ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಒಂದಾಗಿದ್ದಾರೆ. ದಿನವೂ ಕಚ್ಚಾಡುತ್ತಿದ್ದಾರೆ. ಒಡೆದ ಮನೆಯಂತಾಗಿರುವ ಕಾಂಗ್ರೆಸ್‌ ನಾಯಕರ ನಾಟಕ ಜನರು ಈ ಬಾರಿ ಬಂದ್‌ ಮಾಡಲಿದ್ದಾರೆ: ಸಚಿವ ಬಿ. ಶ್ರೀರಾಮುಲು 

ಹೊಸಪೇಟೆ(ಫೆ.28): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಕಾಂಗ್ರೆಸ್‌ ನಾಯಕರಿಗೆ ಚಳಿಜ್ವರ ಬರುತ್ತದೆ. ಮೋದಿ ಅವರ ಸುನಾಮಿಗೆ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ಒಂದಾಗಿದ್ದಾರೆ. ದಿನವೂ ಕಚ್ಚಾಡುತ್ತಿದ್ದಾರೆ. ಒಡೆದ ಮನೆಯಂತಾಗಿರುವ ಕಾಂಗ್ರೆಸ್‌ ನಾಯಕರ ನಾಟಕ ಜನರು ಈ ಬಾರಿ ಬಂದ್‌ ಮಾಡಲಿದ್ದಾರೆ ಎಂದರು.

ಚುನಾವಣೆ ಹಿನ್ನಲೆ ಸಚಿವ ಆನಂದ ಸಿಂಗ್ ಮಾಸ್ಟರ್ ಪ್ಲಾನ್!

ಮತ್ತೊಮ್ಮೆ ಅಧಿಕಾರಕ್ಕೆ:

ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ, ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಮೋದಿಯವರ ಕಾರ್ಯವೈಖರಿಯಿಂದ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಗಣಿಗಾರಿಕೆ ಮಾಡುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂಡೂರಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರಿಗೆ ಮಾಡೋಕೆ ಕೆಲಸವಿಲ್ಲ. ಈವರೆಗೂ ಸಂಡೂರಿನಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ, ಗೆದ್ದಿರುವ ಕಾಂಗ್ರೆಸ್‌ ಏನು ಅಭಿವೃದ್ಧಿ ಮಾಡಿದೆ. ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಮತ್ತೊಮ್ಮೆ ಗೆಲ್ಲಿಸಿ ಅಭಿವೃದ್ಧಿಯಲ್ಲಿ ವಿಜಯನಗರ ನಕಾಶೆ ಬದಲಿಸುವೆ: ಸಚಿವ ಆನಂದ್‌ ಸಿಂಗ್‌

ಕಾಂಗ್ರೆಸ್ಸಿನವರಿಗೆ ನಿದ್ದೆ ಇಲ್ಲ:

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದು, ಅಮಿತ್‌ ಶಾ ಅವರು ಬಳ್ಳಾರಿಗೆ ಬಂದ ಹಿನ್ನೆಲೆ ಕಾಂಗ್ರೆಸ್ಸಿನವರಿಗೆ ನಿದ್ದೆ ಬಂದಿಲ್ಲ. ನಾವು ಜನರ ಸೇವೆಗಾಗಿ ಎಲ್ಲೆಡೆ ತಿರುಗಾಡುತ್ತಿದ್ದೇವೆ. ಗಣಿಗಾಗಿ ಸಂಡೂರು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬುದು ಶುದ್ಧ ಸುಳ್ಳು, ಮೋದಿ, ಅಮಿತಾ ಶಾ ಅವರು ಕರ್ನಾಟಕದ ಎಲ್ಲೆಡೆ ಆಗಮಿಸುತ್ತಾರೆ. ಬಳ್ಳಾರಿಗೆ ಪ್ರಧಾನಿ ಬರುವುದು ನಿಮ್ಮ ಖಚಿತವಾಗಿಲ್ಲ ಎಂದರು.

ಬಳ್ಳಾರಿಯಿಂದಲೇ ಸ್ಪರ್ಧೆ:

ಗದಗ ಸೇರಿದಂತೆ ಹಲವು ಕಡೆ ಸ್ಪರ್ಧೆ ಮಾಡಲು ಜನರು ಬೇಡಿಕೆ ಇಟ್ಟಿದ್ದಾರೆ. ಆದರೆ, ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧೆ ಮಾಡುವೆ. ಸಂಡೂರು, ಬಳ್ಳಾರಿ ಗ್ರಾಮಾಂತರ ಎಂದು ಹೇಳಿಕೆ ನೀಡಿದ್ದೆ. ಇನ್ನೂ ಅಂತಿಮವಾಗಿಲ್ಲ. ಈ ಬಾರಿ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧಿಸುವೆ ಎಂದರು.