ಯೆ ಯತ್ನ. ಚುನಣಾವೆಗೆ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡುವಂತೆ ಆಗ್ರಹಿಸಿದ ಆತ್ಮಹತ್ಯೆ ಯತ್ನ. ತಕ್ಷಣ ಇಕ್ಬಾಲ್‌ನನ್ನ ತಡೆದ ಪೊಲೀಸರು ಹಾಗೂ ಬೆಂಬಲಿಗರು. ಬೆಂಬಲಿಗರ ನಡೆಯಿಂದ ಕಣ್ಣೀರಾದ ತನ್ವೀರ್‌ಸೇಠ್. ಅಭಿಮಾನಿಗಳ ಮಧ್ಯೆ ಕುಳಿತು ಕಣ್ಣೀರು ಹಾಕುತ್ತಿರುವ ಶಾಸಕ. ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಮಾಡುವ ವರೆಗೆ ಬಿಡದಿರಲು ಅಭಿಮಾನಿಗಳ ಪಟ್ಟು. ಮನೆಯ ಆವರಣದ ಸ್ಥಳದಲ್ಲೇ ತನ್ವೀರ್‌ಗೆ ಕುರ್ಚಿ ಹಾಕಿ ಕೂರಿಸಿದ ಬೆಂಬಲಿಗರು ಸ್ಪರ್ಧೆ ಮಾಡುವಂತೆ ಮನವೊಲಿಕೆ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ಬಂದ್ರೆ ಕಾಂಗ್ರೆಸ್‌ ನಾಯಕರಿಗೆ ಚಳಿಜ್ವರ: ಶ್ರೀರಾಮುಲು

ತನ್ವೀರ್‌ ಸೇಠ್‌ ಹೇಳೋದೇನು.?
ನನಗೆ ಆರೋಗ್ಯ ಚೆನ್ನಾಗಿಲ್ಲ, ಚುನಾವಣೆಗೆ ನಿಲ್ಲಲ್ಲ. ಅದೇ ಕಾರಣಕ್ಕೆ ಚುನಾವಣಾ ರಾಜಕೀಯ ನಿವೃತ್ತಿ ಬಯಸಿದ್ದೇನೆ. ಜನ ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನರಸಿಂಹ ರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ನನಗೆ ಹಲವಾರು ಅವಕಾಶ ನೀಡಿದೆ. ಯಾವುದೇ ಬೇಸರ ಇಲ್ಲ. ಬೇರಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಇಲ್ಲಿ ನಾಯಕ ತಾನೇ ಉದ್ಭವ ಆಗುವುದಿಲ್ಲ. ಪರ್ಯಾಯ ನಾಯಕರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ನನ್ನ ನಿರ್ಧಾರ. ವರಿಷ್ಠರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನನ್ನ‌ ಸಹಮತ. ಇನ್ನು 4 ದಿನಗಳಲ್ಲಿ ನಾನು ತೀರ್ಮಾನ ಮಾಡುತ್ತೇನೆ.
- ಶಾಸಕ ತನ್ವೀರ್ ಸೇಠ್

Latest Videos
Follow Us:
Download App:
  • android
  • ios